ತುರ್ತು ಆರೋಗ್ಯ ಪರಿಸ್ಥಿತಿಯತ್ತ ಮುಂಬೈ, 84 ಮೀಸಲ್ಸ್ ವೈರಸ್‌ ಪ್ರಕರಣ ಪತ್ತೆ!

By Suvarna News  |  First Published Nov 11, 2022, 8:33 PM IST

ಕೋವಿಡ್ ಪ್ರಕರಣಗಳು ನಿಧಾನವಾಗಿ ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ಮುಂಬೈನಿಂದ ಮತ್ತೊಂದು ಆತಂಕ ಭಾರತಕ್ಕೆ ಎದುರಾಗಿದೆ. ಇದೀಗ ಮುಂಬೈನಲ್ಲಿ ಮೀಸಲ್ಸ್ ವೈರಸ್ ಪ್ರಕರಣ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ತೀವ್ರವಾಗಿ ಕಾಣಿಸಿಕೊಳ್ಳುತ್ತಿರು ಈ ವೈರಸ್‌ಗೆ ಈಗಾಗಲೇ ಮೂವರು ಬಲಿಯಾಗಿದ್ದಾರೆ.
 


ಮುಂಬೈ(ನ.11): ಭಾರತದ ಎರಡನೇ ಕೋವಿಡ್ ಅಲೆಗೆ ಮುಂಬೈ ಕೂಡ ಪ್ರಮುಖ ಕಾರಣವಾಗಿತ್ತು. ಮುಂಬೈನಲ್ಲಿ ವೈರಸ್ ಹೆಚ್ಚಾದರೆ ಅಷ್ಟೇ ವೇಗದಲ್ಲಿ ಇತರ ನಗರಗಳಿಗೆ ಹರಡುವ ಸಾಧ್ಯತೆ ಇದೆ. ಇದೀಗ ಮತ್ತೆ ಮುಂಬೈನಿಂದ ಆತಂಕದ ಸುದ್ದಿಯೊಂದು ಬಂದಿದೆ. ಕೋವಿಡ್ ನಿಯಂತ್ರಣಕ್ಕೆ ಬಂದಿರುವ ಬೆನ್ನಲ್ಲೇ ಇದೀಗ ಮುಂಬೈನಲ್ಲಿ ಮೀಸೆಲ್ಸ್ ವೈರಸ್ ಪ್ರಕರಣ ಏರಿಕೆಯಾಗುತ್ತಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಅಂತರದಲ್ಲಿ 84 ಪ್ರಕರಣಗಳು ಮುಂಬೈನಲ್ಲಿ ಪತ್ತೆಯಾಗಿದೆ. ಅದರಲ್ಲೂ ಹೆಚ್ಚಿನ ಪ್ರಕರಣಗಳು ಮುಂಬೈ ಈಸ್ಟ್‌ನಲ್ಲಿ ಪತ್ತೆಯಾಗಿದೆ. ಇದು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ವೈರಸ್ ಪ್ರಕರಣವಾಗಿದೆ. ಇಷ್ಟೇ ಅಲ್ಲ ಈ ವೈರಸ್ ತಗುಲಿದ ಬೆನ್ನಲ್ಲೇ ಮಕ್ಕಳು ತೀವ್ರ ಅಸ್ವಸ್ಥರಾಗುತ್ತಾರೆ. ಇದೇ ಕಾರಣದಿಂದ ಮುಂಬೈ ಇದೀಗ ತುರ್ತು ಆರೋಗ್ಯ ಪರಿಸ್ಥಿತಿಯತ್ತ ವಾಲುತ್ತಿದೆ.

ಮಿಸೆಲ್ಸ್ ಪ್ರಕರಣಕ್ಕೆ ಕಳೆದ ತಿಂಗಳು ಮುಂಬೈನಲ್ಲಿ ಮೂವರು ಮಕ್ಕಳು ಬಲಿಯಾಗಿದ್ದಾರೆ. ಈ ವೈರಸ್ ತಗುಲಿದ 48 ಗಂಟೆಯೊಳಗೆ ಮಕ್ಕಳು ಮೃತಪಟ್ಟಿದ್ದಾರೆ. ಸಾವಿನ ಪ್ರಕರಣದಿಂದ ಮುಂಬೈ ಇದೀಗ ತುರ್ತು ಆರೋಗ್ಯ ಪರಿಸ್ಥಿತಿಯತ್ತ ವಾಲುತ್ತಿದೆ.  ಮುಂಬೈ ಮಹಾನಗರ ಪಾಲಿಕೆ ಈಗಾಗಲೇ ಕಟ್ಟೆಚ್ಚರ ನೀಡಿದೆ. ಈಗಾಗಲೇ ಅಧಿಕಾರಿಗಲು ಮನೆ ಮನೆಗೆ ತೆರಳಿ ಮಕ್ಕಳ ಆರೋಗ್ಯ ತಪಾಸಣೆ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಡಾಯ ಉನ್ನತ ಮಟ್ಟದ ಸಮಿತಿ ರಚಿಸಿದ್ದಾರೆ. ಈ ತಂಡ ಮುಂಬೈನಲ್ಲಿ ಮೆಸೆಲ್ಸ್ ಪ್ರಕರಣದ ಮೇಲೆ ನಿಗಾವಹಿಸಲಿದೆ. 

