ಸೆಲೆಬ್ರೇಷನ್ ನೆಪದಲ್ಲಿ ಬರ್ತ್‌ಡೇ ದಿನವೇ ಬೆಂಕಿ ಹಚ್ಚಿದ ಸ್ನೇಹಿತರು: 21ರ ಯುವಕನ ಸ್ಥಿತಿ ಗಂಭೀರ

Published : Nov 28, 2025, 03:27 PM IST
Youth set ablaze by friends on birthday

ಸಾರಾಂಶ

friends set youth on fire: 21 ವರ್ಷದ ಯುವಕನ ಹುಟ್ಟುಹಬ್ಬದ ಆಚರಣೆಯು ದುರಂತದಲ್ಲಿ ಅಂತ್ಯಗೊಂಡಿದೆ. ತಮಾಷೆಯ ನೆಪದಲ್ಲಿ ಸ್ನೇಹಿತರೇ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೆಲ ಯುವ ತರುಣರ ಹುಟ್ಟುಹಬ್ಬದ ಆಚರಣೆಯೇ ಒಂಥರಾ ವಿಚಿತ್ರ. ಬರ್ತ್‌ಡೇ ಆಚರಿಸುವ ಹುಡುಗನ ಪ್ರಾಣ ಹೋದರೂ ಪರವಾಗಿಲ್ಲ ಎಂಬಂತೆ ಬಹಳ ಅಪಾಯಕಾರಿಯಾಗಿ ಬರ್ತ್‌ಡೇ ಆಚರಿಸ್ತಾರೆ. ಕೆಲ ದಿನಗಳ ಹಿಂದಷ್ಟೇ ಯುವಕನೋರ್ವನನ್ನು ಆತ ಬದುಕಿದ್ದಾನೋ ಸತ್ತಿದ್ದಾನೋ ಎಂಬುದನ್ನು ಗಮನಿಸಲು ಹೋಗದೆ ಸೆಲೆಬ್ರೇಷನ್ ನೆಪದಲ್ಲಿ ಆತನ ಕೈಗಳನ್ನು ಕಟ್ಟಿ ಹಾಕಿ ಮುಖ ತುಂಬ ಕೇಕ್ ಉಜ್ಜಿ ಮೊಟ್ಟೆ ಒಡೆದು ತಲೆ ಮೇಲೆ ಬಕೆಟ್‌ಗಟ್ಟಲೇ ನೀರು ಹಾಗೂ ಬೇರೆ ದ್ರವಗಳು ವಿಸ್ಕಿ ಮುಂತಾದವುಗಳನ್ನು ಸುರಿದು ವಿಚಿತ್ರವಾಗಿ ಬರ್ತ್‌ಡೇ ಆಚರಿಸಿದ ವೀಡಿಯೋವೊಂದು ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.ಆದರೆ ಈಗ ಇಲ್ಲೊಂದು ಕಡೆ ಬರ್ತ್‌ಡೇ ಸೆಲೆಬ್ರೇಷನ್‌ ನೆಪದಲ್ಲಿ ಸ್ನೇಹಿತರೇ ಯುವಕನಿಗೆ ಬೆಂಕಿ ಹಚ್ಚಿ ಫನ್‌ಗಾಗಿ ಹಾಗೆ ಮಾಡಿದ್ವಿ ಎಂದಿದ್ದಾರೆ. ಆದರೆ ಆ ಬರ್ತ್‌ಡೇ ಬಾಯ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬರ್ತ್‌ಡೇ ದಿನವೇ ಸ್ನೇಹಿತನಿಗೆ ಬೆಂಕಿ ಹಚ್ಚಿದ ಪಾಪಿ ಗೆಳೆಯರು:

ಅಂದಹಾಗೆ ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಮುಂಬೈನ ಕುರ್ಲಾ ಪ್ರದೇಶದಲ್ಲಿ ಘಟನೆಗೆ ಸಂಬಂಧಿಸಿದಂತೆ 21ರ ಹರೆಯದ ಯುವಕನ ಐದು ಜನ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 26 ರಂದು 21ರ ಹರೆಯದ ಯುವಕ ಅಬ್ದುಲ್ ರೆಹಮಾನ್ ಮಕ್ಸೂದ್ ಆಲಂ ಖಾನ್ ಎಂಬಾತನ ಬರ್ತ್‌ಡೇ ಇತ್ತು. ಹುಟ್ಟುಹಬ್ಬದ ಹಿಂದಿನ ರಾತ್ರಿಯೇ ಕೇಕ್ ಕತ್ತರಿಸಲು ಬರುವಂತೆ ಅಬ್ದುಲ್‌ನನ್ನು ಆತನ ಗೆಳೆಯರು ಸ್ಥಳವೊಂದಕ್ಕೆ ಕರೆದಿದ್ದಾರೆ. ಆತ ಅಲ್ಲಿಗೆ ತಲುಪಿದ ತಕ್ಷಣ, ಸ್ನೇಹಿತರು ಮೋಜಿನ ಹೆಸರಿನಲ್ಲಿ ಅವನ ಮೇಲೆ ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದ್ದಾರೆ. ಆತನ ಸ್ನೇಹಿತರ ಅತಿರೇಕ ಅಷ್ಟಕ್ಕೆ ಮುಗಿದಿಲ್ಲ, ಇದಾದ ನಂತರ ಅವರು ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

