ಅಸ್ಸಾಂ(ಜೂ.11): ಭಾರತಕ್ಕೆ ಜನಸಂಖ್ಯಾ ನಿಯಂತ್ರಣ ಅತೀ ದೊಡ್ಡ ಸವಾಲು. ಈ ಕುರಿತ ನಿಯಮ ಎಲ್ಲಾ ಧರ್ಮಕ್ಕೆ ಅನ್ವಯವಾಗುವಂತೆ ಮಾಡುವುದು ಕಷ್ಟ. ಹೀಗಾಗಿ ಈ ಹಿಂದೆ ಹಲವು ಬಾರಿ ಜನಸಂಖ್ಯೆ ನಿಯಂತ್ರಣ ಚರ್ಚೆಗೆ ಬಂದಿದೆ. ಆದರೆ ತಾರ್ಕಿಕ ಅಂತ್ಯ ಇದುವರಗೂ ಸಿಕ್ಕಿಲ್ಲ. ಬರಿ ವಿವಾದಕ್ಕೆ ಕಾರಣವಾಗಿದೆ. ಇದೀಗ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ವಲಸೆ ಬಂದ ಮುಸ್ಲಿಮರಲ್ಲಿ ಜನಸಂಖ್ಯೆ ನಿಯಂತ್ರಿಸಲು ಮನವಿ ಮಾಡಿದ್ದಾರೆ.
ಜನಸಂಖ್ಯೆ ಕುಸಿತ, ಹೊಸ ನೀತಿ ಜಾರಿಗೆ ತಂದ ಚೀನಾ, ಕಾರಣ ಏನು?
ಅಸ್ಸಾ ಗಡಿ ಪ್ರದೇಶದಲ್ಲಿ ಭೂ ಒತ್ತುವರಿ, ಅತಿಕ್ರಮಣ ಸೇರಿದಂತೆ ಹಲವು ಸಮಸ್ಯೆಗಳು ಹೆಚ್ಚಾಗುತ್ತಿದೆ. ಬಂಗಾಳದಿಂದ ವಲಸೆ ಬರುವ ಮುಸ್ಲಿಂ ಸಮುದಾಯಗಳಿಂದ ಅಸ್ಸಾಂನಲ್ಲಿ ಸಾಮಾಜಿಕ ಸಮಸ್ಯೆಗಳು ಹೆಚ್ಚಾಗುತ್ತಿದೆ. ಹೀಗಾಗಿ ವಲಸಿಗ ಮುಸ್ಲಿಮರು ಜನಸಂಖ್ಯೆ ನಿಯಂತ್ರಿಸಲು ಕುಟುಂಬ ಯೋಜನೆ ಅನುಸರಿಸಬೇಕು ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಅತಿಕ್ರಮ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ನಿಯಂತ್ರಣ ಕುರಿತು ಪ್ರಶ್ನೆಗೆ ಉತ್ತರಿಸುತ್ತಾ, ಅಸ್ಸಾಂಗೆ ವಲಸೆ ಬಂದು ನೆಲೆಸಿರುವ ಮುಸ್ಲಿಂ ಸಮುದಾಯ ಜನಸಂಖ್ಯೆ ನಿಯಂತ್ರಿಸಬೇಕು ಎಂದಿದ್ದಾರೆ. ಅಸ್ಸಾಂನಲ್ಲಿ ಈಗಾಗೇ ಜನಸಂಖ್ಯಾ ನಿಯಂತ್ರಣ ನೀತಿ ಜಾರಿಯಲ್ಲಿದೆ. ಮುಸ್ಲಿಂ ಸಮುದಾಯದ ಜೊತೆ ಈ ನಿಟ್ಟಿನಲ್ಲಿ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. ಎಲ್ಲರ ಜೊತೆಗೂಡಿ ಒಗ್ಗಟ್ಟಾಗಿ ಸಮಸ್ಯೆ ಬಗೆಹರಿಸಲು ಸಿದ್ಧ ಎಂದು ಶರ್ಮಾ ಹೇಳಿದ್ದಾರೆ.
ಹುಟ್ಟೋ ಮೂರನೇ ಮಗುವಿಗೆ ದಂಡ ಹಾಕಿ, ಜೈಲಿಗೆ ಕಳ್ಸಿ ಎಂದ ಕಂಗನಾ
ಅಸ್ಸಾಂನ ವೈಷ್ಣಮ ಮಠಕ್ಕೆ ಸೇರಿದ ಅರಣ್ಯ ದೇವಾಲಯಗಳ ಜಮೀನಿನಲ್ಲಿ ಅತಿಕ್ರಮಣವಾಗಿದೆ. ಇದು ವಲಸೆ ಮುಸ್ಲಿಂ ಸಮದಾಯದ ಜನಸಂಖ್ಯೆಯಿಂದ ಆಗಿದೆ. ಈ ರೀತಿಯ ಅತಿಕ್ರಮಣವನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ ಹೇಳಿಕೆಗೆ ಅಸ್ಸಾಂ AIYUDF ವಿರೋಧ ವ್ಯಕ್ತಪಡಿಸಿದೆ. ಒಂದು ಸಮುದಾಯ ಗುರಿಯಾಗಿಸಿ ಹೇಳಿಕೆ ನೀಡುತ್ತಿರುವ ಹಿಮಂತ ಬಿಸ್ವಾ ಶರ್ಮಾ ಮಾತುಗಳು ರಾಜಕೀಯ ಪ್ರೇರಿತ ಎಂದಿದ್ದಾರೆ. ಇತ್ತ ಹಲವು ಮುಸ್ಲೀಮ್ ಸಮುದಾಯದ ನಾಯಕರು ಹಿಮಂತ ಬಿಸ್ವಾ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.