ಇದು ಮೀನುಗಳ ಸೀಮೋಲ್ಲಂಘನ... ಪೋರ್ಟ್ ಕೊಚ್ಚಿಯಲ್ಲಿ ಸೆರೆಯಾದ ಅಪರೂಪದ ವೀಡಿಯೋ

Published : Jul 22, 2023, 02:51 PM IST
ಇದು ಮೀನುಗಳ ಸೀಮೋಲ್ಲಂಘನ...  ಪೋರ್ಟ್ ಕೊಚ್ಚಿಯಲ್ಲಿ ಸೆರೆಯಾದ ಅಪರೂಪದ ವೀಡಿಯೋ

ಸಾರಾಂಶ

ಅದೇ ರೀತಿ ಕೇರಳದ ಕೊಚ್ಚಿ ಪೋರ್ಟ್ ಬಳಿ ಮೀನುಗಳು ನೀರಿನಿಂದ ಚಿಮ್ಮಿ ನೆಲಕ್ಕೆ ಬೀಳುತ್ತಿರುವ  ವೀಡಿಯೋವೊಂದು ವೈರಲ್ ಆಗಿದೆ. ಕೆಲ ದಿನಗಳ ಹಿಂದೇ ಈ ಘಟನೆ ನಡೆದಿದ್ದು, ಈಗ ವೀಡಿಯೋ ವೈರಲ್ ಆಗುತ್ತಿದೆ.

ಕೊಚ್ಚಿ: ಮುಂಗಾರು ಮಳೆ ಇಡೀ  ಜೀವ ಜಗತ್ತಿಗೆ ಹೊಸತನವನ್ನು ತರುತ್ತದೆ. ಮನುಷ್ಯರಿಂದ ಹಿಡಿದು ಪ್ರತಿಯೊಂದು ಪ್ರಾಣಿಯೂ ಕೂಡ ಮೊದಲ ಮಳೆ ಮೈ ಚುಂಬಿಸುತ್ತಿದ್ದಂತೆ ಖುಷಿಯಿಂದ ತೇಲಾಡುತ್ತವೆ. . ಅದೇ ರೀತಿ ಮುಂಗಾರಿಗೆ ಸಮುದ್ರ ಹಳ್ಳ ಕೊಳ್ಳಗಳು ತುಂಬಿ ತುಳುಕುತ್ತಿದ್ದಂತೆ ಅದರಲ್ಲಿರುವ ಮೀನುಗಳು ಬೇರೆಡೆ ವಲಸೆ ಹೋಗಲು ಮುಂದಾಗುತ್ತವೆ. ನೀರಿನ ಹರಿಯುವಿಕೆಯ ವಿರುದ್ಧವಾಗಿ ಸಾಗುವ ಈ ಮೀನುಗಳು ಅನೇಕರ ಬಾರಿ ಗುರಿ ಸೇರಲಾಗದೇ ಮನುಷ್ಯನ ಹೊಟ್ಟೆ ಸೇರುತ್ತವೆ. ಇದೇ ಸಮಯದಲ್ಲಿ ಮೀನುಗಳು ಸಂತಾನೋತ್ಪಿ ಕ್ರಿಯೆಯನ್ನು ಶುರು ಮಾಡುತ್ತವೆ. ಸ್ವಚ್ಛ ನೀರನ್ನು ಅರಸಿ ನೀರಿನ ವಿರುದ್ಧ ಹರಿಯುವ ಇವುಗಳು ಪ್ರಕೃತಿಯ ವಿಶಿಷ್ಟ ವೈಚಿತ್ರದಂತೆ ನೋಡುಗರಿಗೆ ಭಾಸವಾಗುತ್ತದೆ.

