Queen Elizabeth II ಅಂತ್ಯಕ್ರಿಯೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ವಿವಿಧ ದೇಶಗಳ 500 ಗಣ್ಯರು ಭಾಗಿ

Published : Sep 15, 2022, 07:53 AM IST
Queen Elizabeth II ಅಂತ್ಯಕ್ರಿಯೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ವಿವಿಧ ದೇಶಗಳ 500 ಗಣ್ಯರು ಭಾಗಿ

ಸಾರಾಂಶ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬ್ರಿಟನ್ ರಾಣಿ ಎಲಿಜಬೆತ್ II ರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಲಂಡನ್‌: ಇತ್ತೀಚೆಗೆ ನಿಧನರಾದ ಬ್ರಿಟನ್‌ ರಾಣಿ ಎಲಿಜಬೆತ್‌-2 ಅವರ ಅಂತ್ಯಸಂಸ್ಕಾರ ಸೋಮವಾರ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ನಡೆಯಲಿದ್ದು, ಭಾರತವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿನಿಧಿಸಲಿದ್ದಾರೆ. ಈ ನಿಟ್ಟಿನಲ್ಲಿ ದ್ರೌಪದಿ ಮುರ್ಮು ಅವರು 3 ದಿನಗಳ ಕಾಲ ಬ್ರಿಟನ್‌ಗೆ ಭೇಟಿ ನೀಡಲಿದ್ದಾರೆ. ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ವಿವಿಧ ದೇಶಗಳ ರಾಷ್ಟ್ರಪತಿ, ಪ್ರಧಾನಿ, ರಾಜ, ರಾಣಿಯರು ಸೇರಿ 500ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಅಗಮಿತ ಗಣ್ಯರಿಗಾಗಿ ಕಿಂಗ್‌ ಚಾರ್ಲ್ಸ್ ಸೆಪ್ಟೆಂಬರ್‌ 18ರಂದು ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸೆಪ್ಟೆಂಬರ್‌ 19ರಂದು ಬೆಳಗ್ಗೆ 11 ಗಂಟೆಗೆ ರಾಣಿಯ ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯಲಿದೆ. 57 ವರ್ಷದ ಬಳಿಕ ಮೊದಲ ಬಾರಿ ಸರ್ಕಾರಿ ಗೌರವ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತಿದೆ. 1965ರಲ್ಲಿ ಬ್ರಿಟನ್‌ ಯುದ್ಧದ ಸಮಯದಲ್ಲಿ ಪ್ರಧಾನಿಯಾಗಿದ್ದ ವಿನ್‌ಸ್ಟನ್‌ ಚರ್ಚಿಲ್‌ ಅವರಿಗೆ ಸರ್ಕಾರಿ ಅಂತ್ಯಕ್ರಿಯೆಯನ್ನು ಮಾಡಲಾಗಿತ್ತು.

ಬಕಿಂಗ್‌ಹ್ಯಾಮ್‌ ಅರಮನೆಯಿಂದ ಸಂಸತ್‌ಗೆ ರಾಣಿ ಮೃತದೇಹ
ಬ್ರಿಟನ್‌ ರಾಣಿ ದಿವಂಗತ 2ನೇ ಎಲಿಜಬೆತ್‌ ಶವಪೆಟ್ಟಿಗೆಯನ್ನು ಭಾರಿ ಮೆರವಣಿಗೆಯೊಂದಿಗೆ ಬಕಿಂಗ್‌ಹ್ಯಾಮ್‌ ಅರಮನೆಯಿಂದ ಬುಧವಾರ ಬ್ರಿಟನ್‌ ಸಂಸತ್ತಿಗೆ ಸಾಗಿಸಲಾಯಿತು. ಮುಂದಿನ 4 ದಿನಗಳ ಕಾಲ ರಾಣಿಯ ಮೃತದೇಹ ಸಂಸತ್ತಿನಲ್ಲೇ ಇರಲಿದೆ. ರಾಣಿಯ ನಿವಾಸವಾದ ಬಕಿಂಗ್‌ಹ್ಯಾಮ್‌ ಅರಮನೆಯಿಂದ ಸಂಸತ್ತಿನ ವೆಸ್ಟ್‌ಮಿನಿಸ್ಟರ್‌ ಹಾಲ್‌ಗೆ ಶೋಕ ಮೆರವಣಿಗೆ ಸಾಗಿದ್ದು, ಬ್ರಿಟನ್‌ ನೂತನ ರಾಜ 3ನೇ ಚಾರ್ಲ್ಸ್ ಹಾಗೂ ರಾಜ ಕುಟುಂಬದ ಇತರೆ ಸದಸ್ಯರು ರಾಣಿಯ ಶವಪೆಟ್ಟಿಗೆ ಹಿಂದೆ ನಡೆಯುತ್ತ ಮೆರವಣಿಗೆಯಲ್ಲಿ ಸಾಗಿದರು. ಈ ವೇಳೆ ಬಕಿಂಗ್‌ಹ್ಯಾಮ್‌ ಅರಮನೆಯ ಬೀದಿಗಳು, ಥೇಮ್ಸ್‌ ನದಿ ದಂಡೆಯುದ್ದಕ್ಕೂ ನೆರೆದ ಸಾವಿರಾರು ಜನರು ಕಂಬನಿ ಮಿಡಿದರು.

