ಯಾವುದೇ ಕಾಯ್ದೆ ರದ್ದು ಮಾಡಿ, ಮುಸ್ಲಿಮರಿಗೆ ಷರಿಯಾ ಅಂತಿಮ, ಎಸ್‌ಟಿ ಹಸನ್ ಆಕ್ರೋಶ!

By Suvarna NewsFirst Published Feb 24, 2024, 6:47 PM IST
Highlights

ಅಸ್ಸಾಂ ಸರ್ಕಾರದ ಮುಸ್ಲಿಮ್ ವಿವಾಹ ಕಾಯ್ದೆ ರದ್ದು ಇದೀಗ ಮುಸ್ಲಿಮ್ ಸಮುದಾಯದ ಆಕ್ರೋಶಕ್ಕೆ ಕಾರಣಾಗಿದೆ. ಮೌಲನಾ ಬದ್ರುದ್ದಿನ್ ಅಜ್ಮಲ್ ಸೇರಿದಂತೆ ಹಲವು ಮುುಸ್ಲಿಮ್ ಮುಖಂಡರು ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಅಸ್ಸಾಂ(ಫೆ.24) ಏಕರೂಪ ನಾಗರೀಕ ನೀತಿ ಸಂಹಿತೆ ಜಾರಿಯ ಮೊದಲ ಹಂತವಾಗಿ ಅಸ್ಸಾಂನಲ್ಲಿ ಮುಸ್ಲಿಮ್ ಮದುವೆ ಕಾಯ್ದೆ , ವಿಚ್ಚೇದನ ಕಾಯ್ದೆಗಳನ್ನು ರದ್ದುಗೊಳಿಸಲಾಗಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ. ಅಸ್ಸಾಂ ಸರ್ಕಾರದ  ನಿರ್ಧಾರವನ್ನು ಮುಸ್ಲಿಮ್ ಮುಖಂಡರು ಟೀಕಿಸಿದ್ದಾರೆ. ಮುಸ್ಲಿಮರು ಷರಿಯತ್ ಕಾನೂನು ಮಾತ್ರ ಪಾಲಿಸುತ್ತಾರೆ. ಖುರಾನ್ ಅನುಸರಿಸುತ್ತಾರೆ ಎಂದು ಸಮಾಜವಾದಿ ಪಾರ್ಟಿ ನಾಯಕ ಎಸ್‌ಟಿ ಹಸನ್ ಹೇಳಿದ್ದಾರೆ. ಇತ್ತ ಆಲ್ ಇಂಡಿಯಾ ಯೂನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಮುಖ್ಯಸ್ಥ, ಮೌಲನಾ ಬದ್ರುದ್ದಿನ್ ಅಜ್ಮಲ್ ಕೂಡ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮಹತ್ವದ ನಿರ್ಧಾರವೊಂದರಲ್ಲಿ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಅಸ್ಸಾಂ ಸಚಿವ ಸಂಪುಟವು ಶುಕ್ರವಾರ ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ-1935 ಅನ್ನು ರದ್ದುಗೊಳಿಸಲಾಗಿದೆ.ಈ ಬಗ್ಗೆ ಹೇಳಿಕೆ ನೋಡಿರುವ ಸಚಿವ ಜಯಂತ ಮಲ್ಲಬರುವ, ‘ಇದು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಸಾಧಿಸುವತ್ತ ಒಂದು ಹೆಜ್ಜೆ. ಈಗ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಡಿಕೊಳ್ಳಲಾಗುವುದು ಎಂದಿದ್ದಾರೆ. ಮುಸ್ಲಿಂ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ 94 ಮುಸ್ಲಿಂ ರಿಜಿಸ್ಟ್ರಾರ್‌ಗಳನ್ನು ತಮ್ಮ ಕರ್ತವ್ಯದಿಂದ ಬಿಡುಗಡೆ ಮಾಡಲಾಗುವುದು. ಅವರಿಗೆ ತಲಾ 2 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.

Latest Videos

 

ಅಸ್ಸಾಂನಲ್ಲಿ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ರದ್ದು

ಈ ನಿರ್ಧಾರ ಹೊರಬೀಳುತ್ತಿದ್ದಂತೆ ಆಕ್ರೋಶಗಳು ಹೆಚ್ಚಾಗಿದೆ. ಸರ್ಕಾರ ಯಾವುದೇ ಕಾಯ್ದೆ ರದ್ದು ಮಾಡಬಹುದು, ಹೊಸ ಕಾಯ್ದೆ ಜಾರಿಗೆ ತರಬಹುದು. ಕಾನೂನು ಬದಲಿಸಬಹುದು. ಆದರೆ ಮುಸ್ಲಿಮರು ಷರಿಯತ್ ಹಾಗೂ ಖುರಾನ್ ಮಾತ್ರ ಪಾಲಿಸುತ್ತಾರೆ ಎಂದು ಉತ್ತರ ಪ್ರದೇಶದ ಸಮಾಜವಾದಿ ಪಾರ್ಟಿ ಸಂಸದ ಎಸ್‌ಟಿ ಹಸನ್ ಹೇಳಿದ್ದಾರೆ.

ಪ್ರತಿ ಧರ್ಮ ಅವರದ್ದೆ ಕಾನೂನು ಪಾಲಿಸುತ್ತದೆ. ಮುಸ್ಲಿಮರು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳಿಂದ ಷರಿಯಾ ಕಾನೂನು , ಖುರಾನ್ ಪಾಲಿಸಿಕೊಂಡು ಬರುತ್ತಿದ್ದಾರೆ. ಇದೀಗ ಕಾಯ್ದೆ ಬದಲಾದರೆ ನಂಬಿಕೆ, ಪದ್ಧತಿಗಳು ಬದಲಾಗುವುದಿಲ್ಲ. ಇದು ಮುಸ್ಲಿಮರಿಗೆ ಅನ್ವಯವಾಗುವುದಿಲ್ಲ ಎಂದು ಹಸನ್ ಹೇಳಿದ್ದಾರೆ. ಇತ್ತ ಮೌಲನ ಬದ್ರುದ್ದಿನ್ ಅಜ್ಮಲ್, ಮುಸ್ಲಿಮ್ ವಿವಾಹ ಕಾಯ್ದೆ ರದ್ದು ಮಾಡುವ ಮೂಲಕ ಚುನಾವಣೆ ರಾಜಕೀಯ ಮಾಡುತ್ತಿದ್ದಾರೆ. ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಮರು ತಾಳ್ಮೆ ಪರೀಕ್ಷಿಸಬೇಡಿ ಎಂದು ಮೌಲನಾ ಬದ್ರುದ್ದಿನ್ ಅಜ್ಮಲ್ ಹೇಳಿದ್ದಾರೆ.

ಹೋದಲ್ಲೆಲ್ಲಾ ಸೋಲು, ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಪ್ರಚಾರಕ ಎಂದ ಸಿಎಂ ಹಿಮಂತ ಬಿಸ್ವಾ!

click me!