ಅದೇ ರೀತಿ ಕೇರಳದ ಕೊಚ್ಚಿ ಪೋರ್ಟ್ ಬಳಿ ಮೀನುಗಳು ನೀರಿನಿಂದ ಚಿಮ್ಮಿ ನೆಲಕ್ಕೆ ಬೀಳುತ್ತಿರುವ  ವೀಡಿಯೋವೊಂದು ವೈರಲ್ ಆಗಿದೆ. ಕೆಲ ದಿನಗಳ ಹಿಂದೇ ಈ ಘಟನೆ ನಡೆದಿದ್ದು, ಈಗ ವೀಡಿಯೋ ವೈರಲ್ ಆಗುತ್ತಿದೆ. ಪೋರ್ಟ್ ಕೊಚ್ಚಿ ಬೀಚ್ ಬಳಿ ಮೀನುಗಳು ನೀರಿನಿಂದ ಮೇಲಕ್ಕೆ ಚಿಮ್ಮಿ ತೀರಕ್ಕೆ ಬೀಳುತ್ತಿದ್ದು, ಈ ವಿಚಾರ ತಿಳಿದ ಜನ ಓಡಿ ಬಂದು ಬಿಟ್ಟಿ ಸಿಕ್ಕ ಮೀನನ್ನು ಬುಟ್ಟಿ, ಚೀಲ,ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿಕೊಂಡು ಹೋಗುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.

Mysterious Metal Dome: ಆಸ್ಟ್ರೇಲಿಯಾ ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತು, ಇಸ್ರೋದಿಂದ ಸ್ಪಷ್ಟೀಕರಣ

ವೀಡಿಯೋದಲ್ಲಿ ಏನಿದೆ. 
ಬೀಚ್‌ನಲ್ಲಿ ದೋಣಿಗಳನ್ನು ಲಂಗಾರು ಹಾಕಲು ಕಟ್ಟಿರುವ ಕಂಬಗಳು ಒಂದು ಕಡೆ ಇದ್ದರೆ, ಅದೇ ಬದಿಯಲ್ಲಿ ಮೀನುಗಳು ರಾಶಿ ರಾಶಿಯಾಗಿ ಮೇಲೆ ಹಾರುತ್ತಿವೆ. ಮೀನುಗಳ ಸೀಮೋಲ್ಲಂಘನೆಯಂತೆ ಇಂದು ಕಂಡು ಬರುತ್ತಿದ್ದು,  ಜನರು ಬುಟ್ಟಿ ಚೀಲಗಳಲ್ಲಿ ಅವುಗಳನ್ನು ತುಂಬಿಕೊಂಡು ಹೋಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲೆಗಳು ಹತ್ತಿರ ಬರುತ್ತಿದ್ದಂತೆ ಮೀನುಗಳು ಹಾರುತ್ತಾ ಹಾರುತ್ತಲೇ ರಾಶಿಯಾಗಿ ತೀರಕ್ಕೆ ಬರುತ್ತಿವೆ.  ಒಂಥರಾ ಮೀನಿನ ಸುಂಟರಗಾಳಿಯಂತೆ ಈ ವೀಡಿಯೋ ಕಾಣಿಸುತ್ತಿದೆ. Anu Rahuf ಎಂಬುವವರ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. 

ವೀಡಿಯೋ ನೋಡಿದ ಅನೇಕರು ಆಶ್ಚರ್ಯದಿಂದ ಇದೇನು ಎಂದು ಕೇಳುತ್ತಿದ್ದಾರೆ.  ಮತ್ತೆ ಕೆಲವರು ವೀಡಿಯೋ ನೋಡಿ ಬಹುಶ ಪ್ರಕೃತಿ ವಿಕೋಪದ ಮುನ್ಸೂಚನೆ ಇದು ಇರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು  ಇದೊಂದು ನೈಸರ್ಗಿಕವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ಮೀನುಗಳು ವಲಸೆ ಹೋಗುವ ವೇಳೆ ಕೆಲವೊಮ್ಮೆ ಆಕಸ್ಮಿಕವಾಗಿ ದಡಕ್ಕೆ ಬಂದು ಸೇರುತ್ತವೆ ಎಂದು ಒಬ್ಬರು ವಿವರಿಸಿದ್ದಾರೆ. 

ಬಿಕಿನಿ ಧರಿಸಿ ಬಿಂದಾಸ್ ಆಗಿ ಬೀಚ್‌ನಲ್ಲಿ ಮಲಗಿದ್ದ ಯುವತಿ ಮೇಲೆ ನಾಯಿ ದಾಳಿ: ವೀಡಿಯೋ ವೈರಲ್

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್