‘ಮಹಾ’ ಬಿಜೆಪಿಗೆ ಅಜಿತ್ ಪವಾರ್‌ ಹಾಗೂ 40 ಶಾಸಕರ ಬೆಂಬಲ? ಎನ್‌ಸಿಪಿ ನಾಯಕನ ಪ್ರತಿಕ್ರಿಯೆ ಹೀಗಿದೆ..

Published : Apr 18, 2023, 03:09 PM IST
‘ಮಹಾ’ ಬಿಜೆಪಿಗೆ ಅಜಿತ್ ಪವಾರ್‌ ಹಾಗೂ 40 ಶಾಸಕರ ಬೆಂಬಲ? ಎನ್‌ಸಿಪಿ ನಾಯಕನ ಪ್ರತಿಕ್ರಿಯೆ ಹೀಗಿದೆ..

ಸಾರಾಂಶ

ಅಜಿತ್ ಪವಾರ್‌ಗೆ 40 ಶಾಸಕರು ಬೆಂಬಲವಾಗಿ ನಿಂತಿದ್ದು, ಅವರು ತಮ್ಮ ಬೆಂಬಲಿಗ ಶಾಸಕರ ಬಳಿ ಬಿಜೆಪಿಗೆ ಬೆಂಬಲ ಘೋಷಿಸುವ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ ಎಂಬ ವದಂತಿಗಳೂ ಕೇಳಿಬರುತ್ತಿವೆ. ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಗೆ ಹೆಚ್ಚಿನ ಬಲ ತರಲು ಈ ಬೆಳವಣಿಗೆ ನಡೆಯುತ್ತಿದೆ ಎಂದು ಹೇಳಲಾಗಿತ್ತು.

ಮುಂಬೈ (ಏಪ್ರಿಲ್ 18, 2023): ಮಹಾರಾಷ್ಟ್ರದ ರಾಜಕೀಯ ವಲಯ ಮತ್ತೆ ಹೊಸ ತಿರುವು ಪಡೆದುಕೊಳ್ಳುತ್ತಾ ಎಂಬ ಅನುಮಾನಗಳು ಮೂಡುತ್ತಿದೆ. ಆಡಳಿತಾರೂಢ ಬಿಜೆಪಿಯೊಂದಿಗೆ ಎನ್‌ಸಿಪಿ ನಾಯಕ ಅಜಿತ್ ಪವಾರ್‌ ಹತ್ತಿರವಾಗ್ತಿದ್ದಾರೆ ಎಂಬ ತೀವ್ರ ಊಹಾಪೋಹಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲದೆ, ಅಜಿತ್‌ ಪವಾರ್‌ 40 ಶಾಸಕರೊಂದಿಗೆ ಬಿಜೆಪಿ ಸೇರಿಕೊಳ್ಳಲಿದ್ದಾರೆ ಅಥವಾ ಪ್ರಸ್ತುತ ಏಕನಾಥ್‌ ಶಿಂಧೆ ಶಿವಸೇನೆ ಹಾಗೂ ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಅಲ್ಲದೆ, ಅಜಿತ್ ಪವಾರ್‌ ಇಂದು ಮಹಾರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಬೆಂಬಲಿಗ ಶಾಸಕರ ಸಭೆ ಕರೆದಿರುವುದಾಗಿಯೂ ಹೇಳಲಾಗ್ತಿದೆ.

ಅಜಿತ್ ಪವಾರ್‌ಗೆ 40 ಶಾಸಕರು ಬೆಂಬಲವಾಗಿ ನಿಂತಿದ್ದು, ಅವರು ತಮ್ಮ ಬೆಂಬಲಿಗ ಶಾಸಕರ ಬಳಿ ಬಿಜೆಪಿಗೆ ಬೆಂಬಲ ಘೋಷಿಸುವ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಿದ್ದಾರೆ ಎಂಬ ವದಂತಿಗಳೂ ಕೇಳಿಬರುತ್ತಿವೆ. ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿಗೆ ಹೆಚ್ಚಿನ ಬಲ ತರಲು ಈ ಬೆಳವಣಿಗೆ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಇನ್ನು, ಈ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ಶಿಂಧೆ ನೇತೃತ್ವದ ಬಣ ಅಜಿತ್ ಪವಾರ್‌ ಹಾಗೂ ಬೆಂಬಲಿಗರು ಬಿಜೆಪಿಗೆ ಬೆಂಬಲ ಘೋಷಿಸಿದ್ರೆ, ನಾವು ಸರ್ಕಾರದಿಂದ ಹೊರಹೋಗುತ್ತೇವೆ ಎಂದು ಹೇಳಿರುವ ವರದಿಗಳೂ ಬಂದವು.

