ಇಂಡಿಯಾ ಬದಲು ಭಾರತ ಹೆಸರು: ಇಸ್ರೋ, ಐಐಟಿ, ಆರ್‌ಬಿಐಗೆ ಪರ್ಯಾಯ ಹೆಸರು ಕೊಟ್ಟ ನೆಟ್ಟಿಗರು!

Published : Sep 06, 2023, 09:05 AM ISTUpdated : Sep 06, 2023, 09:34 AM IST
ಇಂಡಿಯಾ ಬದಲು ಭಾರತ ಹೆಸರು: ಇಸ್ರೋ, ಐಐಟಿ, ಆರ್‌ಬಿಐಗೆ ಪರ್ಯಾಯ ಹೆಸರು ಕೊಟ್ಟ ನೆಟ್ಟಿಗರು!

ಸಾರಾಂಶ

ಜಿ20 ಆಮಂತ್ರಣ ಪತ್ರಿಕೆಯಲ್ಲಿ ಪ್ರೆಸಿಡೆಂಟ್‌ ಆಫ್‌ ಭಾರತ ಎಂದು ನಮೂದಿಸಿರುವುದರಿಂದ ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲಾಗುತ್ತದೆ ಎಂಬ ವದಂತಿಗಳು ಹಬ್ಬಿವೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹಾಸ್ಯಭರಿತವಾದ ಚರ್ಚೆಗಳು ಆರಂಭವಾಗಿವೆ.

ನವದೆಹಲಿ: ಜಿ20 ಆಮಂತ್ರಣ ಪತ್ರಿಕೆಯಲ್ಲಿ ಪ್ರೆಸಿಡೆಂಟ್‌ ಆಫ್‌ ಭಾರತ ಎಂದು ನಮೂದಿಸಿರುವುದರಿಂದ ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲಾಗುತ್ತದೆ ಎಂಬ ವದಂತಿಗಳು ಹಬ್ಬಿವೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹಾಸ್ಯಭರಿತವಾದ ಚರ್ಚೆಗಳು ಆರಂಭವಾಗಿವೆ.  ಒಂದು ವೇಳೆ ಭಾರತ ಎಂದು ಹೆಸರು ಬದಲಾದರೆ ಇಂಡಿಯಾ ಹೆಸರನ್ನು ಹೊಂದಿರುವ ಸಂಸ್ಥೆಗಳು ಬದಲಾಗಲಿವೆ ಎಂದು ಹಲವರು ಪೋಸ್ಟ್‌ ಮಾಡಿದ್ದಾರೆ. ಇಸ್ರೋ ಬಿಸ್ರೋ ಎಂದು ಬದಲಾಗಲಿದೆ. ಐಐಎಂ- ಬಿಐಎಂ ಎಂದು, ಐಐಟಿ- ಬಿಐಟಿ, ಎಐಐಎಂಎಸ್‌- ಎಬಿಐಎಂಸ್‌, ಆರ್‌ಬಿಐ- ಆರ್‌ಬಿಬಿ ಎಂದು ಬದಲಾಗಲಿದೆ ಎಂದು ಪೋಸ್ಟ್‌ಗಳನ್ನು ಮಾಡಲಾಗಿದೆ. ಅದೇ ರೀತಿ ಬಿಸಿಸಿಐ ಎಂಬುದು ‘ಭಾರತ್‌ ಕಂಟ್ರೋಲಿಂಗ್‌ ಕ್ರಿಕೆಟ್‌ ಇಂಟರ್‌ನ್ಯಾಷನಲ್ ಎಂದಾಗಲಿದೆ ಎಂದು ಟ್ವೀಟರ್‌ ಬಳಕೆದಾರರೊಬ್ಬರು ಹೇಳಿದ್ದಾರೆ.

ಬ್ರಿಕ್ಸ್‌ ಕೂಟಕ್ಕೆ (BRICS) ಅರ್ಜೆಂಟೀನಾ (Argentina), ಈಜಿಫ್ಟ್, ಇಥಿಯೋಪಿಯಾ, ಇರಾನ್‌, ಸೌದಿ ಅರೇಬಿಯಾ ಮತ್ತು ಯುಎಇಗಳನ್ನು ಆಹ್ವಾನಿಸಿದರೆ ಅದರ ಹೆಸರು ‘ಬಾರ್ಬಿಕ್ಯೂ’ ಎಂದಾಗುತ್ತದೆ ಎಂದು ಟ್ವೀಟ್‌ ಮಾಡಲಾಗಿದೆ. ಅದೇ ರೀತಿ ‘ಭಾರತ್‌ ಕಾ ರಹನೆ ವಾಲಾ ಹೂ’ ಹಾಡು ವೈರಲ್‌ ಆಗಿದೆ. ಭಾರತ್‌ ಕುಮಾರ್‌ ಎಂದು ಕರೆಯಲ್ಪಡುವ ನಟ ಮನೋಜ್‌ ಕುಮಾರ್‌ ಅವರು ಇಂದು ಎಲ್ಲರಿಗಿಂತ ಹೆಚ್ಚು ಖುಷಿಯಾಗಲಿದ್ದಾರೆ ಎಂಬ ಟ್ವೀಟ್‌ ವೈರಲ್‌ ಅಗಿದೆ.

