ಬ್ರಹ್ಮೋಸ್‌ ವಿಜ್ಞಾನಿ ಸೇರಿ ಒಂದೇ ತಿಂಗಳ ಅಂತರದಲ್ಲಿಒಂದೇ ರೀತಿ 2 ವಿಜ್ಞಾನಿಗಳ ಹಠಾತ್ ಸಾವು: ವೈದ್ಯರ ಅನುಮಾನ

Published : Nov 28, 2025, 01:09 PM IST
DRDO scientist Aditya verma and Akash deep gupta

ಸಾರಾಂಶ

DRDO scientists mysterious death: ಒಂದು ವಾರದ ಅಂತರದಲ್ಲಿ ಇಬ್ಬರು ಡಿಆರ್‌ಡಿಒ ವಿಜ್ಞಾನಿಗಳು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇಬ್ಬರೂ ಮದುವೆಯಾದ ಕೆಲವೇ ದಿನಗಳಲ್ಲಿ ಹಠಾತ್ತನೆ ಅಸ್ವಸ್ಥರಾಗಿ ನಿಧನರಾಗಿದ್ದು, ವೈದ್ಯರು ಹೃದಯಾಘಾತದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. 

ಇಬ್ಬರು ಡಿಆರ್‌ಡಿಒ ವಿಜ್ಞಾನಿಗಳ ಹಠಾತ್ ಸಾವು:

ದೆಹಲಿ/ಅಲ್ವಾರ್: ಒಂದು ವಾರದೊಳಗೆ ಇಬ್ಬರು ಡಿಆರ್‌ಡಿಒ ವಿಜ್ಞಾನಿಗಳು ಸಾವನ್ನಪ್ಪಿದ್ದು, ಸಾವನ್ನಪ್ಪಿದ ರೀತಿಯ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಬ್ಬರು ಡಿಆರ್‌ಡಿಒ ವಿಜ್ಞಾನಿಗಳಾದ 30 ವರ್ಷದ ಆಕಾಶ್‌ದೀಪ್ ಗುಪ್ತಾ ಹಾಗೂ 28 ವರ್ಷದ ವಿಜ್ಞಾನಿ ಆದಿತ್ಯ ವರ್ಮಾ ಅವರು ಒಂದು ವಾರದ ಅಂತರದಲ್ಲಿ ಒಂದೇ ರೀತಿಯಿಂದ ಸಾವನ್ನಪ್ಪಿದ್ದಾರೆ. ಇಬ್ಬರೂ ಅಸ್ವಸ್ಥರಾದ ಸ್ವಲ್ಪ ಸಮಯದ ನಂತರ ಇದ್ದಕ್ಕಿದ್ದಂತೆ ಸಾವು ಸಂಭವಿಸಿದೆ. ಹೀಗಾಗಿ ಅವರ ಸಾವು ಈಗ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. 30 ವರ್ಷದ ವಿಜ್ಞಾನಿ ಆಕಾಶ್‌ದೀಪ್ ಗುಪ್ತಾ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಆಕ್ಟೋಬರ್ 21ರಂದು ಲಕ್ನೋದ ಮನೆಯಲ್ಲಿದ್ದ ಇದ್ದಾಗ ಅವರು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿ ನಿಧನರಾಗಿದ್ದಾರೆ. ಹಾಗೆಯೇ ಮತ್ತೊಬ್ಬ ವಿಜ್ಞಾನಿ 28 ವರ್ಷದ ಆದಿತ್ಯ ವರ್ಮಾ ಅವರು ಮದುವೆಯಾದ ಕೇವಲ 2 ದಿನಗಳಲ್ಲಿ ಅಂದರೆ ನವಂಬರ್‌ 27ರಂದು ಸಾವನ್ನಪ್ಪಿದ್ದಾರೆ. ಇವರ ಹಠಾತ್ ಸಾವಿನಿಂದಾಗಿ ಅವರ ಕುಟುಂಬದವರು ಇದು ಹೃದಯಾಘಾತವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದನ್ನು ವೈದ್ಯರು ಖಚಿತಪಡಿಸಿಲ್ಲ. ಎರಡೂ ಸಾವುಗಳಿಗೆ ನಿಖರವಾದ ಕಾರಣಗಳು ಇನ್ನೂ ನಿಗೂಢವಾಗಿದ್ದು, ಪ್ರಕರಣಗಳು ಈಗ ಚರ್ಚೆಯಲ್ಲಿವೆ.

