
ನವದೆಹಲಿ(ಜೂ.21): ಕೇಂದ್ರ ರಾಜಕೀಯದಲ್ಲಿ ಭಾರಿ ಬದಲಾವಣೆಗಳಾಗುತ್ತಿದೆ. 2024ರ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳು ತಯಾರಿ ಆರಂಭಗೊಂಡಿದೆ. ಇದೀಗ ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ಥರ್ಡ್ ಫ್ರಂಟ್ ಮುಂದಾಗಿದೆ. ಇದಕ್ಕೆ ಚುನಾವಣಾ ರಣನೀತಿಗಾರ ಪ್ರಶಾಂತ್ ಕಿಶೋರ್, NCP ಮುಖ್ಯಸ್ಥ ಶರದ್ ಪವಾರ್ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಮಾತುಕತೆ ಬೆನ್ನಲ್ಲೇ ಶರದ್ ಪವಾರ್ ನಾಳೆ ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ.
ಮೋದಿಗೆ ಎದುರಾಳಿ ಸೃಷ್ಟಿ?: ಪವಾರ್- ಪ್ರಶಾಂತ್ ಕಿಶೋರ್ ಚರ್ಚೆ, ಭಾರೀ ಸಂಚಲನ!.
ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ 2ನೇ ಬಾರಿಗೆ ಶರದ್ ಪವಾರ್ ಭೇಟಿಯಾಗಿದ್ದಾರೆ. ಜೂನ್ 11 ರಂದು ಪವಾರ್ ನಿವಾಸಕ್ಕೆ ತೆರಳಿದ ಪ್ರಶಾಂತ್ ಕಿಶೋರ್ ಮಾತುಕತೆ ನಡೆಸಿದ್ದರು. ಇದೀಗ 2ನೇ ಬಾರಿಗೆ 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಎಡರಂಗ ಪಕ್ಷ ಒಗ್ಗಟ್ಟಾಗಿ ಹೋರಾಡುವ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ.
2024ಕ್ಕೆ ಶರದ್ ಪವಾರ್ ನೇತೃತ್ವದಲ್ಲಿ ಎಡರಂಗ ಪಕ್ಷ ಪ್ರಧಾನಿ ಮೋದಿ ಎದಿರಿಸಲು ಸಜ್ಜಾಗಿದೆ. ಅರ್ಧ ಗಂಟೆಗೂ ಹೆಚ್ಚು ಕಾಲ ಶರದ್ ಪವಾರ್ ಜೊತೆ ಕಿಶೋರ್ ಚರ್ಚೆ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಗೆಲ್ಲಿಸಿದ್ದ ಪ್ರಶಾಂತ್ ಕಿಶೋರ್ ಮಾತುಗಳಲ್ಲಿ ಇದೀಗ ಎರಡಂಗಕ್ಕೆ ಹೆಚ್ಚಿನ ವಿಶ್ವಾಸವಿದೆ. ಹೀಗಾಗಿ ಕಿಶೋರ್ ಮಾತುಕತೆ ಬೆನ್ನಲ್ಲೇ ಶರದ್ ಪವಾರ್ ನಾಳೆ(ಜೂ.22) ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ.
ಸಚಿನ್ ತೆಂಡುಲ್ಕರ್‌ಗೆ ಎಚ್ಚರಿಕೆ ನೀಡಿದ ಶರದ್ ಪವಾರ್‌ಗೆ ಭಾರತೀಯರಿಂದ ಮಂಗಳಾರತಿ!
ನಾಳೆ ಸಂಜೆ 4 ಗಂಟೆಗೆ ಸಭೆ ಕರೆಯಲಾಗಿದೆ. 15 ಕ್ಕೂ ಹೆಚ್ಚಿನ ಪಕ್ಷಗಳಿಗೆ ಶರದ್ ಪವಾರ್ ಆಹ್ವಾನ ನೀಡಿದ್ದಾರೆ. ನಾಳೆ ನಡೆಯುವ ಸಭೆಯಲ್ಲಿ ಹಿರಿಯ ನಾಯಕರಾದ ಫಾರೂಕ್ ಅಬ್ದುಲ್ಲಾ, ಯಶ್ವಂತ್ ಸಿನ್ಹಾ, ಪವನ್ ವರ್ಮಾ, ಸಂಜಯ್ ಸಿಂಗ್, ಡಿ ರಾಜಾ, ನ್ಯಾಯಮೂರ್ತಿ ಎಪಿ ಸಿಂಗ್, ಜಾವೇದ್ ಅಖ್ತರ್, ಕೆಟಿಎಸ್ ತುಳಸಿ ಮತ್ತು ಕರಣ್ ಥಾಪರ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