26/11 ದೋಷಿಗಳು ಇನ್ನೂ ಶಿಕ್ಷೆಗೆ ಗುರಿಯಾಗಿಲ್ಲ: ಪಾಕ್, ಚೀನಾ ವಿರುದ್ಧ ಜೈಶಂಕರ್‌ ಕಿಡಿ

By Kannadaprabha NewsFirst Published Oct 29, 2022, 10:03 AM IST
Highlights

ದೇಶದ ಅತ್ಯಂತ ಭೀಕರ ಉಗ್ರ ದಾಳಿಗಳಲ್ಲೊಂದಾದ 26/11 ದಾಳಿ ಸಂಚುಕೋರರಿಗೆ ಇನ್ನೂ ಶಿಕ್ಷೆಯಾಗದೆ ಉಳಿದಿದ್ದು, ಇದು ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟದ ವಿಶ್ವಾಸಾರ್ಹತೆ ದುರ್ಬಲಗೊಳಿಸಿದೆ ಎಂದು ದಾಳಿಯ ಸಂತ್ರಸ್ತರು ಹಾಗೂ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಕಿಡಿಕಾರಿದ್ದಾರೆ.

ಮುಂಬೈ: ದೇಶದ ಅತ್ಯಂತ ಭೀಕರ ಉಗ್ರ ದಾಳಿಗಳಲ್ಲೊಂದಾದ 26/11 ದಾಳಿ ಸಂಚುಕೋರರಿಗೆ ಇನ್ನೂ ಶಿಕ್ಷೆಯಾಗದೆ ಉಳಿದಿದ್ದು, ಇದು ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟದ ವಿಶ್ವಾಸಾರ್ಹತೆ ದುರ್ಬಲಗೊಳಿಸಿದೆ ಎಂದು ದಾಳಿಯ ಸಂತ್ರಸ್ತರು ಹಾಗೂ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಕಿಡಿಕಾರಿದ್ದಾರೆ. ಇದೇ ವೇಳೆ, ‘ವಿಶ್ವಸಂಸ್ಥೆಯು ಭಯೋತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಮಟ್ಟಹಾಕಬೇಕು. ಪಾಕಿಸ್ತಾನದಲ್ಲಿರುವ 26/11 ದಾಳಿಯ ರೂವಾರಿಗಳ ಹೆಡೆಮುರಿ ಕಟ್ಟಬೇಕು’ ಎಂದು ಅವರು ಒಕ್ಕೊರಲ ಮನವಿ ಮಾಡಿದ್ದಾರೆ.

26/11 ದಾಳಿ ನಡೆದ ಮುಂಬೈನ ತಾಜ್‌ ಹೋಟೆಲ್‌ನಲ್ಲಿ (Taj Hotel) ಶುಕ್ರವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಭಯೋತ್ಪಾದನೆ ವಿರೋಧಿ ಕಮ್ಮಟವೊಂದನ್ನು (anti-terrorism conference) ಹಮ್ಮಿಕೊಂಡಿತ್ತು. ಇದರಲ್ಲಿ ಭಾಗವಹಿಸಿದ ಸಂತ್ರಸ್ತೆ ದೇವಿಕಾ (Devika) ಹಾಗೂ ಇತರ ಸಂತ್ರಸ್ತರು, ತಾವು ಉಗ್ರರ ದಾಳಿಗೆ ಸಿಲುಕಿದ ಭಯಾನಕ ಕ್ಷಣಗಳನ್ನು ವಿವರಿಸಿದರು. ದಾಳಿಯ ರೂವಾರಿಗಳಿಗೆ ಶಿಕ್ಷೆ ಆಗುವವವರೆಗೆ ಸಂತ್ರಸ್ತರಿಗೆ ಪೂರ್ಣ ನ್ಯಾಯ ಸಿಗದು ಎಂದು ಭಾವುಕರಾಗಿ ಹೇಳಿದರು.

ಸತ್ತ ಎಂದು ಘೋಷಿಸಿದ್ದ ಮುಂಬೈ ದಾಳಿ ಉಗ್ರನಿಗೆ 15 ವರ್ಷ ಜೈಲು ಶಿಕ್ಷೆ ನೀಡಿದ ಪಾಕ್!

ಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ (External Affairs Minister) ಜೈಶಂಕರ್‌, ‘ತಾಜ್‌ ಹೋಟೆಲ್‌ (Taj Hotel) ಸಹ ಉಗ್ರರ ಭೀಕರ ದಾಳಿ ಎದುರಿಸಿದ ಸ್ಥಳವಾಗಿತ್ತು. 26/11 ದಾಳಿಕೋರರು ಇನ್ನೂ ಹಾಯಾಗಿ ಓಡಾಡುತ್ತಿದ್ದು, ಅವರಿಗೆ ಶಿಕ್ಷೆಯೇ ಆಗುತ್ತಿಲ್ಲ. ಇನ್ನು ಕೆಲವು ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವ ವಿಷಯದಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ರಾಜಕೀಯ ಒತ್ತಡಕ್ಕೆ ಮಣಿಯುತ್ತಿದೆ. ಇದು ವಿಷಾದನೀಯ’ ಎಂದರು. ಈ ಮೂಲಕ ಪಾಕಿಸ್ತಾನ ಹಾಗೂ ಪಾಕ್‌ಗೆ (Pakistan) ಬೆಂಬಲ ನೀಡುತ್ತಿರುವ ಚೀನಾ (China) ಹೆಸರೆತ್ತದೇ ಕಿಡಿಕಾರಿದರು.

26/11 Attack: ಮರೆಯದಿರಿ ನಮ್ಮ ಹೋರಾಟ, ಮರೆಯಲಾಗದು ಕಾಂಗ್ರೆಸ್ ನಾಟಕ; ರಾಜೀವ್ ಚಂದ್ರಶೇಖರ್ ಸಂದೇಶ

ಹೀಗಾಗಿ ಉಗ್ರರನ್ನು ಬೇರು ಸಮೇತ ಕಿತ್ತು ಹಾಕಲು ಅವರಿಗೆ ಸಿಗುವ ಹಣಕಾಸಿನ ನೆರವಿಗೆ (financial aid) ಕಡಿವಾಣ ಹಾಕಬೇಕು ಎಂದು ಕರೆ ನೀಡಿದರು. ಮುಂಬೈನಲ್ಲಿ ಆದ ದಾಳಿ ಕೇವಲ ಮುಂಬೈನಲ್ಲಿ ಮಾತ್ರವಲ್ಲ ಇಡೀ ವಿಶ್ವ ಸಮುದಾಯದ ಮೇಲೆ ನಡೆದ ಭೀಕರ ದಾಳಿಯಾಗಿತ್ತು. ನ.26, 2008ರಂದು ನಡೆದ ಭೀಕರ ದಾಳಿಯಲ್ಲಿ 140 ಭಾರತೀಯರು ಹಾಗೂ 23 ವಿವಿಧ ದೇಶದ 26 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು.

click me!