ಸ್ಕೂಟಿಯಿಂದ ಫುಲ್ ಬಾಟಲ್ ಪೆಟ್ರೋಲ್ ತೆಗೆದು ಸುರಿದ ಪಾಪಿಗಳು:

ಸಂತ್ರಸ್ತ ಯುವಕ ಅಬ್ದುಲ್ ರೆಹಮಾನ್ ಮುಂಬೈನ ಕುರ್ಲಾ ನಿವಾಸಿಯಾಗಿದ್ದು, ಮಾತುಂಗಾದ ಕಾಲೇಜಿನಲ್ಲಿ ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ವಿಷಯದಲ್ಲಿ ಎರಡನೇ ವರ್ಷದ ಪದವಿ ಓದುತ್ತಿದ್ದ. ಆರೋಪಿಗಳಲ್ಲಿ ಓರ್ವ ಸ್ಕೂಟಿಯೊಂದರಿಂದ ಫುಲ್ ಬಾಟಲ್ ಪೆಟ್ರೋಲ್ ಹೊರ ತೆಗೆದು ಅಬ್ದುಲ್ ರೆಹಮಾನ್ ಮೇಲೆ ಎರಚಿದ್ದಾರೆ. ಈ ಪ್ರಕರಣದ ಆರೋಪಿಗಳನ್ನು ಅಯಾಜ್ ಮಲಿಕ್, ಅಶ್ರಫ್ ಮಲಿಕ್, ಖಾಸಿಂ ಚೌಧರಿ, ಹುಜೈಫಾ ಖಾನ್ ಮತ್ತು ಷರೀಫ್ ಶೇಖ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲರನ್ನೂ ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಆರೋಪಿಗಳು ನಾವು ಮೋಜಿಗಾಗಿ ಹೀಗೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಘಟನೆ ಸಿಸಿಟಿವಿಯಲ್ಲಿ ಸೆರೆ:

ಅಬ್ದುಲ್ ಸ್ನೇಹಿತರನ್ನು ಭೇಟಿಯಾಗಲು ಕಟ್ಟಡದ ಕೆಳಗಿನ ಪಾರ್ಕಿಂಗ್ ಪ್ರದೇಶಕ್ಕೆ ಹೋದನು. ಅವನು ಅಲ್ಲಿಗೆ ಬಂದ ತಕ್ಷಣ, ಸ್ನೇಹಿತರು ಮೋಜಿನ ಹೆಸರಿನಲ್ಲಿ ಅವನ ಮೇಲೆ ಮೊಟ್ಟೆ ಮತ್ತು ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದ್ದಾರೆ. ಅದಾದ ನಂತರ, ಆರೋಪಿಗಳಲ್ಲಿ ಒಬ್ಬ ಸ್ಕೂಟಿಯಿಂದ ಪೆಟ್ರೋಲ್ ತುಂಬಿದ ಬಾಟಲಿಯನ್ನು ಹೊರತೆಗೆದು ಅಬ್ದುಲ್ ಮೇಲೆ ಸುರಿಯಲು ಪ್ರಾರಂಭಿಸಿದ್ದಾರೆ. ಅಬ್ದುಲ್ ರೆಹಮಾನ್ ಪೆಟ್ರೋಲ್ ವಾಸನೆಯ ಅರಿವಾಗುತ್ತಿದ್ದಂತೆ ಅವನು ತಕ್ಷಣ ತನ್ನನ್ನು ತಾನು ಬಿಡಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದಾನೆ. ಆದರೆ ಪಾಪಿ ಸ್ನೇಹಿತರು ಅವನನ್ನು ಹಿಡಿದು ಲೈಟರ್ ಹಚ್ಚಿ ಬೆಂಕಿ ಹಚ್ಚಿದ್ದಾರೆ. ಇದರಿಂದ ಯುವಕನ ಬಟ್ಟೆಯಿಂದ ಬೆಂಕಿಯ ಜ್ವಾಲೆಗಳು ಮೇಲೇರುತ್ತಿದ್ದಂತೆ ಅಬ್ದುಲ್ ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದ್ದಾನೆ. ಆದರೆ ಅವನ ಸ್ನೇಹಿತರು ಅವನನ್ನು ರಕ್ಷಿಸುವ ಬದಲು ಆತನನ್ನು ಅಲ್ಲೇ ಬಿಟ್ಟು ಸ್ಥಳದಿಂದ ಓಡಿಹೋಗಿದ್ದಾರೆ. ಕಟ್ಟಡದಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಆಗಿದೆ.

