300ರ ಗಡಿ ದಾಟಿದ ಎನ್‌ಡಿಎ- ಬಿಜೆಪಿಗೆ ಸಿಕ್ತು ಪಕ್ಷೇತರರು, ಸ್ಥಳೀಯ ಪಕ್ಷಗಳ ಬೆಂಬಲ

By Mahmad RafikFirst Published Jun 6, 2024, 2:24 PM IST
Highlights

ಚಂದ್ರಬಾಬು ನಾಯ್ದು ಮತ್ತು ನಿತೀಶ್ ಕುಮಾರ್ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ. ಬಹುಮತ ದೊರೆಯದ ಹಿನ್ನೆಲೆ ಬಿಜೆಪಿ ಮುನ್ನೆಚ್ಚರಿಕೆ ಕ್ರಮವಾಗಿ ಸಣ್ಣ ಪಕ್ಷಗಳಿಂದ ಗೆದ್ದವರು ಮತ್ತು ಪಕ್ಷೇತರರ ಬೆಂಬಲ ಪಡೆಯಲು ಪ್ರಯತ್ನಿಸಿದೆ.

ನವದೆಹಲಿ: ಎನ್‌ಡಿಎ ಒಕ್ಕೂಟದ ಸಂಖ್ಯಾಬಲ ಏರಿಕೆಯಾಗಿದೆ. 11 ಪಕ್ಷೇತರರು ಮತ್ತು ಸ್ಥಳೀಯ ಪಕ್ಷಗಳ ಬೆಂಬಲದಿಂದ ಸಂಖ್ಯಾಬಲ 3003ಕ್ಕೆ ಏರಿಕೆಯಾಗಿದೆ. ಈ ಬಾರಿ ಬಿಜೆಪಿ 240 ಸ್ಥಾನಗಳಲ್ಲಿ ಗೆದ್ದಿದ್ದು, ಮ್ಯಾಜಿಕ್ ನಂಬರ್ ತಲುಪುವಲ್ಲಿ ವಿಫಲವಾಗಿದೆ. ಚಂದ್ರಬಾಬು ನಾಯ್ದು ಮತ್ತು ನಿತೀಶ್ ಕುಮಾರ್ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ. ಬಹುಮತ ದೊರೆಯದ ಹಿನ್ನೆಲೆ ಬಿಜೆಪಿ ಮುನ್ನೆಚ್ಚರಿಕೆ ಕ್ರಮವಾಗಿ ಸಣ್ಣ ಪಕ್ಷಗಳಿಂದ ಗೆದ್ದವರು ಮತ್ತು ಪಕ್ಷೇತರರ ಬೆಂಬಲ ಪಡೆಯಲು ಪ್ರಯತ್ನಿಸಿದೆ. ಈ ಪೈಕಿ 11 ನಾಯಕರು ಎನ್‌ಡಿಎಗೆ ಬೆಂಬಲ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆ ಎನ್‌ಡಿಎ ಮಿತ್ರಪಕ್ಷಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಮಿತ್ ಶಾ ಅವರೇ ಪಕ್ಷೇತರರಿಗೆ ಕರೆ ಮಾಡಿ ಬೆಂಬಲ ಕೇಳುತ್ತಿದ್ದಾರೆ ಎಂದು ವರದಿಯಾಗಿದೆ. ಯಾರೆಲ್ಲಾ ಬೆಂಬಲ ನೀಡಿದ್ದಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಎನ್‌ಡಿಎ ಸಭೆ ಬಳಿಕ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಅವಿರೋಧವಾಗಿ ಎನ್‌ಡಿಎ ನಾಯಕರಾಗಿರುವ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು. ಕಳೆದ ಒಂದು ದಶಕದಲ್ಲಿ ನಿಮ್ಮ ದೂರದೃಷ್ಟಿ ನಾಯಕತ್ವದಲ್ಲಿ ನಾವು ಗಮನಾರ್ಹ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ನೋಡಿದ್ದೇವೆ. ಉಜ್ವಲ್ ಭವಿಷ್ಯ ಮತ್ತು ವಿಕಸಿತ ಭಾರತಕ್ಕಾಗಿ ನಿಮ್ಮ ಜೊತೆ ಮುನ್ನಡೆಯುತ್ತವೆ. ಈ ಉದ್ದೇಶಗಳೊಂದಿಗೆ ಎನ್‌ಡಿಎ ದೃಢವಾಗಿ ನಿಂತಿದೆ ಎಂದು ಹೇಳಿದ್ದಾರೆ.

Latest Videos

ಸರ್ಕಾರದಿಂದ ಹೊರಗುಳಿಯುವ ಆಫರ್‌ ನೀಡಿದ ಕಾಂಗ್ರೆಸ್‌, ಇಂಡಿ ಒಕ್ಕೂಟದ ಕೈ ಹಿಡೀತಾರಾ ಟಿಡಿಪಿ, ಜೆಡಿಯು!

ಯಾವ ಪಕ್ಷಕ್ಕೆ ಎಷ್ಟು ಸೀಟ್?

ಭಾರತೀಯ ಜನತಾ ಪಕ್ಷ (ಬಿಜೆಪಿ): 240, ಕಾಂಗ್ರೆಸ್: 99, ಸಮಾಜವಾದಿ ಪಕ್ಷ: 37, ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (ಟಿಎಂಸಿ): 29, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ): 22, ತೆಲುಗು ದೇಶಂ (ಟಿಡಿಪಿ): 16, ಜನತಾದಳ (ಯು):12, ಶಿವಸೇನಾ-ಉದ್ಧವ್ ಠಾಕ್ರೆ ಬಣ: 9, ಎನ್‌ಸಿಪಿಎಸ್‌ಪಿ-ಶರದ್‌ಚಂದ್ರಪವಾರ್: 8, ಶಿವಸೇನಾ-ಎಸ್‌ಹೆಚ್‌ಎಸ್‌: 7, ಲೋಕ್ ಜನಶಕ್ತಿ ಪಕ್ಷ-ರಾಮ್ ವಿಲಾಸ್: 5, ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ-YSRCP: 4, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 4, ಕಮ್ಯುನಿಷ್ಟ ಪಾರ್ಟಿ ಇನ್ ಇಂಡಿಯಾ-ಸಿಪಿಐ (ಎಂ): 4,

ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್, ಆಮ್ ಆದ್ಮಿ ಪಕ್ಷ, ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷಗಳು ತಲಾ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಪಕ್ಷೇತರರು ಏಳು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದಾರೆ. 

ಲೋಕಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ನಟ ಅನುಪಮ್​ ಖೇರ್​ ನಿಗೂಢ ಪೋಸ್ಟ್​!

ಜನತಾದಳ (ಎಸ್), ಸಿಪಿಐ (ಎಂಎಲ್) (ಎಲ್), ವಿದುಥಲೈ ಚಿರುತೈಗಲ್ ಕಚ್ಚಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ),  ರಾಷ್ಟ್ರೀಯ ಲೋಕದಳ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳು ತಲಾ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ

click me!