
ಗೋವಾ(ನ.11): ಭಾರತೀಯ ನೌಕಾಪಡೆಯ ಮೊದಲ ಸೈಲ್ ತರಬೇತಿ ಹಡಗು INS ತರಂಗಿಣಿಗೆ ರಜತಮಹೋತ್ಸವದ ಸಂಭ್ರಮ. INS ತರಂಗಿಣಿ ತನ್ನ 25ನೇ ವಾರ್ಷಿಕೋತ್ಸವನ್ನು ಗೋವಾ ಶಿಪ್‌ಯಾರ್ಡ್‌ನಲ್ಲಿ ಆಚರಿಸಿದೆ. 7 ತಿಂಗಳ ಸುದೀರ್ಘ ಲೋಕಾಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸಂಭ್ರಮ ಆಚರಿಸಿದೆ. ನೌಕಾಪಡೆಯ ತರಬೇತಿಗಾಗಿ INS ತರಂಗಿಣಿಯನ್ನು 11 ನವೆಂಬರ್ 1997 ರಂದು ನಿಯೋಜಿಸಲಾಯಿತು. 27000 ನಾಟಿಕಲ್ ಮೈಲು ಯಶಸ್ವಿಯಾಗಿ ಪೂರೈಸಿರುವ INS ತರಂಗಿಣಿ ಇದೀಗ ರಜತಮಹೋತ್ಸವ ಸಂಭ್ರಮದಲ್ಲಿದೆ. 2003-04 ರಲ್ಲಿ ಪ್ರದಕ್ಷಿಣೆ ಆರಂಭಿಸಿ, 2005, 2007, 2015, 2018 ಮತ್ತು 2022 ರಲ್ಲಿ ಐದು ಲೋಕಾಯಾನ ಯಶಸ್ವಿಯಾಗಿ ಮುಗಿಸಿದೆ. ದಕ್ಷಿಣ ಸ್ಕ್ವಾಡ್ರನ್ ಭಾಗವಾಗಿರುವ INS ತರಂಗಿಣಿ 25 ವಸಂತಗಳಲ್ಲಿ ಹಲವು ಯುವ ನೌಕಾಪಡೆ ಯೋಧರಿಗೆ ತರಬೇತಿ ನೀಡಿದೆ.
ನೌಕಾಪಡೆಯಲ್ಲಿ ಇನ್ನು ‘ವಿಕ್ರಾಂತ್’ ಕ್ರಾಂತಿ!
ದೇಶದ ನೌಕಾಪಡೆಯ ಬಲವನ್ನು ಮತ್ತಷ್ಟುವೃದ್ಧಿಸಬಲ್ಲ, ಮೊತ್ತಮೊದಲ ಸ್ವದೇಶಿ ವಿಮಾನ ವಾಹಕ ಯುದ್ಧನೌಕೆ ‘ಐಎನ್‌ಎಸ್ ವಿಕ್ರಾಂತ್’ ಶುಕ್ರವಾರ ದೇಶಸೇವೆಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದೆ.
ಹಿಂದು ಮಹಾಸಾಗರದಲ್ಲಿ ಇಮ್ಮಡಿಯಾಯ್ತು ಭಾರತದ ಬಲ; ಇಲ್ಲಿದೆ 20 ಸಾವಿರ ಕೋಟಿಯ INS Vikrant ಚಿತ್ರ!
ಐಎನ್‌ಎಸ್ ವಿಕ್ರಾಂತ್ ಹೆಸರೇಕೆ?
ಭಾರತೀಯ ನೌಕಾಪಡೆಯಲ್ಲಿ ಇದೀಗ ಹೊಸ ಇತಿಹಾಸ ಸೃಷ್ಟಿಸಿರುವ ಐಎನ್‌ಎಸ್ ವಿಕ್ರಾಂತ್, ಭಾರತೀಯ ನೌಕಾಪಡೆಯಲ್ಲಿ ವಿಕ್ರಾಂತ್ ಹೆಸರಿನ 2ನೇ ವಿಮಾನ ವಾಹಕ ಯುದ್ಧನೌಕೆ. ಮೊದಲ ನೌಕೆ 1961ರಲ್ಲಿ ಭಾರತೀಯ ಸೇನೆ ಸೇರಿತ್ತು. ವಾಸ್ತವವಾಗಿ ವಿಕ್ರಾಂತ್ ಹೆಸರಿನ ಈ ನೌಕೆಯನ್ನು ಬ್ರಿಟಿಷ್ ರಾಯಲ್ ನೇವಿಗಾಗಿ 1943ರಲ್ಲಿ ನಿರ್ಮಿಸಲು ಆರಂಭಿಸಲಾಗಿತ್ತು. ಆದರೆ ಎರಡನೇ ಮಹಾಯುದ್ಧದ ಕಾರಣ ನೌಕೆ ನಿರ್ಮಾಣ ಸ್ಥಗಿತಗೊಂಡಿತ್ತು. ಎರಡನೇ ವಿಶ್ವ ಮಹಾಯುದ್ಧದ ಬಳಿಕ ನೌಕೆಯ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲಾಯಿತು. ಹೀಗೆ ಅರೆಬರೆ ಸ್ಥಿತಿಯಲ್ಲಿದ್ದ ನೌಕೆಯನ್ನು 1957ರಲ್ಲಿ ಭಾರತಕ್ಕೆ ಮಾರಾಟ ಮಾಡಲಾಯಿತು. ನಂತರ ಅದನ್ನು ಐರ್ಲೆಂಡ್‌ನಲ್ಲಿ ಭಾರತೀಯ ನೌಕಾಪಡೆಯ ಬೇಡಿಕೆ ಅನ್ವಯ ನಿರ್ಮಿಸಲಾಯಿತು. ಅಂತಿಮವಾಗಿ 1961ರ ನ.3ರಂದು ಯುದ್ಧನೌಕೆ ಬಾಂಬೆ ಹಾರ್ಬರ್‌ಗೆ ಬಂದಿಳಿಯಿತು. ಈ ಯುದ್ಧನೌಕೆ 1971ರ ಪಾಕ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತು. ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ)ದಲ್ಲಿ ಪಾಕ್ ಭೂಸೇನೆಯ ಚಟುವಟಿಕೆಯನ್ನು ಈ ಯುದ್ಧನೌಕೆ ಯಶಸ್ವಿಯಾಗಿ ನಿಯಂತ್ರಿಸಿ, ಯುದ್ಧದಲ್ಲಿ ಭಾರತಕ್ಕೆ ಜಯ ತಂದುಕೊಡುವುದರ ಜೊತೆಗೆ, ಬಾಂಗ್ಲಾದೇಶ ನಿರ್ಮಾಣಕ್ಕೆ ನಾಂದಿ ಹಾಡಿತ್ತು. 1997ರಲ್ಲಿ ಈ ನೌಕೆಯನ್ನು ಸೇವೆಯಿಂದ ಹಿಂದಕ್ಕೆ ಪಡೆಯಲಾಯಿತು. ಬಳಿಕ ಅದನ್ನು ಗುಜರಿಗೆ ಹಾಕಲಾಯಿತು. ಈ ನೌಕೆಯ ನೆನಪಿಗಾಗಿ ಇದೀಗ ದೇಶೀಯವಾಗಿ ನಿರ್ಮಿಸಿದ ಮೊದಲ ವಿಮಾನ ವಾಹಕ ಯುದ್ಧನೌಕೆಗೆ ಎನ್‌ಐಎಸ್ ವಿಕ್ರಾಂತ್ ಎಂದು ಹೆಸರಿಡಲಾಗಿದೆ.
ವಸಾಹತುಶಾಹಿ ವಿರುದ್ಧ ಮೋದಿ ದಿಟ್ಟ ಹೆಜ್ಜೆ, ನೌಕಾಪಡೆಯ ಸೇಂಟ್ ಜಾರ್ಜ್ ಕ್ರಾಸ್ ಕೈಬಿಟ್ಟ ಕೇಂದ್ರ!
ನೌಕಾಪಡೆಗೆ ಇಂದು ಹೊಸ ಧ್ವಜ
ಸ್ವಾತಂತ್ರ್ಯ ಸಿಕ್ಕಿ 75 ವರ್ಷ ತುಂಬಿದರೂ, ಭಾರತೀಯ ನೌಕಾಪಡೆಯ ಧ್ವಜದಲ್ಲಿ ಇನ್ನೂ ಉಳಿದುಕೊಂಡಿದ್ದ ವಸಾಹತುಶಾಹಿ ಅಂಶಗಳನ್ನು ನೆನಪಿಸುವ ಅಂಶಗಳಿಗೆ ಶುಕ್ರವಾರ ತೆರೆ ಬೀಳಲಿದೆ. ಭಾರತೀಯ ನೌಕಾಪಡೆ ಶುಕ್ರವಾರ ತನ್ನ ಧ್ವಜ ಅಳವಡಿಸಿಕೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ, ಕೊಚ್ಚಿಯಲ್ಲಿ ಐಎನ್‌ಎಸ್ ವಿಕ್ರಾಂತ್ ನೌಕೆಯನ್ನು ದೇಶಕ್ಕೆ ಸಮರ್ಪಿಸುವ ಕಾರ್ಯಕ್ರಮದಲ್ಲಿ ಹೊಸ ಧ್ವಜವನ್ನೂ ಅನಾವರಣಗೊಳಿಸಲಿದ್ದಾರೆ. ಭಾರತದ ಶ್ರೀಮಂತ ಕಡಲ ಪರಂಪರೆ ಅನುಸಾರವಾಗಿ ನೌಕಾಪಡೆಯ ಹೊಸ ಧ್ವಜವನ್ನು (ನಿಶಾನ್) ಅನ್ನು ವಿನ್ಯಾಸಗೊಳಿಸಲಾಗಿದ್ದು, ಹೊಸ ಧ್ವಜದಲ್ಲಿ ವಸಾಹತುಶಾಹಿ ಇತಿಹಾಸ ನೆನಪಿಸುವ ಸೇಂಟ್ ಜಾಜ್‌ರ್ ಕ್ರಾಸ್ ಕೈಬಿಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