 

ಪ್ರಧಾನಿ ರಾಷ್ಟ್ರಪತಿ ಪ್ರಯಾಣಿಸುವ ವಿಮಾನದ ಮೇಲೂ ರಾರಾಜಿಸಿದ ಭಾರತ ಹೆಸರು 

ಇಂಡಿಯಾ ಇನ್ಮುಂದೆ ಭಾರತ: ವಿಪಕ್ಷಗಳ ತೀವ್ರ ಆಕ್ರೋಶ: ಬಿಜೆಪಿ ನಾಯಕರ ಸಮರ್ಥನೆ

ನವದೆಹಲಿ:  ಜಿ20 ಶೃಂಗಸಭೆ ನಿಮಿತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಸಿದ್ಧಪಡಿಸಿರುವ ಆಮಂತ್ರಣ ಪತ್ರಿಕೆಯಲ್ಲಿ ಅವರ ಹುದ್ದೆಯನ್ನು ‘ಪ್ರೆಸಿಡೆಂಟ್‌ ಆಫ್‌ ಭಾರತ್‌’ (ಭಾರತದ ಅಧ್ಯಕ್ಷೆ) ಎಂದು ಬರೆಯಲಾಗಿದೆ. ಇದರಲ್ಲಿ ಈವರೆಗೆ ಬಳಸುತ್ತಿದ್ದ ‘ಇಂಡಿಯಾ’ ಪದ ಕಾಣೆಯಾಗಿದೆ. ಅಲ್ಲದೆ, ‘ಇಂಡಿಯಾ’ ಪದ ಅಳಿಸಿ ದೇಶದ ಹೆಸರನ್ನು ‘ಭಾರತ’ ಎಂದು ಬದಲಿಸುವ ಯತ್ನದ ಭಾಗ ಇದು ಎಂಬ ಊಹಾಪೋಹ ಆರಂಭವಾಗಿದೆ. ಇದು ಬಿಜೆಪಿ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು, ಜಿ20 ಔತಣಕೂಟದ ಆಮಂತ್ರಣ ಪತ್ರಿಕೆ ಟ್ವೀಟ್‌ ಮಾಡಿದ್ದು, ಇದರಲ್ಲಿ ಈವರೆಗೆ ಬರೆಯಲಾಗುತ್ತಿದ್ದ ‘ಪ್ರೆಸಿಡೆಂಟ್‌ ಆಫ್‌ ಇಂಡಿಯಾ’ ಬದಲು ‘ಪ್ರೆಸಿಡೆಂಟ್‌ ಆಫ್‌ ಭಾರತ್‌’ ಎಂದು ಬರೆಯಲಾಗಿದೆ. ಅದಕ್ಕೆ ಅವರು ‘ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯ ವಿಧಾತಾ’ ಎಂದು ಟ್ವೀಟರ್‌ನಲ್ಲಿ ಟಿಪ್ಪಣಿ ಬರೆದಿದು, ‘ಜೈ ಹೋ’ ಎಂದಿದ್ದಾರೆ. ‘ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರುವ ಯತ್ನ ಇದು. ಯಾವತ್ತೋ ಆಗಬೇಕಿತ್ತು. ಇಂದು ಕೈಗೂಡಿದೆ’ ಎಂದಿದ್ದಾರೆ.

ವಿಪಕ್ಷ-ಬಿಜೆಪಿ ವಾಕ್ಸಮರ:

ಕೇಂದ್ರದ ಈ ನಡೆಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್‌ ಮುಖಂಡ ಜೈರಾಂ ರಂಏಶ್‌, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌, ಆಪ್‌ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌, ಆರ್‌ಜೆಡಿ ಮುಖಂಡ ಮನೋಜ್‌ ಝಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಸರ್ಕಾರದ ನಡೆ ಪ್ರಶ್ನಿಸಿದ್ದು, ‘ಹಠಾತ್ತಾಗಿ ದೇಶದ ಹೆಸರು ಬದಲಾವಣೆಗೆ ಕಾರಣ ಏನು? ದೇಶದ ಹೆಸರು ಬದಲಾವನೆ ಮಾಡಲು ಯಾರಿಗೂ ಹಕ್ಕಿಲ್ಲ. ಬಹುಶಃ ವಿಪಕ್ಷಗಳ ಕೂಟದ ‘ಇಂಡಿಯಾ’ ಹೆಸರಿನಿಂದ ಬೆಚ್ಚಿ ಬಿದ್ದು ಹೀಗೆ ಮಾಡಿದ್ದರೇನೋ. ಬಿಜೆಪಿಯೇ ಇಂಡಿಯಾ ಶೈನಿಂಗ್‌, ಡಿಜಿಟಲ್‌ ಇಂಡಿಯಾ, ಸ್ಟಾರ್ಟಪ್‌ ಇಂಡಿಯಾ, ನ್ಯೂ ಇಂಡಿಯಾ ಎಂಬ ಉದ್ಘೋಷಣೆಗಳನ್ನು ಮಾಡಿತ್ತು. ಆದರೆ ದಿಢೀರನೆ ಇಂಡಿಯಾ ಪದ ಕೈಬಿಟ್ಟಿದ್ದು ಏಕೆ?’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬ್ಯಾಗಲ್ಲಿ ಹೃದಯ ಇಟ್ಕೊಂಡು ಓಡಾಟ: ನೈಸರ್ಗಿಕ ಹೃದಯ ಇಲ್ಲದೇ ಬದುಕುಳಿದಿರುವ ಜಗತ್ತಿನ ಏಕೈಕ ಮಹಿಳೆ ಈಕೆ
ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