ಇತಿಹಾಸ ಬರೆದ ರಝಿಯಾ; ಬಿಹಾರ ಮುಸ್ಲಿಂ ಸಮುದಾಯದ ಮೊದಲ ಮಹಿಳಾ DSP!

By Suvarna News  |  First Published Jun 11, 2021, 7:06 PM IST
  • ಇತಿಹಾಸ ರಚಿಸಿದ ಬಿಹಾರ ಮುಸ್ಲಿಂ ಸಮುದಾಯದ 27 ಹರೆಯದ ಯುವತಿ
  • ಬಿಹಾರ ಮುಸ್ಲಿಂ ಸಮದಾಯದಿಂದ DSP ಆಗಿ ನೇಮಕಗೊಂಡ ಮೊದಲ ಮಹಿಳೆ
  • ರಝಿಯಾ ಸಾಧನೆಗೆ ಎಲ್ಲೆಡೆಗಳಿಂದ ಮೆಚ್ಚುಗೆ ಮಹಾಪೂರ

ಬಿಹಾರ(ಜೂ.11):  ರಝಿಯಾ ಸುಲ್ತಾನ್. 27 ವರ್ಷದ ರಝಿಯಾ ಇದೀಗ ಬಿಹಾರದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಕಾರಣ ಬಿಹಾರದ ಮುಸ್ಲಿಂ ಸಮುದಾಯದಿಂದ ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್(DSP) ಆಗಿ ನೇಮಕಗೊಂಡ ಮೊದಲ ಮಹಿಳೆ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

6ನೇ ಪ್ರಯತ್ನದಲ್ಲಿ UPSC ಪಾಸ್: ಕಾನ್ಸ್‌ಟೇಬಲ್ ಈಗ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್

Tap to resize

Latest Videos

ಗೋಪಾಲಗಂಜ್ ಜಿಲ್ಲೆಯ ಹತುವಾದ ರಝಿಯಾ 64ನೇ ಪಬ್ಲಿಕ್ ಸರ್ವೀಸ್ ಪರೀಕ್ಷೆ ಪಾಸ್ ಮಾಡಿದ್ದಾರೆ. ಇದೇ ಪರೀಕ್ಷೆಯಲ್ಲಿ ಪಾಸ್ ಆದ ರಝಿಯಾ ಸೇರಿದಂತೆ 40 ಮಂದಿ ಬಿಹಾರ್ ಪೊಲೀಸ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ. ರಝಿಯಾ ಬಾಲ್ಯ ಹಾಗೂ ಶಿಕ್ಷಣ ಕಳೆದಿದ್ದು, ಜಾರ್ಖಂಡ್‌ನ ಬೋಕಾರದಲ್ಲಿ.

ಬೊಕಾರೋ ಸ್ಟೀಲ್ ಘಟಕದಲ್ಲಿ ಸ್ಟೆನೋಗ್ರಾಫರ್ ಆಗಿದ್ದ ರಝಿಯಾ ತಂದೆ ಮೊಹಮ್ಮದ್ ಅಸ್ಲಾಂ ಅನ್ಸಾರಿ 2017ರಲ್ಲಿ ಅನಾರೋಗ್ಯದಿಂದ ನಿಧನರಾದರು. ತಾಯಿ ಪೋತ್ಸಾಹದಿಂದ ರಿಝಿಯಾ ಇದೀಗ ಬಿಹಾರ ಪೊಲೀಸ್ ಇಲಾಖೆಯಲ್ಲಿ ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್ ಆಯ್ಕೆ ನೇಮಗೊಂಡಿದ್ದಾಳೆ.

ಅನಾಥ ವೃದ್ಧೆಗೆ 'ಮಗ'ನಾಗಿ ಕೈತುತ್ತು ತಿನ್ನಿಸಿದ ಪೊಲೀಸ್ ಅಧಿಕಾರಿ!

ಓರ್ವ ಸಹೋದರ ಹಾಗೂ 6 ಸಹೋದರಿಯರ ಹೊಂದಿರುವ ರಝಿಯಾ , ಬಾಲ್ಯದಿಂದಲೇ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸು ಹೊತ್ತುಕೊಂಡಿದ್ದೆ. ಈ ಕನಸು ನನಸಾಗಿದೆ ಅನ್ನೋದೇ ಅತೀವ ಸಂತಸ ತಂದಿದೆ ಎಂದಿದ್ದಾರೆ. 

click me!