ಬ್ರಹ್ಮೋಸ್ ಕ್ಷಿಪಣಿ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್‌ದೀಪ್

ಡಿಆರ್‌ಡಿಒ ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಾಗಿದೆ. ಇದನ್ನು 1958 ರಲ್ಲಿ ಸ್ಥಾಪಿಸಲಾಯಿತು. ಇದರ ಪ್ರಮುಖ ಉದ್ದೇಶ ಭಾರತವನ್ನು ಆಧುನಿಕ ರಕ್ಷಣಾ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಳಿಸುವುದು ಮತ್ತು ದೇಶವನ್ನು ಆ ವಿಚಾರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದು. ಹೀಗಾಗಿ ಡಿಆರ್‌ಡಿಒದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ದೇಶದ ಪ್ರಮುಖ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುತ್ತಾರೆ. ಮೃತರಾದ ಲಕ್ನೋ ಮೂಲದ ವಿಜ್ಞಾನಿ ಆಕಾಶ್‌ದೀಪ್ ಗುಪ್ತಾ ಬ್ರಹ್ಮೋಸ್ ಕ್ಷಿಪಣಿ ಕಾರ್ಯಾಚರಣೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗೆಯೇ ವರ್ಮಾ ಅವರು ಮೈಸೂರಿನ ಡಿಆರ್‌ಡಿಒದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸುಮಾರು ಎರಡು ತಿಂಗಳ ಹಿಂದೆ ಅಲ್ಲಿ ಕೆಲಸಕ್ಕೆ ಸೇರಿದ್ದರು. ಆದರೆ ಅವರ ಕೆಲಸದ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ.

ಹೃದಯಾಘಾತದಿಂದ ಸಾವಿನ ಸಾಧ್ಯತೆ ಅಲ್ಲಗಳೆದ ವೈದ್ಯರು

ರಾಜಸ್ಥಾನದ ಅಲ್ವಾರ್‌ದಲ್ಲಿ ಆದಿತ್ಯ ವರ್ಮಾ ಅವರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಕೀಯ ನ್ಯಾಯಶಾಸ್ತ್ರಜ್ಞ ಡಾ. ಪಿಸಿ ಸೈನಿ ಅವರು ಈ ಬಗ್ಗೆ ಮಾತನಾಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಏನನ್ನಾದರೂ ಹೇಳಬಹುದು, ಆದರೆ ಹೃದಯಾಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಕಡಿಮೆ ಹಾಗೂ ಅವರ ದೇಹದ ಮೇಲೆ ಯಾವುದೇ ಬಾಹ್ಯ ಗುರುತುಗಳಿಲ್ಲ ಎಂದು ಹೇಳಿದ್ದಾರೆ. ಆದಿತ್ಯ ಬೆಳಗ್ಗೆ 5 ಗಂಟೆ ಸುಮಾರಿಗೆ ಶೌಚಾಲಯಕ್ಕೆ ಹೋಗಿದ್ದರು. ಅವರು ಬಹಳ ಸಮಯವಾದರೂ ಹಿಂತಿರುಗದಿದ್ದಾಗ, ಮನೆಯವರು ಬಾಗಿಲು ಒಡೆದು ನೋಡಿದಾಗ ಅವರು ಸ್ನಾನಗೃಹದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಅಲ್ವಾರ್‌ನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯ ಎಎಸ್‌ಐ ಸಮಯ್ದೀನ್ ಹೇಳಿದ್ದಾರೆ. ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಕುಟುಂಬವು ಯಾವುದೇ ಅನುಮಾನವನ್ನು ವ್ಯಕ್ತಪಡಿಸಿಲ್ಲ. ಈಗ ನಾವು ಮರಣೋತ್ತರ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಹನಿಮೂನ್ ಪ್ಲಾನ್ ಮಾಡಿ ಟಿಕೆಟ್ ಕೂಡ ಬುಕ್ ಆಗಿತ್ತು.

