ಭೋಪಾಲ್: ಎನ್‌ಸಿಸಿ ಕೆಡೆಟ್‌ಗಳನ್ನು ಮುಂದಿನ ಯೋಧರು, ಪೊಲೀಸರು ಎಂದು ಪರಿಗಣಿಸಲಾಗುತ್ತದೆ. ಕಾಲೇಜು ದಿನಗಳಲ್ಲಿ ಎನ್‌ಸಿಸಿ ಕೆಡೆಟ್ ಆದವರಿಗೆ ವಿಶೇಷವಾದ ಗೌರವವಿದ್ದು, ಸೇನಾ ನೇಮಕಾತಿ ಹಾಗೂ ಪೊಲೀಸ್ ನೇಮಕಾತಿ ವೇಳೆ ಅವರಿಗೆ ವಿಶೇಷ ಮೀಸಲಾತಿ ಇದೆ. ನೇಮಕಾತಿಯಲ್ಲಿ ಅವರನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಎನ್‌ಸಿಸಿ ಕೆಡೆಟ್‌ಗಳೂ ಸಮಾಜದಲ್ಲಿ ಈ ಗೌರವಯುವತವಾಗಿ ನಡೆದುಕೊಳ್ಳುತ್ತಾರೆ. ಏಕೆಂದರೆ ಎನ್‌ಸಿಸಿ ಕೆಡೆಟ್‌ಗಳಿಗೆ ಕಾಲೇಜು ದಿನಗಳಲ್ಲೇ ಶಿಸ್ತು ಸಂಯಮ ಕಲಿಸಲಾಗುತ್ತದೆ. ಆದರೆ ಇಲ್ಲೊಬ್ಬ ಎನ್‌ಸಿಸಿ ಕೆಡೆಟ್ ಮಾಡಿದ ಕೆಲಸ ಎಲ್ಲರೂ ತಲೆ ತಗ್ಗಿಸುವಂತೆ ಮಾಡಿದೆ.
ಬಸ್‌ನಲ್ಲಿ ಫುಲ್ ಟಿಕೆಟ್ ತೆಗೆದುಕೊಳ್ಳಿ ಎಂದ ಕಂಡಕ್ಟರ್‌ಗೆ ಎನ್‌ಸಿಸಿ ಕೆಡೆಟ್ ಓರ್ವ ಹಿಗ್ಗಾಮುಗ್ಗಾ ಥಳಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯ ದೃಶ್ಯಾವಳಿಗಳು ಬಸ್‌ನಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಕೆಡೆಟ್ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಈ ಅಮಾನವೀಯ ಘಟನೆ ನಡೆದಿದೆ.
ಮಂಗಳವಾರ ಬೆಳಗ್ಗೆ(ಸೆ.12) ಈ ಘಟನೆ ನಡೆದಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಬಸ್ ಟಿಕೆಟ್ (Bus Ticket) ವಿಚಾರಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಹಾಗೂ ಎನ್‌ಸಿಸಿ ಕೆಡೆಟ್ (NCC cadet) ನಡುವೆ ಬಿರುಸಿನ ಚರ್ಚೆ ನಡೆದಿದೆ. ಎನ್‌ಸಿಸಿ ಬೋರ್ಡ್ ಆಫೀಸ್ ಬಳಿಯಿಂದ ಬಸ್ ಏರಿದ ಎನ್‌ಸಿಸಿ ಕೆಡೆಟ್ ಪೊಲೀಸ್ ಹೆಡ್‌ಕ್ವಾರ್ಟರ್‌ಗೆ ತೆರಳಲು ಬಸ್ ಏರಿದ್ದ. ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಬಸ್ ಒಳಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಜಹಾಂಗೀರ್ ನಗರ ಪೊಲೀಸ್ ಠಾಣೆಯಲ್ಲಿ (Jahangirabad police station) ಪ್ರಕರಣ ದಾಖಲಾಗಿದೆ.
ಪ್ರೊಫೆಸರ್‌ಗೆ ವಿವಿ ಕ್ಯಾಂಪಸ್‌ನಲ್ಲಿ ಪತ್ನಿಯಿಂದ ಚಪ್ಪಲಿಯಲ್ಲಿ ಥಳಿತ..!
ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. 25 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಟಿಕೆಟ್ ದರಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಹಾಗೂ ಎನ್‌ಸಿಸಿ ಕೆಡೆಟ್ ವಾಗ್ವಾದ (argument) ಮಾಡುತ್ತಿರುವುದನ್ನು ತೋರಿಸುತ್ತಿದೆ. ಈ ಮಾರ್ಗದ ದರ 15 ರೂಪಾಯಿಯಾಗಿದ್ದು, ಎನ್‌ಸಿಸಿ ಕೆಡೆಟ್ ಬರೀ 10 ರೂಪಾಯಿ ನೀಡಲು ಬಯಸಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ಇನ್ನೂ 5 ರೂಪಾಯಿ ನೀಡುವಂತೆ ಕಂಡಕ್ಟರ್ ಕೇಳಿದ್ದಾನೆ. ಇದಕ್ಕೆ ಸಿಟ್ಟುಗೊಂಡ ಎನ್‌ಸಿಸಿ ಕೆಡೆಟ್, ಕಂಡಕ್ಟರ್‌ಗೆ (Conductor) ಸರಿಯಾಗಿ ಥಳಿಸಿದ್ದಾನೆ. ನಂತರ ಆತ ಬಸ್ ಇಳಿದು ಹೋಗಿದ್ದಾನೆ.
Kolar; ಚಾಕು ಇರಿತಕ್ಕೆ ಒಳಗಾದ RSS ಮುಖಂಡನನ್ನು ಭೇಟಿ ಮಾಡಿದ ಸಚಿವರು
ನಾಗರಿಕ ಸಂಸ್ಥೆಯೊಂದು ನಡೆಸುವ ಬಸ್ ಇದಾಗಿದ್ದು, ಬಸ್ ನಡೆಸುವವರು ಸಿಸಿಟಿವಿ ದೃಶ್ಯವನ್ನು (CCTV footage) ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೇ ಎನ್‌ಸಿಸಿ ಕೆಡೆಟ್ (NCC Cadet) ವಿರುದ್ಧ ಜಹಾಂಗೀರ್‌ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯೆ ಸೆಕ್ಷನ್ 323 ಹಾಗೂ 504 ಅಡಿ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಲಾಗಿದೆ.
ಲಾರಿ ಡಿಕ್ಕಿಯಾಗಿ ಬಾಲಕ ಸಾವು: ರೊಚ್ಚಿಗೆದ್ದ ಜನರಿಂದ ಲಾರಿ ಮೇಲೆ ಕಲ್ಲೆಸೆತ
ರಸ್ತೆ ದಾಟಲು ರಸ್ತೆ ಬದಿಗೆ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಕಬ್ಬಿಣದ ಸಲಾಕೆ ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದು 10 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೆಳಗಾವಿ ನಗರದಲ್ಲಿ ಕೆಲ ದಿನಗಳ ಹಿಂದೆ ನಡೆದಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ವೆಲ್‌ಕಮ್ ಹೋಟೆಲ್ ಬಳಿ ಬೆಳಗಾವಿ ಖಾನಾಪುರ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಸಹೋದರಿ ಅತೀಕಾ ಬೇಪಾರಿ ಜೊತೆ 10 ವರ್ಷದ ಅರ್ಹಾನ್ ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದ, ಈ ವೇಳೆ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದಾಗ ಬಂದ ಲಾರಿ ಮೊದಲು ಎದುರುಗಡೆ ತೆರಳುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಬಳಿಕ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಹತ್ತು ವರ್ಷದ ಬಾಲಕ ಅರ್ಹಾನ್ ಮೃತಪಟ್ಟಿದ್ದಾನೆ. ಇನ್ನೂ ಘಟನೆಯಲ್ಲಿ ಮೃತ ಅರ್ಹಾನ್ ಅಕ್ಕ ಅತೀಕಾ ಹಾಗೂ ರಸ್ತೆ ದಾಟಲು ರಸ್ತೆ ಪಕ್ಕ ನಿಂತಿದ್ದ ಆಯುಷ್ ಎಂಬ 13 ವರ್ಷದ ಬಾಲಕನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