ಇದನ್ನೂ ಓದಿ: ಚೇರ್ ಮುರಿದು ಹಾಕಿ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು: ಕೋಪದಿಂದ ಹೊರಟು ಹೋದ ಬಿಗ್ಬಾಸ್ ಸ್ಪರ್ಧಿ

ನಂತರ ಅಬ್ದುಲ್ ತನ್ನ ಶರ್ಟ್ ತೆಗೆದು ಎಸೆದು ಕಟ್ಟಡದ ಕಾವಲುಗಾರನ ಕೋಣೆಯ ಕಡೆಗೆ ಓಡಿ ಹೋಗಿ ಸಹಾಯಕ್ಕಾಗಿ ಕಿರುಚಿದ್ದಾನೆ. ನಂತರ ಅವನು ಕಾವಲುಗಾರನಿಂದ ಬಾಟಲಿಯನ್ನು ತೆಗೆದುಕೊಂಡು ನಲ್ಲಿಯಿಂದ ನೀರು ತೆಗೆದುಕೊಂಡು ತಾನೇ ಸ್ವತಃ ಬೆಂಕಿ ನಂದಿಸಿದ್ದಾನೆ. ನಂತರ ಅವನ ಸ್ನೇಹಿತರಲ್ಲಿ ಒಬ್ಬನಾದ ಹುಜೈಫಾ ವಾಪಸ್ ಬಂದು ಅಬುಲ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಪಾಪಿ ಸ್ನೇಹಿತರ ಅವಾಂತರದಿಂದಾಗಿ ಅಬ್ದುಲ್ ತಲೆ, ಮುಖ, ಕಿವಿ, ಕೈ ಮತ್ತು ಎದೆಯ ಮೇಲೆ ಸುಟ್ಟ ಗಾಯಗಳಾಗಿವೆ ಅಬ್ದುಲ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 110 ರ ಅಡಿಯಲ್ಲಿ ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆಗೆ ಯತ್ನ ಪ್ರಕರಣವನ್ನು ದಾಖಲಿಸಿದ್ದಾರೆ.

ಆರೋಪಿಗಳನ್ನು ಅಯಾಜ್ ಮಲಿಕ್, ಅಶ್ರಫ್ ಮಲಿಕ್, ಖಾಸಿಂ ಚೌಧರಿ, ಹುಜೈಫಾ ಖಾನ್ ಮತ್ತು ಷರೀಫ್ ಶೇಖ್‌ನನ್ನು ಬಂಧಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಆರೋಪಿಗಳು ನಾವು ಮೋಜು ಮಾಡುತ್ತಿದ್ದೇವೆ ಎಂದು ಹೇಳಿದರು ಎಂದು ಪೊಲೀಸರು ಹೇಳಿದ್ದಾರೆ. ಅಬ್ದುಲ್ ರೆಹಮಾನ್ ಅವರ ಸಹೋದರನ ಪ್ರಕಾರ, ಐದು ಆರೋಪಿಗಳು ಅಬ್ದುಲ್ ಅವರ 21 ನೇ ಹುಟ್ಟುಹಬ್ಬವನ್ನು ಆಚರಿಸಲು ತಡ ರಾತ್ರಿ ಕರೆ ಮಾಡಿ ಕೇಕ್ ಕತ್ತರಿಸಲು ಕರೆದರು. ಸ್ನೇಹಿತರ ಕರೆಯಂತೆ ಅಬ್ದುಲ್ ಸ್ನೇಹಿತರನ್ನು ಭೇಟಿ ಮಾಡಲು ಕಟ್ಟಡದ ಕೆಳಗಿನ ಪಾರ್ಕಿಂಗ್ ಪ್ರದೇಶಕ್ಕೆ ಹೋದಾಗ ದುರುಳ ಸ್ನೇಹಿತರು ಈ ಕೃತ್ಯವೆಸಗಿದ್ದಾರೆ.

ಇದನ್ನೂ ಓದಿ: ಕಾರಿನ ಮೇಲೆ ಉರುಳಿ ಬಿದ್ದ ಜಲ್ಲಿಕಲ್ಲು ಸಾಗಿಸುತ್ತಿದ್ದ ಟ್ರಕ್ : ಒಂದೇ ಕುಟುಂಬದ 7 ಜನ ಸ್ಥಳದಲ್ಲೇ ಸಾವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