ತಮಿಳುನಾಡಿನಲ್ಲಿ ಎನ್‌ಡಿಎ ಸೀಟು ಹಂಚಿಕೆ ಫೈನಲ್, 234 ಸ್ಥಾನ ಪೈಕಿ ಬಿಜೆಪಿಗೆ ಸಿಕ್ಕಿದ್ದು 27 ಸೀಟು ಮಾತ್ರ

Published : Mar 23, 2026, 04:31 PM ISTUpdated : Mar 23, 2026, 04:32 PM IST
annamalai

ಸಾರಾಂಶ

ತಮಿಳುನಾಡಿನಲ್ಲಿ ಎನ್‌ಡಿಎ ಸೀಟು ಹಂಚಿಕೆ ಫೈನಲ್, 234 ಸ್ಥಾನ ಪೈಕಿ ಬಿಜೆಪಿಗೆ ಸಿಕ್ಕಿದ್ದು 27 ಸೀಟು ಮಾತ್ರ, ಎಐಎಡಿಎಂಕೆ ಭಾರಿ ಮೇಲುಗೈ ಸಾಧಿಸಿದೆ. ಚುನಾವಣಾ ಆರಂಭಕ್ಕೂ ಮೊದಲೇ ಬಿಜೆಪಿ ಕಾರ್ಯಕರ್ತರು ನಿರಾಸೆ ಅನುಭವಿಸಿದ್ದಾರೆ.

ಚೆನ್ನೈ (ಮಾ.23) ಪಂಚ ರಾಜ್ಯ ಚುನಾವಣೆಗಳ ರಾಜ್ಯಗಳಲ್ಲಿ ಎನ್‌ಡಿಎಂ ಮೈತ್ರಿ ಪಕ್ಷಗಳ ಸೀಟು ಹಂಚಿಕೆ ಮಾತುಕತೆ ತೀವ್ರಗೊಂಡಿದೆ. ಇದೀಗ ತಮಿಳುನಾಡಿನಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳ ಸಭೆ ನಡೆಸಿ ಸೀಟು ಹಂಚಿಕೆ ಅಂತಿಮಗೊಳಿಸಿದೆ. 234 ಸ್ಥಾನಗಳ ಪೈಕಿ ಬಿಜಿಪಿ ಸ್ಪರ್ಧೆ ಮಾಡಲು ಸಿಕ್ಕಿದ ಸೀಟು ಕೇವಲ 27 ಮಾತ್ರ. ಅಣ್ಣಾಮಲೈ ತಮಿಳುನಾಡಿನಲ್ಲಿ ಬಿರುಗಾಳಿ ಎಬ್ಬಿಸಿದ್ದರು. ತಮಿಳುನಾಡಿನಲ್ಲಿ 2026ರ ಚುನಾವಣೆಯಲ್ಲೇ ಬಿಜೆಪಿ ಅಧಿಕಾರಕ್ಕೆ ಬರಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಅಷ್ಟರಲ್ಲೇ ತಮಿಳುನಾಡು ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಕೆಳಗಿಳಿಯಬೇಕಾಯಿತು. ಎಐಎಡಿಎಂಕೆ ಜೊತೆಗಿನ ಮೈತ್ರಿ ಮುನ್ನಲೆಗೆ ಬಂದಿತ್ತು. ಇದೀಗ ಎಐಎಡಿಎಂಕೆ ಬಹುಪಾಲು ಪಡೆದುೊಂಡಿದೆ.

ಎಐಎಡಿಎಂಗೆ 178 ಸೀಟು ಹಂಟಿಕೆ

ಎನ್‌ಡಿಎ ಮೈತ್ರಿ ಪಕ್ಷಗಳ ಪೈಕಿ ಎಐಎಡಿಎಂಕೆ 178 ಸೀಟು ಪಡೆಯುವಲ್ಲಿ ಯಶಸ್ವಿಯಾಗಿದೆ. ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸೀಟು ಹಂಚಿಕೆಯಲ್ಲಿ ಮೇಲುಗೈ ಸಾಧಿಸಿದೆ. ಡಿಎಂಕೆ ವಿರುದ್ದ ಎದ್ದಿರುವ ಆಡಳಿತ ವಿರೋಧಿ ಅಲೆಯನ್ನು ಎಐಡಿಎಂಕೆ ಬಳಸಿಕೊಳ್ಳಲಿದೆ ಎಂದಿದೆ. ತಮಿಳುನಾಡಿಲ್ಲಿ ಗರಿಷ್ಠ ಸೀಟಿನೊಂದಿಗೆ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದಿದೆ.

ತಮಿಳುನಾಡಿನಲ್ಲಿ ಎನ್‌ಡಿಎ ಮೈತ್ರಿಯ ಯಾವ ಪಕ್ಷಗಳಿಗೆ ಎಷ್ಟೆಷ್ಟು ಸ್ಥಾನ

ತಮಿಳುನಾಡಿನಲ್ಲಿ ಬಿಜೆಪಿ ಪಕ್ಷಕ್ಕೆ ಕೇವಲ 27 ಸೀಟು ಹಂಚಿಕೆಯಾಗಿದ್ದರೆ, ಎಐಎಡಿಎಂಕೆಗೆ 178 ಸೀಟುಗಳು ಹಂಚಿಕೆಯಾಗಿದೆ. ಇನ್ನು ಪಿಎಂಕೆ ಪಾರ್ಟಿಗೆ 18 ಸೀಟುಗಳನ್ನು ನೀಡಲಾಗಿದ್ದರೆ, ಎಎಂಎಂಕೆ ಪಕ್ಷಕ್ಕೆ 11 ಸೀಟು ಹಂಚಿಕೆ ಮಾಡಲಾಗಿದೆ.

ಕಳೆದೆ ಚುನಾವಣೆಯಲ್ಲಿ ಎಐಎಡಿಎಂಕೆ 179 ಸೀಟು ಪಡೆದುಕೊಂಡು ಸ್ಪರ್ಧಿಸಿತ್ತು. ಈ ಪೈಕಿ 66 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 2021ರಲ್ಲಿ ಬಿಜೆಪಿ 20 ಸ್ಥಾನದಲ್ಲಿ ಸ್ಪರ್ಧಿಸಿತ್ತು. ಈ ಪೈಕಿ ಕೇವಲ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಈ ಬಾರಿ ಬಿಜೆಪಿ 30 ಸ್ಥಾನದಲ್ಲಿ ಸ್ಪರ್ಧಿಸಲು ನಿರ್ಧರಿಸಿತ್ತು. ಆದರೆ ಸೀಟು ಹಂಚಿಕೆಯಲ್ಲಿ 27 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ತಮಿಳನಾಡು ಚುನಾವಣೆ

ಈ ಬಾರಿ ತಮಿಳುನಾಡು ಚುನಾವಣ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ತಮಿಳುನಾಡಿನಲ್ಲಿ ಎಪ್ರಿಲ್ 23ರಂದು ಮತದಾನ ನಡೆಯಲಿದೆ. ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮತ ಎಣಿಕೆಗೆ ಮೇ 4 ರಂದು ನಡೆಯಲಿದೆ. ಇನ್ನು ತಮಿಳುನಾಡು ಜೊತೆಯಲ್ಲೇ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಚುನಾವಣೆ ನಡೆಯಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಧ್ಯಾಹ್ನದ ವೇಳೆಗೆ ಪಾತಾಳಕ್ಕಿಳಿದ ಬಂಗಾರದ ಬೆಲೆ! ಈಗ ಒಂದು ಗ್ರಾಮ್‌ಗೆ ಒಂದು ಸಾವಿರ ರುಪಾಯಿ ಕುಸಿತ!
ಅಪಘಾತದಲ್ಲಿ ಮಹಿಳೆ ಸಾವು, ಕಾರು ಗುದ್ದಿದ ಆರೋಪಿಯ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್