ಬಿಹಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರಗಳಲ್ಲಿ ಅಭ್ಯರ್ಥಿ ಬದಲು ಹಾಗೂ ಮೋಸಕ್ಕೆ ಸಂಬಂಧಿಸಿದ ದೂರುಗಳು ದಾಖಲಾಗಿವೆ.
ನವದೆಹಲಿ: ನೀಟ್-ಯುಜಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಮಹತ್ವದ ಬೇಟೆ ಆಡಿದ್ದು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ಟ್ರಂಕ್‌ನಿಂದ ಪ್ರಶ್ನೆಪತ್ರಿಕೆ ಕದ್ದ ಒಬ್ಬ ಆರೋಪಿ ಸೇರಿ ಇಬ್ಬರನ್ನು ಮಂಗಳವಾರ ಬಂಧಿಸಿದೆ. ಬಂಧಿತರನ್ನು ಪಟನಾದ ಎಂಜಿನಿಯರ್ ಪಂಕಜ್ ಕುಮಾರ್ ಹಾಗೂ ಜಾರ್ಖಂಡ್‌ನ ಹಜಾ಼ರಿಬಾಗ್ ನಿವಾಸಿ ರಾಜು ಸಿಂಗ್ ಎಂದು ಗುರುತಿಸಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 14ರಕ್ಕೆ ಏರಿಕೆಯಾಗಿದೆ.
ಜಮ್ಷೆಡ್‌ಪುರ ಎನ್‌ಐಟಿಯಲ್ಲಿ 2017ರಲ್ಲಿ ಸಿವಿಲ್ ಎಂಜಿನಿಯರಿಂಗ್ ಮಾಡಿದ್ದ ಪಂಕಜ್, ಹಜಾ಼ರಿಬಾಗ್‌ನ ಪರೀಕ್ಷಾ ಸಂಸ್ಥೆಯ ಟ್ರಂಕ್‌ನಿಂದ ಪ್ರಶ್ನೆಪತ್ರಿಕೆ ಕದ್ದಿದ್ದ. ಈ ಪ್ರಶ್ನೆಪತ್ರಿಕೆಗಳನ್ನು ಹಂಚಲು ರಾಜು ಸಹಕರಿಸಿದ್ದ ಎಂದು ಹೇಳಲಾಗಿದೆ.
undefined
ಬಿಹಾರದಲ್ಲಿ ನೆಟ್ ತನಿಖೆಗೆ ತೆರಳಿದ್ದ ಸಿಬಿಐ ಟೀಂ ಮೇಲೇ ಭಾರಿ ದಾಳಿ!
ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಹಲವು ಕಡೆಗಳಲ್ಲಿ ಎಫ್‌ಐಆರ್ ದಾಖಲಾಗಿವೆ. ಬಿಹಾರದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರಗಳಲ್ಲಿ ಅಭ್ಯರ್ಥಿ ಬದಲು ಹಾಗೂ ಮೋಸಕ್ಕೆ ಸಂಬಂಧಿಸಿದ ದೂರುಗಳು ದಾಖಲಾಗಿವೆ.
ಜು.20ರ ನಂತರ ಕೌನ್ಸೆಲಿಂಗ್ ಆರಂಭದ ನಿರೀಕ್ಷೆ
ಯುಜಿ ಕೌನ್ಸೆಲಿಂಗ್‌ಗೆ ಸಂಬಂಧಿಸಿದಂತೆ ಸೀಟುಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಎಲ್ಲಾ ಕಾಲೇಜುಗಳಿಗೆ ಆರೋಗ್ಯ ಸಚಿವಾಲಯ ಮಂಗಳವಾರ ಸೂಚನೆ ನೀಡಿದೆ. ಜುಲೈ 20 ರೊಳಗೆ ವೈದ್ಯಕೀಯ ಸೀಟುಗಳ ಪಟ್ಟಿಯನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿದೆ. ಹೀಗಾಗು ಜು.20ರ ನಂತರ ಕೌನ್ಸೆಲಿಂಗ್ ಆರಂಭದ ನಿರೀಕ್ಷೆ ಇದೆ.
ನೀಟ್ ಪರೀಕ್ಷಾ ಅಕ್ರಮ : ಪ್ರತಿಭಟಿಸುತ್ತಿದ್ದಾಗಲೇ ಸಂಸತ್‌ನಲ್ಲಿ ಕುಸಿದು ಬಿದ್ದ ಕಾಂಗ್ರೆಸ್ ಸಂಸದೆ