ಇದನ್ನು ಓದಿ: ಜನ ಮೋದಿ ವರ್ಚಸ್ಸಿಗೆ ವೋಟ್‌ ಹಾಕಿದ್ದಾರೇ ಹೊರತು ಪದವಿ ನೋಡಲ್ಲ: ನಮೋ ಪರ ಬ್ಯಾಟ್‌ ಬೀಸಿದ ಎನ್‌ಸಿಪಿ ನಾಯಕ

ಆದರೆ, ಈ ಎಲ್ಲ ಬೆಳವಣಿಗೆಗಳನ್ನು ಅಜಿತ್‌ ಪವಾರ್‌ ತಳ್ಳಿಹಾಕಿದ್ದು, ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಇಂದು ಶಾಸಕರ ಸಭೆ ಕರೆದಿರುವ ವರದಿಯೂ ಸುಳ್ಳು. ನಾನು ಎನ್‌ಸಿಪಿಯೊಂದಿಗಿದ್ದೇನೆ ಮತ್ತು ನಾನು ಎನ್‌ಸಿಪಿಯಲ್ಲೇ ಇರುತ್ತೇನೆ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಅಲ್ಲದೆ, ಎನ್‌ಸಿಪಿ ಮತ್ತು ಮಹಾರಾಷ್ಟ್ರದ ಪ್ರತಿಪಕ್ಷಗಳ ಮೈತ್ರಿಯಲ್ಲಿ ಬಿರುಕು ಮೂಡಿದೆ ಎಂಬ ವರದಿಗಳನ್ನು ಅಲ್ಲಗಳೆದಿದ್ದಾರೆ. 

.ನಾವೆಲ್ಲರೂ ಎನ್‌ಸಿಪಿ ಜೊತೆ ಇದ್ದೇವೆ, ನಾನು 40 ಶಾಸಕರ ಸಹಿ ತೆಗೆದುಕೊಂಡಿಲ್ಲ, ಇಂದು ನನ್ನನ್ನು ಭೇಟಿ ಮಾಡಲು ಶಾಸಕರು ಬಂದಿದ್ದರೂ, ಇದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಡಿ ಎಂದೂ ಅಜಿತ್ ಪವಾರ್‌ ಹೇಳಿದ್ದಾರೆ. ಅಲ್ಲದೆ, ಈ ಎಲ್ಲ ಊಹಾಪೋಹಗಳಿಂದ  ಎನ್‌ಸಿಪಿ ಕಾರ್ಯಕರ್ತರು "ಗೊಂದಲಕ್ಕೊಳಗಾಗುತ್ತಿದ್ದಾರೆ" ಎಂದೂ ಮಾಜಿ ಉಪ ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಹಾಗೂ, ನಿರುದ್ಯೋಗ, ರೈತರ ಸಮಸ್ಯೆಗಳಂತಹ ಪ್ರಮುಖ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯಲು ಉದ್ದೇಶಪೂರ್ವಕವಾಗಿ ಇಂತಹ ವದಂತಿಗಳನ್ನು ಹಬ್ಬಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಅದಾನಿ ಬೆಂಬಲಕ್ಕೆ ಪವಾರ್‌: ಹಿಂಡನ್‌ಬರ್ಗ್‌ ವರದಿಗೆ ಎನ್‌ಸಿಪಿ ನಾಯಕ ಕಿಡಿ

ಅಲ್ಲದೆ, ತಮ್ಮ ಟ್ವಿಟ್ಟರ್‌ ಬಯೋ ಬದಲಾಯಿಸಲಾಗಿದೆ ಎಂಬುದನ್ನೂ ಅವರು ತಳ್ಳಿಹಾಕಿದ್ದಾರೆ. ಇದಕ್ಕೂ ಮೊದಲು, ಅಜಿತ್ ಪವಾರ್ ಅವರ ಚಿಕ್ಕಪ್ಪ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಬಿಜೆಪಿ ಮೈತ್ರಿಕೂಟಕ್ಕೆ ಸೇರುವ ಊಹಾಪೋಹಗಳಿಗೆ ತೆರೆ ಎಳೆದಿದ್ದರು.

ಅಜಿತ್‌ ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಮುಂದಿನ 15 ದಿನಗಳಲ್ಲಿ "ಎರಡು ದೊಡ್ಡ ರಾಜಕೀಯ ಸ್ಫೋಟಗಳ" ಸುಳಿವು ನೀಡಿದ್ದರು. ಇದು ಅವರ ಸೋದರಸಂಬಂಧಿ ಅಜಿತ್ ಪವಾರ್ ಸುತ್ತ ಸುತ್ತುತ್ತಿರುವ ಊಹಾಪೋಹಗಳನ್ನು ಹೆಚ್ಚಾಗಿಸಿತ್ತು. "15 ದಿನಗಳಲ್ಲಿ ದೊಡ್ಡ ರಾಜಕೀಯ ಸ್ಫೋಟಗಳು" ಎಂಬ ಪ್ರಕಾಶ್ ಅಂಬೇಡ್ಕರ್ ಅವರ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಎನ್‌ಸಿಪಿಯ ಹಿರಿಯ ಸಂಸದೆ ಮತ್ತು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ "ದೆಹಲಿಯಲ್ಲಿ ಒಂದು (ಸ್ಫೋಟ) ಮತ್ತು ಮಹಾರಾಷ್ಟ್ರದಲ್ಲಿ ಒಂದು ಸ್ಫೋಟ)ವಾಗಲಿದೆ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಚುನಾವಣೆ ಸಮೀಪಿಸ್ತಿದ್ದಂತೆ ವಿಪಕ್ಷಗಳಿಗೆ ಮತ್ತೆ ಇವಿಎಂ ಭಯ: ಶರದ್‌ ಪವಾರ್‌ ನಿವಾಸದಲ್ಲಿಂದು ಚರ್ಚೆ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!