ವಿಜ್ಞಾನಿ ಆದಿತ್ಯ ಅವರು ನವ್ಯಾ ಅವರನ್ನು ನವೆಂಬರ್ 25ರಂದು ಮದುವೆಯಾಗಿದ್ದರು. ನವೆಂಬರ್ 29 ರಿಂದ ಸುಮಾರು 10 ದಿನಗಳ ಕಾಲ ಹನಿಮೂನ್ ಹೋಗುವ ಪ್ಲಾನ್ ಮಾಡಿದ್ದರು. ಅದಕ್ಕಾಗಿ ಟಿಕೆಟ್‌ಗಳನ್ನು ಬುಕ್ ಮಾಡಲಾಗಿತ್ತು ಎಂದು ಆದಿತ್ಯ ಅವರ ಕುಟುಂಬದವರು ಹೇಳಿದ್ದಾರೆ. ಒಂದು ವರ್ಷದ ಹಿಂದೆ ಆದಿತ್ಯಗೆ ಮದುವೆ ನಿಶ್ಚಯ ಮಾಡಲಾಗಿತ್ತು.

6 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಆಕಾಶ್‌ದೀಪ್ ಗುಪ್ತಾ

ಹಾಗೆಯೇ ಮೃತರಾದ ಮತ್ತೊಬ್ಬ ವಿಜ್ಞಾನಿ ಆಕಾಶದೀಪ್ ಗುಪ್ತಾ ಮೂಲತಃ ಲಕ್ನೋದವರು. ಅವರ ಪೋಷಕರು ಅಲಂಬಾಗ್‌ನ ಓಂ ನಗರದಲ್ಲಿ ವಾಸಿಸುತ್ತಿದ್ದಾರೆ. ಅವರು ಕೆನರಾ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ತಮ್ಮ ಪತ್ನಿ ಭಾರತಿ ಗುಪ್ತಾ ಅವರೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದರು. ಇಬ್ಬರು ಏಪ್ರಿಲ್‌ನಲ್ಲಿ ವಿವಾಹವಾಗಿದ್ದು ದೀಪಾವಳಿಗೆ ಮನೆಗೆ ಬಂದಿದ್ದರು.

ಆಕಾಶ್‌ದೀಪ್ ಗುಪ್ತಾ ತಂದೆ ಕುಲದೀಪ್ ಗುಪ್ತಾ ಎಂಜಿನಿಯರ್ ಆಗಿದ್ದು, ತಮ್ಮ ಮಗನಿಗೆ ದೆಹಲಿಯಲ್ಲಿ ಕೆಲಸ ನಿಯೋಜನೆಯಾಗಿದ್ದು, ಸೊಸೆಯೊಂದಿಗೆ ದೀಪಾವಳಿಗೆ ಮನೆಗೆ ಬಂದಿದ್ದಾಗಿ ತಿಳಿಸಿದ್ದರು. ಎಲ್ಲರೂ ದೀಪಾವಳಿಯನ್ನು ಸಂತೋಷದಿಂದಲೇ ಆಚರಿಸಿದರು. ಊಟದ ನಂತರ ಎಲ್ಲರೂ ಮಲಗಲು ಹೋದರು. ಸ್ವಲ್ಪ ಸಮಯದ ನಂತರ, ಅವರ ಮಗನ ಆರೋಗ್ಯ ಹದಗೆಡಲು ಪ್ರಾರಂಭಿಸಿತು ಮತ್ತು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ, ವೈದ್ಯರು ಆಕಾಶ್ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