Tap to resize

Latest Videos

ಕೋವಿಡ್ -19ರಿಂದಾಗಿ ಸಣ್ಣ ವಯಸಲ್ಲೇ ದೊಡ್ಡವರಾಗ್ತಿದ್ದಾರೆ ಹೆಣ್ಣು ಮಕ್ಕಳು

ಮಿಸೆಲ್ಸ್‌ಗೆ ಖಸ್ರಾ ಅನ್ನೋ ಇನ್ನೊಂದು ಹೆಸರಿದೆ. ಇದು ವೈರಲ್ ಇನ್‌ಫೆಕ್ಷನ್ ಆಗಿದ್ದು, ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಇದರ ಅಪಾಯದ ಮಟ್ಟ ಹೆಚ್ಚಾಗಿದೆ. ಮೀಸಲ್ಸ್ ವಿರುದ್ಧ ಹೋರಾಡಬಲ್ಲ ಲಸಿಕೆ ಲಭ್ಯವಿದೆ. ಇದನ್ನು ಹೊರತುಪಡಿಸಿದರೆ ಯಾವುದೇ ಚಿಕಿತ್ಸೆ ಇದಕ್ಕಿಲ್ಲ. ಈ ಕಾರಣಕ್ಕೆ ಇದರ ಅಪಾಯದ ಮಟ್ಟ ಹೆಚ್ಚಾಗಿದೆ. ಲಭ್ಯವಿರುವ ಲಸಿಕೆಯಿಂದ ಮಿಸೆಲ್ಸ್ ವೈರಸ್ ದಾಳಿ ನಡೆಸದಂತೆ ಎಚ್ಚರ ವಹಿಸಬಹುದು. ವೈರಸ್ ಅಂಟಿಕೊಂಡ ಮಕ್ಕಳಿಗೆ ಲಸಿಕೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.

ಶೀತ, ಕೆಮ್ಮು, ಸೀನುವುದು, ಜ್ವರ, ಸುಸ್ತು, ಅಸ್ವಸ್ಥಗೊಳ್ಳುವುದು,ಉರಿಯೂತದ ಕಣ್ಣುಗಳು,  ನೋಯುತ್ತಿರುವ ಗಂಟಲು, ಚರ್ಮದಲ್ಲಿ ಕೆಂಪು ಗುಳ್ಳೆ ಹಾಗು ತುರಿಕೆ ಸೇರಿದಂತೆ ಕೆಲ ರೋಗಲಕ್ಷಣಗಳನ್ನು ಇದು ಹೊಂದಿದೆ. ಮಕ್ಕಳಲ್ಲಿ ಈ ರೀತಿಯ ಯಾವುದೇ ಲಕ್ಷಣಗಳು ಕಂಡುಬಂದರೆ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸುವುದು ಒಳಿತು.

 

ಚೀನಾದ ಪ್ರಮುಖ ಉತ್ಪಾದನಾ ಕೇಂದ್ರದಲ್ಲಿ ಲಾಕ್ ಡೌನ್; ಜಾಗತಿಕ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ

842 ಹೊಸ ಪ್ರಕರಣ, 6 ಸಾವು: ಸಕ್ರಿಯ ಕೇಸು: 12,752ಕ್ಕಿಳಿಕೆ
ದೇಶದಲ್ಲಿ ದಾಖಲಾದ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳಲ್ಲಿ ಒ್ಟಟು 842 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ 6 ಸೋಂಕಿತರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 12,752ಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣವು ಶೇ.98.78ರಷ್ಟಿದೆ. ಈವರೆಗೆ ದೇಶದಲ್ಲಿ 4.46 ಕೋಟಿ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, 5.30 ಲಕ್ಷ ಸೋಂಕಿತರ ಸಾವು ದಾಖಲಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 219.77 ಕೋಟಿ ಡೋಸ್‌ ಲಸಿಕೆಗಳ ವಿತರಣೆಯಾಗಿದೆ.
 

click me!