ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವೊಂದಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ವಿಮಾನವನ್ನು ಮಧ್ಯ ಆಗಸದಲ್ಲೇ ದೆಹಲಿಯತ್ತ ತಿರುಗಿಸಿದ ಘಟನೆ ನಡೆದಿದೆ.
ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವೊಂದಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ವಿಮಾನವನ್ನು ಮಧ್ಯ ಆಗಸದಲ್ಲೇ ದೆಹಲಿಯತ್ತ ತಿರುಗಿಸಿದ ಘಟನೆ ನಡೆದಿದೆ. ಏರ್ ಇಂಡಿಯಾ ಎಐ-119 ಸಂಖ್ಯೆಯ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾನದಿಂದ ನ್ಯೂಯಾರ್ಕ್‌ಗೆ ಹೊರಟಿತ್ತು. ಆದರೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆ ಈ ವಿಮಾನವನ್ನು ದೆಹಲಿಯತ್ತ ತಿರುಗಿಸಲಾಯ್ತು, ದೆಹಲಿಯ ಇಂದಿರಾಗಾಂಧಿ ವಿಮಾನದಲ್ಲಿ ಲ್ಯಾಂಡ್ ಆದ ವಿಮಾನವನ್ನು ಸಂಪೂರ್ಣ ತಪಾಸಣೆ ಮಾಡಲಾಯ್ತು. ಆದರೆ ಬಾಂಬ್ ಪತ್ತೆಯಾಗಿಲ್ಲ.
ಈ ಬಗ್ಗೆ ದೆಹಲಿ ಏರ್‌ಪೋರ್ಟ್ ಡಿಸಿಪಿ ಉಷಾ ರಂಗಾನಿ ಪ್ರತಿಕ್ರಿಯಿಸಿದ್ದು 'ಬಾಂಬ್ ಬೆದರಿಕೆಯಿಂದ ಉಂಟಾದ ಭದ್ರತಾ ಕಳವಳದಿಂದಾಗಿ ಮುಂಬೈನಿಂದ ನ್ಯೂಯಾರ್ಕ್‌ಗೆ ಚಲಿಸುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ದೆಹಲಿಗೆ ತಿರುಗಿಸಲಾಗಿಯ್ತು. ವಿಮಾನದಲ್ಲಿರುವ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಗುಣಮಟ್ಟದ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಗಮನವಿಟ್ಟು ಪರಿಶೀಲಿಸಲಾಯ್ತು. ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿನ ಟ್ವೀಟ್ ಮಾಡಿ ಈ ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ಡಿಸಿಪಿ ಐಜಿಐ, ಉಷಾ ರಂಗಾನಿ ಮಾಹಿತಿ ನೀಡಿದರು.
ಬೆಲ್ಲಿ ಲ್ಯಾಂಡಿಂಗ್‌ಗೆ ಅನುಮತಿ ನೀಡಿದ್ದ ಡಿಜಿಸಿಎ, 140 ಪ್ರಯಾಣಿಕರಿದ್ದ ವಿಮಾನ ಸೇಫ್ ಆಗಿ ಸಾಮಾನ್ಯ ಲ್ಯಾಂಡಿಂಗ್!
ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ದೆಹಲಿಯತ್ತ ತಿರುಗಿಸಲಾಯ್ತು ಎಂದು ಏರ್ ಇಂಡಿಯಾ ಹೇಳಿದೆ. ಅಕ್ಟೋಬರ್ 14 ರಂದು ಅಂದರೆ ಇಂದು ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆಗೆ ಮುಂಬೈಯಿಂದ ತೆರಳುತ್ತಿದ್ದ AI119 ವಿಮಾನಕ್ಕೆ ಬೆದರಿಕೆ ಸಂದೇಶ ಬಂದಿದ್ದು, ಹೀಗಾಗಿ ಸರ್ಕಾರದ ಭದ್ರತಾ ನಿಯಂತ್ರಣ ಸಮಿತಿಯ ಸೂಚನೆಗಳ ಮೇರೆಗೆ ವಿಮಾನವನ್ನು ದೆಹಲಿಗೆ ತಿರುಗಿಸಲಾಯಿತು. ಎಲ್ಲಾ ಪ್ರಯಾಣಿಕರು ಇಳಿದು ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿದ್ದಾರೆ. ಈ ಅನಿರೀಕ್ಷಿತ ಅಡಚಣೆಯಿಂದ ನಮ್ಮ ಪ್ರಯಾಣಿಕರಿಗೆ ಆಗುವ ಅನಾನುಕೂಲತೆಯನ್ನು ಕಡಿಮೆ ಮಾಡಲು ಏರ್‌ಪೋರ್ಟ್‌ನಲ್ಲಿರುವ ನಮ್ಮ ಗ್ರೌಂಡ್ ಸಿಬ್ಬಂದಿ ಅವರೊಂದಿಗೆ ಸಹಕರಿಸುತ್ತಿದ್ದಾರೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಬಾಂಬ್ ಬೆದರಿಕೆಯಂತಹ ಸಂದರ್ಭಗಳಲ್ಲಿ ವಿಮಾನವನ್ನು ಮತ್ತೊಮ್ಮೆ ಟೇಕಾಫ್ ಮಾಡುವ ಮೊದಲು ಮತ್ತೆ ಸಂಪೂರ್ಣ ಭದ್ರತಾ ತಪಾಸಣೆ ಮಾಡಬೇಕಾಗುತ್ತದೆ. ಮುಂಬೈನಿಂದ ತಡರಾತ್ರಿ 1.40ಕ್ಕೆ ಟೇಕಾಫ್ ಆಗಬೇಕಿದ್ದ ಈ ವಿಮಾನವೂ ಇಂದು ನಸುಕಿನ ಜಾವ 2.27ರ ಸಮಯದಲ್ಲಿ ಟೇಕಾಫ್ ಆಗಿತ್ತು. ಇದಾಗಿ ಕೆಲ ಹೊತ್ತಿನಲ್ಲಿ ಬೆದರಿಕೆ ಕರೆ ಬಂದಿದ್ದು, ಒಂದೂವರೆ ಗಂಟೆಯ ನಂತರ ದೆಹಲಿಯಲ್ಲಿ ಮತ್ತೆ ಲ್ಯಾಂಡ್ ಆಗಿದೆ. ವಿಮಾನದಿಂದ ಮುಂಜಾನೆ 4.10ರ ಸುಮಾರಿಗೆ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಆದರೆ ಈ ಬಾಂಬ್ ಬೆದರಿಕೆ ಸಂದೇಶ ನಿಜವೇ ಅಥವಾ ನಕಲಿಯೇ ಎಂಬುದು ಇನ್ನು ಖಚಿತವಾಗಿಲ್ಲ.
Breaking: ಹೈಡ್ರಾಲಿಕ್ ವೈಫಲ್ಯ, ವಾಯುಮಾರ್ಗದಲ್ಲೇ ಎಮರ್ಜೆನ್ಸಿ ಘೋಷಿಸಿದ ಏರ್ ಇಂಡಿಯಾ ವಿಮಾನ