ಮದ್ಯ ಬೆಲೆ ಹೆಚ್ಚಿಸಿದ ಸರ್ಕಾರದ ವಿರುದ್ಧ ಪ್ರತಿಭಟನೆ; ಬಾರ್ ಕ್ಲೋಸ್!

By Suvarna NewsFirst Published Jun 21, 2021, 3:54 PM IST
Highlights
  • ಹೊಟೆಲ್, ಬಾರ್‌ಗಳಿಗೆ ಮದ್ಯ ಮಾರಾಟದ ಮೇಲಿನ ದರ ಹೆಚ್ಚಿಸಿದ ಸರ್ಕಾರ
  • ದುಬಾರಿ ಬೆಲೆಗೆ ರೊಚ್ಚಿಗೆದ್ದ ಬಾರ್ ಸಂಘಟನೆಗಳಿಂದ ಪ್ರತಿಭಟನೆ
  • ಇಂದಿನಿಂದ ಬಾರ್ ಮುಚ್ಚಿ ಪ್ರತಿಭಟನೆ

ಕೇರಳ(ಜೂ.21): ಲಾಕ್‌ಡೌನ್, ಕರ್ಫ್ಯೂಗಳಿಂದ ಬಾರ್, ಹೊಟೆಲ್, ಪಬ್, ಕ್ಲಬ್ ಮುಚ್ಚಲಾಗಿತ್ತು. ಇದೀಗ 2ನೇ ಕೊರೋನಾ ಅಲೆ ಕೊಂಚ ಮಟ್ಟಿಗೆ ತಗ್ಗಿದೆ. ಹೀಗಾಗಿ ಕೆಲ ನಿರ್ಬಂಧಗಳೊಂದಿಗೆ ಬಾರ್, ಹೊಟೆಲ್ ಸೇರಿದಂತೆ ಕೆಲ ಕ್ಷೇತ್ರಕ್ಕೆ ಕೇರಳ ಸರ್ಕಾರ ಅನುಮತಿ ನೀಡಿದೆ. ಆದರೆ ಕೇರಳ ರಾಜ್ಯ ಬೆವರೇಜಸ್ ಕಾರ್ಪರೋಶನ್ ಲಿಮಿಟೆಡ್(Bevco), ಬಾರ್‌ಗಳಿಗೆ ಮಾರಾಟ ಮಾಡುವ ಮದ್ಯದ ಮೇಲಿ ಸಗಟು ಲಾಭಾಂಶ ಹೆಚ್ಚಿಸಿದೆ. ಈ ನಿರ್ಧಾರ ವಿರೋಧಿಸಿ ಎಲ್ಲಾ ಬಾರ್‌ಗಳು ಪ್ರತಿಭಟನೆ ನಡೆಸುತ್ತಿದೆ.

ಸಿಎಂ ನೇತೃತ್ವದ ಸಭೆಯಲ್ಲಿ ಮಹತ್ವದ ತೀರ್ಮಾನ: ಎಣ್ಣೆ ಪ್ರಿಯರಿಗೆ ಗುಡ್‌ನ್ಯೂಸ್

ಇಂದಿನಿಂದ ಕೇರಳದಲ್ಲಿ ಎಲ್ಲಾ ಬಾರ್‌ಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುತ್ತಿದೆ. ಬಾರ್‌ಗಳಿಗೆ ಒದಗಿಸುವ ಮದ್ಯದಿಂದ ಬರುವ ಲಾಭಾಂಶವನ್ನು ಶೇಕಡಾ 8 ರಿಂದ 20ಕ್ಕೆ ಏರಿಸಲಾಗಿದೆ. ಆದರೆ ಬಾರ್ ಹಾಗೂ ಹೊಟೆಲ್‌ಗಳು ದರ ಹೆಚ್ಚಿಸಲು ಸರ್ಕಾರ ಅವಕಾಶ ನೀಡಿಲ್ಲ. ಇದರಿಂದ ಹೆಚ್ಚಿನ ಹೊರೆಯಾಗಲಿದೆ ಎಂದು ಬಾರ್, ಹೊಟೆಲ್‌ಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

ಕೊರೋನಾ ನಿರ್ಬಂಧ ತೆರೆವುಗೊಳಿಸಿದ ಕೇರಳ ಸರ್ಕಾರ, ಜೂನ್ 17 ರಿಂದ ಬಾರ್‌ಗಳು ಮದ್ಯ ಮಾರಾಟ ಮಾಡಲು ಅನುಮತಿ ನೀಡಿದೆ. ಆದರೆ ಸರ್ಕಾರ ತನ್ನ ಲಾಭಾಂಶವನ್ನು ಹೆಚ್ಚಿಸಿರುವುದು ಇದೀಗ ಸಮಸ್ಯೆಗೆ ಕಾರವಾಗಿದೆ. ಇದರಿಂದ MRP ಬೆಲೆಗಿಂತ ಹೆಚ್ಚಿನ ಬೆಲೆ ನೀಡಿ ಬಾರ್, ಹೊಟೆಲ್ ಮದ್ಯ ಖರೀದಿಸಬೇಕಾಗಿ ಬಂದಿದೆ ಎಂದು ಬಾರ್ ಸಂಘಟನೆ ಹೇಳಿದೆ.

ಎಣ್ಣೆ ಅಂಗಡಿ ಓಪನ್; ಆರತಿ ಎತ್ತಿ ಬಾಟಲ್ ಹಿಡಿದು ಸಂಭ್ರಮ, ವೈರಲ್ ವಿಡಿಯೋ

ಕೊರೋನಾದಿಂದ ಕಳೆದೊಂದು ವರ್ಷದಿಂದ ಸರಿಯಾಗಿ ವ್ಯಾಪರ ಮಾಡಲು ಸಾಧ್ಯವಾಗಿಲ್ಲ. ಇದೀಗ ಲಾಭಾಂಶ ಹೆಚ್ಚಳದೊಂದಿಗೆ ಸರ್ಕಾರ ಬಾರ್ ಮಾಲೀಕರ, ಹೊಟೆಲ್ ಮಾಲೀಕರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಸರ್ಕಾರದ ಈ ನಿರ್ಧಾರದಿಂದ ಬಾರ್, ಹೊಟೆಲ್ ನಡೆಸುವುದು ಅಸಾಧ್ಯವಾಗಿದೆ ಎಂದು ಕೇರಳ ಬಾರ್ ಸಂಘಟನೆ ಹೇಳಿದೆ.

click me!