7 ತಿಂಗಳು ಕೋಮಾದಲ್ಲಿದ್ದೇ ಮಗುವಿಗೆ ಜನ್ಮವಿತ್ತ ಅಮ್ಮ!

Published : Oct 29, 2022, 07:14 AM IST
 7 ತಿಂಗಳು ಕೋಮಾದಲ್ಲಿದ್ದೇ ಮಗುವಿಗೆ ಜನ್ಮವಿತ್ತ ಅಮ್ಮ!

ಸಾರಾಂಶ

ಇದೊಂದು ಮನಕಲಕುವ ಘಟನೆ. ಮಹಿಳೆ ರಸ್ತೆ ಅಪಘಾತದಲ್ಲಿ ಪ್ರಜ್ಞಾಹೀನಳಾದಳು. ಮೇಲಾಗಿ ಆಕೆ ಗರ್ಭಿಣಿ. 7 ತಿಂಗಳಾದರೂ ಪ್ರಜ್ಞೆ ಬರಲಿಲ್ಲ. ಆದರೂ ಉದರದಲ್ಲಿರುವ ಮಗುವಿಗೆ ಏನೂ ಆಗಲಿಲ್ಲ. ಈಗ ಈಕೆ ಕೋಮಾವಸ್ಥೆಯಲ್ಲಿದ್ದರೂ ಆರೋಗ್ಯವಂತ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ.

ನವದೆಹಲಿ: ಇದೊಂದು ಮನಕಲಕುವ ಘಟನೆ. ಮಹಿಳೆ ರಸ್ತೆ ಅಪಘಾತದಲ್ಲಿ ಪ್ರಜ್ಞಾಹೀನಳಾದಳು. ಮೇಲಾಗಿ ಆಕೆ ಗರ್ಭಿಣಿ. 7 ತಿಂಗಳಾದರೂ ಪ್ರಜ್ಞೆ ಬರಲಿಲ್ಲ. ಆದರೂ ಉದರದಲ್ಲಿರುವ ಮಗುವಿಗೆ ಏನೂ ಆಗಲಿಲ್ಲ. ಈಗ ಈಕೆ ಕೋಮಾವಸ್ಥೆಯಲ್ಲಿದ್ದರೂ ಆರೋಗ್ಯವಂತ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಈ ಅಚ್ಚರಿಯ ಪ್ರಸಂಗ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿದೆ.

ಮಾ. 31ರಂದು ಬುಲಂದ್‌ಶಹರ್‌ (Bulandshahr)ಮೂಲದ ಗರ್ಭಿಣಿಯಾಗಿದ್ದ(pregnant) ಮಹಿಳೆ ಹೆಲ್ಮೆಟ್‌ ಧರಿಸದೇ ಗಂಡನ ಜತೆಯಲ್ಲಿ ದ್ವಿಚಕ್ರ (Two wheeler) ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತಕ್ಕೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿದ್ದಳು. ತಲೆಗೆ ಏಟು ಬಿದ್ದ ಕಾರಣ ಅವಳು ಇನ್ನೂ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಳು. ಬಳಿಕ ಆಕೆಯನ್ನು ಏಮ್ಸ್‌ಗೆ (AIIMS) ದಾಖಲಿಸಲಾಯಿತು.

ಕೋಮಾದಲ್ಲಿದ್ದಾರೆಂದು 18 ತಿಂಗಳು ಐಟಿ ಅಧಿಕಾರಿಯ ಮೃತ ದೇಹ ಮನೆಯಲ್ಲಿಟ್ಟ ಕುಟುಂಬ

ಆಶ್ಚರ್ಯವೆಂಬಂತೆ ಮಹಿಳೆ ಗಂಭೀರ ರಸ್ತೆ ಅಪಘಾತಕ್ಕೆ ತುತ್ತಾದರೂ ಗರ್ಭದಲ್ಲಿದ್ದ ಮಗುವಿಗೆ (unborn child) ಯಾವುದೇ ಹಾನಿಯಾಗಿರಲಿಲ್ಲ. ಹೀಗಾಗಿ ಗರ್ಭಪಾತ ಮಾಡಿಸುವ ಬದಲು ಆಕೆಯ ಮನೆಯವರು ಮಗುವನ್ನು ಉಳಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡರು. ಮಹಿಳೆಯನ್ನು 3 ತಿಂಗಳು ವೆಂಟಿಲೇಟರ್‌ನಲ್ಲಿಟ್ಟು ಬಳಿಕ ಆಕೆಗೆ ಹಲವಾರು ಶಸ್ತ್ರಚಿಕಿತ್ಸೆ ಮಾಡಲಾಯಿತು. ಹಾನಿಗೊಳಗಾದ ಮೆದುಳಿನ ಭಾಗವನ್ನೂ ತೆಗೆಯಲಾಯಿತು. ಇದರೊಂದಿಗೆ 5 ನರಸಂಬಂಧಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.

ಬ್ರೈನ್ ಡೆಡ್, ಕೋಮಾ ಸ್ಥಿತಿಯಲ್ಲಿ ಮನುಷ್ಯನ ದೇಹದಲ್ಲಿ ಏನಾಗುತ್ತೆ?

ಆದರೆ ಇದೆಲ್ಲದರ ಹೊರತಾಗಿಯೂ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ. ಇಷ್ಟಾಗಿಯೂ  ಅಚ್ಚರಿಯೆಂಬಂತೆ ಮಹಿಳೆ ಕೋಮಾವಸ್ಥೆಯಲ್ಲಿದ್ದ 7 ತಿಂಗಳ ಬಳಿಕವೂ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಹಿಳೆಗೆ ಎದೆಹಾಲು ಕುಡಿಸುವ ಸಾಮರ್ಥ್ಯ ಇಲ್ಲದ ಕಾರಣ ಮಗುವಿಗೆ ಬಾಟಲಿ ಹಾಲನ್ನು ಕೊಡಲಾಗುತ್ತಿದೆ. ಮಗು ಆರೋಗ್ಯದಿಂದಿದೆ’ ಎಂದು ವೈದ್ಯರು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

india Latest News Live: ನ್ಯಾಷನಲ್‌ ಹೆರಾಲ್ಡ್ ಕೇಸು: ಹೈಕೋರ್ಟ್‌ ಮೊರೆ ಹೋದ ಜಾರಿ ನಿರ್ದೇಶನಾಲಯ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!