ಇದನ್ನು ಓದಿ: Queen Elizabeth II Passes Away: ದೀರ್ಘ ಅವಧಿಯ ಕಾಲ ಬ್ರಿಟನ್‌ ರಾಣಿಯಾಗಿದ್ದ ಎಲಿಜಬೆತ್ II ನಿಧನ

ಖಾಸಗಿ ವಿಮಾನ ತರಬೇಡಿ, ಬಸ್‌ ವ್ಯವಸ್ಥೆ ಇದೆ: ವಿದೇಶಿ ಗಣ್ಯರಿಗೆ ಬ್ರಿಟನ್‌ ಸರ್ಕಾರ ಮನವಿ
ರಾಣಿ ಎಲಿಜಬೆತ್‌ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಿರುವವರಿಗೆ ಬ್ರಿಟನ್‌ ಸರ್ಕಾರ ಕೆಲವು ಸಲಹೆಗಳನ್ನು ರವಾನಿಸಿದೆ. ಅಂತ್ಯಕ್ರಿಯೆಗೆ ಆಗಮಿಸುವ ಜಾಗತಿಕ ನಾಯಕರುಗಳಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಖಾಸಗಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸದಂತೆ ಸೂಚಿಸಲಾಗಿದೆ. ರಾಣಿಯ ಅಂತ್ಯಕ್ರಿಯೆ ಸೆ.19ರಂದು ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ನಡೆಯಲಿದೆ. ಇಲ್ಲಿಗೆ ಆಗಮಿಸಲು ಪಶ್ಚಿಮ ಲಂಡನ್‌ನಿಂದ ಬಸ್‌ ವ್ಯವಸ್ಥೆ ಇದೆ. ಅಲ್ಲದೇ ವಿದೇಶಗಳಿಂದ ಆಗಮಿಸುವವರು ವಾಣಿಜ್ಯ ವಿಮಾನಗಳಲ್ಲಿ ಆಗಮಿಸುವಂತೆ ಕೋರಲಾಗಿದೆ. ಅಲ್ಲದೇ ಸ್ವಂತದ ಕಾರುಗಳನ್ನು ಸಹ ಬಳಸದೇ ಸಾರ್ವಜನಿಕ ಸಾರಿಗೆ ಬಳಸುವಂತೆಯೂ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಇಂಗ್ಲೆಂಡ್ ರಾಣಿ ಸದಾ ಕಾಲ ಧರಿಸ್ತಿದ್ದ ಈ ನೆಕ್ಲೇಸ್‌ ಭಾರತ ಮೂಲದ್ದು

ಬ್ರಿಟನ್‌ಗೆ ದೀರ್ಘಾವಧಿಯ ಕಾಲದಿಂದ ರಾಣಿಯಾಗಿದ್ದ ಹಾಗೂ ವಿಶ್ವದ ಅತ್ಯಂತ ಹಿರಿಯ ದೊರೆ ಎಂದು ಪರಿಗಣಿಸಲಾಗಿರುವ ಕ್ವೀನ್‌ ಎಲಿಜಬೆತ್ II ​​ಕಳೆದ ವರ್ಷದ ಅಂತ್ಯದಿಂದ "ಎಪಿಸೋಡಿಕ್ ಮೊಬಿಲಿಟಿ ಸಮಸ್ಯೆಗಳು" ("Episodic Mobility Problems") ಎಂದು ಕರೆಯುವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಬಕಿಂಗ್‌ಹ್ಯಾಮ್‌ ಅರಮನೆಯ (Buckhingham Palace) ಮೂಲಗಳು ಮಾಹಿತಿ ನೀಡಿದ್ದವು. ಸೆಪ್ಟೆಂಬರ್‌ 8 ರಂದು ರಾನಿ ಎಲಿಜಬೆತ್ ಮೃತಪಟ್ಟಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್