ಚಿಕಿತ್ಸೆಗೆ ಬಂದ ಯುವತಿಗೆ ಅರಿವಳಿಕೆ ಇಂಜೆಕ್ಷನ್ ಕೊಟ್ಟು 4 ತಿಂಗಳು ರೇ*ಪ್! ಡಾ.ಖಾನ್ ಅರೆಸ್ಟ್

Published : Mar 23, 2026, 02:07 PM IST
Rape

ಸಾರಾಂಶ

ಚಿಕಿತ್ಸೆಗೆ ಬಂದ ಯುವತಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ನಾಲ್ಕು ತಿಂಗಳ ಕಾಲ ಅತ್ಯಾ*ಚಾರ ಎಸಗಿದ ವೈದ್ಯನನ್ನು ಬಂಧಿಸಲಾಗಿದೆ. ಆರೋಪಿ, ಯುವತಿಯ ಅಶ್ಲೀಲ ಫೋಟೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು ಮತ್ತು ರೆಸಾರ್ಟ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ.

ಇಂದೋರ್: ಮಧ್ಯಪ್ರದೇಶದ ಮ್ಹೋವ್ ಜಿಲ್ಲೆಯಿಂದ ಒಂದು ಆಘಾತಕಾರಿ ಘಟನೆ ವರದಿಯಾಗಿದೆ. ಯುವತಿಯೊಬ್ಬಳಿಗೆ ಬ್ಲ್ಯಾಕ್‌ಮೇಲ್ ಮಾಡಿ, ನಾಲ್ಕು ತಿಂಗಳ ಕಾಲ ಅತ್ಯಾ*ಚಾರ ಎಸಗಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ, ಯುವತಿಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಂಡು ಪದೇ ಪದೇ ಈ ಕೃತ್ಯ ಎಸಗುತ್ತಿದ್ದನು ಎಂದು ವರದಿಯಾಗಿದೆ. ಅಚ್ಚರಿ ಅಂದ್ರೆ, ಈತ ವೃತ್ತಿಯಲ್ಲಿ ವೈದ್ಯನಾಗಿದ್ದು, ಸಂತ್ರಸ್ತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ರೇ*ಪ್ ಮಾಡುತ್ತಿದ್ದನು.

ರೆಸಾರ್ಟ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾಮುಕ

ಭಾನುವಾರ ಆರೋಪಿ, ಯುವತಿಯನ್ನು ಪಾತಾಳಪಾನಿಯ ಬೇಲಾಮೋರ್ ರೆಸಾರ್ಟ್‌ಗೆ ಕರೆದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಹಿಂದೂ ಸಂಘಟನೆಯೊಂದಕ್ಕೆ ಮಾಹಿತಿ ಸಿಕ್ಕಿದ್ದು, ಸಂಘಟನೆಯ ಕಾರ್ಯಕರ್ತರು ರೆಸಾರ್ಟ್‌ಗೆ ನುಗ್ಗಿದ್ದಾರೆ. ಅಲ್ಲಿ ಒಂದು ರೂಮ್‌ನಲ್ಲಿ ಆರೋಪಿಯನ್ನು ಸಂತ್ರಸ್ತೆ ಜೊತೆ ಹಿಡಿದಿದ್ದಾರೆ. ಮೊದಲು ಆತನಿಗೆ ಚೆನ್ನಾಗಿ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯ ನಂತರ, ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

ಸಂತ್ರಸ್ತೆ ಹೇಳಿದ್ದೇನು?

"ಸುಮಾರು ನಾಲ್ಕು ತಿಂಗಳ ಹಿಂದೆ ನಾನು ಗುಜರ್‌ಖೇಡಾದಲ್ಲಿರುವ ಡಾ. ಸಯೀದ್ ಖಾನ್ ಕ್ಲಿನಿಕ್‌ಗೆ ಚಿಕಿತ್ಸೆಗಾಗಿ ಹೋಗಿದ್ದೆ. ಆಗ ಡಾಕ್ಟರ್ ನನಗೆ ಒಂದು ಇಂಜೆಕ್ಷನ್ ಕೊಟ್ಟ. ಅದು ಚಿಕಿತ್ಸೆಯದ್ದೇ ಇರಬೇಕು ಅಂದುಕೊಂಡೆ. ಆದರೆ ಅದು ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ಆಗಿತ್ತು. ನಂತರ ಆತ ನನ್ನ ಮೇಲೆ ಅತ್ಯಾ*ಚಾರ ಎಸಗಿ, ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಂಡಿದ್ದನು. ಆ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿ, ಪದೇ ಪದೇ ರೇ*ಪ್ ಮಾಡುತ್ತಿದ್ದ. ನಾನು ವಿರೋಧಿಸಿದರೆ, ಸಮಾಜದಲ್ಲಿ ನಿನ್ನ ಮಾನ ಕಳೆಯುತ್ತೇನೆ ಎಂದು ಬೆದರಿಸುತ್ತಿದ್ದ" ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.

ಆರೋಪಿ ಮನೆಗೆ ಬೆಂಕಿ ಹಚ್ಚಿದ ಜನ

ಆರೋಪಿಯ ಕೃತ್ಯ ಬಯಲಾಗುತ್ತಿದ್ದಂತೆ, ಪ್ರಕರಣ ದೊಡ್ಡದಾಗಿದೆ. ಸಂಜೆ ಹೊತ್ತಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಡಾ. ಸಯೀದ್ ಖಾನ್ ಮನೆಗೆ ಮುತ್ತಿಗೆ ಹಾಕಿದ್ದಾರೆ. ಘೋಷಣೆಗಳನ್ನು ಕೂಗುತ್ತಾ, ಮನೆಗೆ ಕಲ್ಲು ತೂರಿ, ಬೆಂಕಿ ಹಚ್ಚಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಲಭೆಕೋರರನ್ನು ಚದುರಿಸಿದ್ದಾರೆ. ಸದ್ಯ ಆ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಯಾರಾದರೂ ಶಾಂತಿ ಕದಡುವ ಪ್ರಯತ್ನ ಮಾಡಿದರೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಲಿಂ*ಗಿ ಎಂದು ಮೊದಲು ಗೊತ್ತಾಗೋದು ಹೇಗೆ? Mr. Gay World India ನಿಖಿಲ್​ ಓಪನ್​ ಮಾತು

ಇದನ್ನೂ ಓದಿ: ಮೂಡುಬಿದಿರೆ ಮಹಿಳೆಯರನ್ನ ಮಂಚಕ್ಕೆ ಕರೆದ ಇನ್ಸ್‌ಪೆಕ್ಟರ್ ಸಂದೇಶ್ ಕೇಸ್ CID ತನಿಖೆಗೆ ಹಸ್ತಾಂತರ; ಸಚಿವ ಪರಮೇಶ್ವರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಕ್ರವರ್ತಿ ರಾಜೀನಾಮೆ ಬೆನ್ನಲ್ಲೇ HDFC ಬ್ಯಾಂಕ್‌ನಲ್ಲಿ ಬಿರುಗಾಳಿ, ಮಂಡಳಿಯ ಪರಿಶೀಲನೆಗೆ ಸಿಇಒ ಶಶಿಧರ್ ಪ್ರತಿಜ್ಞೆ
ಭಾರತದಲ್ಲಿದೆ ಡೈನೋಸಾರ್‌ಗಿಂತ ಹಳೇ ಪರ್ವತ, ಅಚ್ಚರಿ ವಿಡಿಯೋ ಹಂಚಿದ ಆನಂದ್ ಮಹೀಂದ್ರ