
ನವದೆಹಲಿ(ಫೆ.24) ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತದಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಅಭಿವೃದ್ಧಿ, ಮೂಲಭೂತ ಸೌಕರ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿ ಸಾಗುತ್ತಿದೆ. ಈ ಮಹತ್ತರ ಬದಲಾವಣೆ, ಭರವಸೆಯ ನಾಳೆಯಲ್ಲಿ ಫೆಬ್ರವರಿ 24ರ ಕೊಡುಗೆ ಅಪಾರ. ಹೌದು, ಬರೋಬ್ಬರಿ 22 ವರ್ಷಗಳ ಹಿಂದೆ ನರೇಂದ್ರ ಮೋದಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಗೆದ್ದ ಮೋದಿ ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದು ಇದೀಗ ಭಾರತದ ಪ್ರಧಾನಿಯಾಗಿ ಹೊಸ ಅಧ್ಯಾಯ ಬರೆದಿದ್ದಾರೆ. 22 ವರ್ಷಗಳ ಹಿಂದಿನ ಇದೇ ದಿನವನ್ನು ಪ್ರಧಾನಿ ಮೋದಿ ಮೆಲುಗು ಹಾಕಿದ್ದಾರೆ.
ಗುಜರಾತ್ ರಾಜಕೀಯ ಹಾಗೂ ಭಾರತದ ರಾಜಕೀಯ ಇತಿಹಾಸದಲ್ಲಿ ಫೆಬ್ರವರಿ 24 ಪ್ರಮುಖ ಘಟ್ಟ. 2002ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಮೋದಿ ಮುಖ್ಯಮಂತ್ರಿಯಾಗುವಾಗ ಶಾಸಕರೂ ಆಗಿರಲಿಲ್ಲ, ವಿಧಾನಪರಿಷತ್ ಸದಸ್ಯರೂ ಅಲ್ಲ. 6 ತಿಂಗಳ ಒಳಗೆ ವಿಧಾನಸಭೆ ಪ್ರವೇಶಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ 24, 2002ರಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ನರೇಂದ್ರ ಮೋದಿ ರಾಜ್‌ಕೋಟ್‌ನಿಂದ ಸ್ಪರ್ಧಿಸಿದ್ದರು.
ಫೆ.26ಕ್ಕೆ ಬೆಂಗಳೂರು ವಿಭಾಗದ 15 ರೈಲು ನಿಲ್ದಾಣ ಪುನರಾಭಿವೃದ್ಧಿಗೆ ಮೋದಿ ಶಂಕುಸ್ಥಾಪನೆ!
ಇದು ನರೇಂದ್ರ ಮೋದಿಯ ಮೊಟ್ಟ ಮೊದಲ ಚುನಾವಣೆಯಾಗಿತ್ತು. ರಾಜ್‌ಕೋಟ್‌ನಿಂದ ಸ್ಪರ್ಧಿಸಿದ ಮೋದಿ, ಅಭೂತಪೂರ್ವ ಗೆಲುವು ದಾಖಲಿಸಿದ್ದರು. ಮೋದಿ ಈ ಗೆಲುವು ಗುಜರಾತ್‌ನಲ್ಲಿ ಹೊಸ ಅಧ್ಯಾಯ ಆರಂಭಗೊಂಡಿತ್ತು. ಈ ಕುರಿತು ಮೋದಿ ಅರ್ಕೈವ್ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಇದೇ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಪ್ರಧಾನಿ ಮೋದಿ, 22ವರ್ಷಗಳ ಹಿಂದಿನ ಸ್ಮರಣೀಯ ದಿನವನ್ನು ಮೆಲುಕು ಹಾಕಿದ್ದಾರೆ.
ನನ್ನ ಹೃದಯದಲ್ಲಿ ಯಾವತ್ತೂ ರಾಜ್‌ಕೋಟ್‌ಗೆ ವಿಶೇಷ ಸ್ಥಾನವಿದೆ. ಈ ರಾಜ್‌ಕೋಟ್ ಜನತೆ ಮೊದಲ ಬಾರಿಗೆ ಸ್ಪರ್ಧಿಸಿದ ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಗೆಲ್ಲಿಸಿದ್ದಾರೆ. ಅಲ್ಲಿಂದ ಇಲ್ಲೀವರೆಗೆ ಜನತಾ ಜನಾರ್ಧನ ಎಂದು ಅವರ ಸೇವೆಗೆ ಬದುಕು ಮುಡಿಪಾಗಿಟ್ಟಿದ್ದೇನೆ. ಜನರಿಗೆ ನ್ಯಾಯ ಒದಗಿಸಲು ಶ್ರಮಿಸಿದ್ದೇನೆ. ವಿಶೇಷ ಅಂದರೆ ಕಾಕತಾಳಿಯವೋ ಏನೋ, ಇಂದು ಮತ್ತು ನಾಳೆ ನಾನು ಗುಜರಾತ್‌ನಲ್ಲಿದ್ದೇನೆ. ಜೊತೆಗೆ ರಾಜ್‌ಕೋಟ್ ಕಾರ್ಯಕ್ರಮದಲ್ಲಿ 5 ಏಮ್ಸ್ ಸಂಸ್ಥೆಗಳನ್ನು ಲೋಕಾರ್ಪಣೆಗೊಳಿಸುತ್ತಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದು ಯಾವ ಭಾಷೆ? ನಶೆಯಲ್ಲಿದ್ದಾರೆ ಯುಪಿ ಯುವ ಸಮೂಹ ಅನ್ನೋ ರಾಹುಲ್ ಮಾತಿಗೆ ಮೋದಿ ಗರಂ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