ರಾಜೀವ್ ಹಂತಕರ ಬಿಡುಗಡೆ, ಸೋನಿಯಾ ಗಾಂಧಿ ನಿಲುವಿಗೆ ವಿರುದ್ಧ ಹೇಳಿಕೆ ನೀಡಿದ ಕಾಂಗ್ರೆಸ್!

By Suvarna NewsFirst Published Nov 11, 2022, 6:39 PM IST
Highlights

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಬಿಡುಗಡೆಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಇದೀಗ ಭಾರಿ ಚರ್ಚೆಯಾಗುತ್ತಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಗ್ವಿ ಸೋನಿಯಾ ಗಾಂಧಿ ನಿಲುವು ಒಪ್ಪಲ್ಲ ಎಂದಿದ್ದಾರೆ.
 

ನವದೆಹಲಿ(ನ.11): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರ ಬಿಡುಗಡೆ ಕಾಂಗ್ರೆಸ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜೀವ್ ಗಾಂಧಿ ಹಂತಕರಾದ ನಳಿನಿ ಸೇರಿದಂತೆ 6 ಮಂದಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಕುರಿತು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಗ್ವಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಆದರೆ ರಾಜೀವ್ ಗಾಂಧಿ ಹಂತಕರ ಕುರಿತು ಸೋನಿಯಾ ಗಾಂಧಿ ತಳೆದಿದ್ದ ನಿಲುವಿಗೆ ಕಾಂಗ್ರೆಸ್ ಬದ್ಧವಾಗಿಲ್ಲ. ಕಾಂಗ್ರೆಸ್ ಪಕ್ಷದ ನಿಲುವು ಬೇರೆ ಎಂದು ಅಭಿಷೇಖ್ ಮನು ಸಿಂಗ್ವಿ ಹೇಳಿದ್ದಾರೆ.  ಸೋನಿಯಾ ಗಾಂಧಿ ವೈಯುಕ್ತಿಕ ನಿಲುವು ಹೊಂದಿದ್ದಾರೆ. ನಳಿನಿ ಕುರಿತು ಸಹಾನೂಭೂತಿ ಹೊಂದಿದ್ದರು. ನಳಿನಿ ಬಿಡುಗಡೆಗೆ ಸೋನಿಯಾ ಗಾಂಧಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ ಈ ವಿಚಾರದಲ್ಲಿ ಸೋನಿಯಾ ಗಾಂಧಿ ಅಭಿಪ್ರಾಯವನ್ನು ಪಕ್ಷ ಒಪ್ಪುವುದಿಲ್ಲ ಎಂದು ಅಭಿಷೇಖ್ ಮನು ಸಿಂಗ್ವಿ ಹೇಳಿದ್ದಾರೆ. 

ರಾಜೀವ್ ಗಾಂಧಿ ಹತ್ಯೆ ಲೋಕಲ್ ಮರ್ಡರ್ ಅಲ್ಲ. ಇದು ರಾಷ್ಟ್ರೀಯ ವಿಚಾರ. ಪ್ರಧಾನಿಯನ್ನೇ ಹತ್ಯೆ ಮಾಡುವುದು ಎಂದರೆ ಭಾರತದಲ್ಲಿನ ಭದ್ರತೆ ಕುರಿತು ಆತಂಕ ಮೂಡುವ ಪರಿಸ್ಥಿತಿ. ಹೀಗಾಗಿ ಈ ಹಂತಕರನ್ನು ಬಿಡುಗಡಗೊಳಿಸುವ ಮೂಲಕ ವಿಶ್ವಕ್ಕೆ ನೀಡಿದ ಸಂದೇಶವೇನು? ಎಂದು ಅಭಿಷೇಕ್ ಮನುಸ್ವಿಂಗ್ವಿ ಪ್ರಶ್ನಿಸಿದ್ದಾರೆ.  

ರಾಜೀವ್‌ ಗಾಂಧಿ ಹತ್ಯೆ ಪ್ರಮುಖ ಆರೋಪಿ ನಳಿನಿ ಸೇರಿ 6 ಜನರ ಬಿಡುಗಡೆಗೆ ಆದೇಶಿಸಿದ ಸುಪ್ರೀಂ ಕೋರ್ಟ್‌

1991ರ ಮೇ 21 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಹತ್ಯೆ ಮಾಡಲಾಗಿತ್ತು. ಎಲ್‌ಟಿಟಿಇ ಸಂಘಟನೆ ಮಹಿಳಾ ಆತ್ಮಾಹುತಿ ಬಾಂಬ್ ಮೂಲಕ ಈ ಕೃತ್ಯ ನಡೆಸಿತ್ತು. ಈ ಪ್ರಕರಣದಲ್ಲಿ 7 ಮಂದಿಯ ಆರೋಪ ಸಾಬೀತಾಗಿತ್ತು. ಇವರಿಗೆ ಗಲ್ಲು ಶಿಕ್ಷೆ ವಿಧಿಸಾಗಿತ್ತು. 2000ನೇ ಇಸವಿಯಲ್ಲಿ ನಳಿನಿ ಶ್ರೀಹರನ್ ನೀಡಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುವಂತೆ ಸೋನಿಯಾ ಗಾಂಧಿ ಮನವಿ ಮಾಡಿದ್ದರು. ನಳಿನಿ ಬಂಧನದ ವೇಳೆ ಆಕೆ ಗರ್ಭಿಣಿಯಾಗಿದ್ದರು. ಹೀಗಾಗಿ ನಳಿನ ಮೇಲೆ ದಯೆ ತೋರಬೇಕು ಎಂದು ಸೋನಿಯಾ ಗಾಂಧಿ ಮನವಿ ಮಾಡಿದ್ದರು.  2008ರಲ್ಲಿ ಪ್ರಿಯಾಂಕಾ ಗಾಂಧಿ ವೆಲ್ಲೂರು ಜೈಲಿನಲ್ಲಿ ನಳಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

2014ರಲ್ಲಿ ಅಂದಿನ ತಮಿಳುನಾಡು ಮುಖ್ಯಂತ್ರಿ ಜಯಲಲಿತಾ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಗೊಳಿಸುವಂತೆ ಕಾನೂನು ಹೋರಾಟ ಆರಂಭಿಸಿದರು. ಇದೀಗ ಸುಪ್ರೀಂ ಕೋರ್ಟ್ ಈ 6 ಮಂದಿಯನ್ನು ಬಿಡುಗಡೆಗೊಳಿಸಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು ನಮ್ಮದು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ರಾಜೀವ್ ಹಂತಕರ ಬಿಡುಗಡೆಯನ್ನು ವಿರೋಧಿಸಿದೆ. ಇದೀಗ ಬಿಜೆಪಿ ಸರ್ಕಾರ ಕೂಡ ವಿರೋಧಿಸಿದೆ ಎಂದು ಸಿಂಗ್ವಿ ಹೇಳಿದ್ದಾರೆ.

ದ್ವೇಷದ ರಾಜಕೀಯಕ್ಕೆ ತಂದೆ ಕಳೆದುಕೊಂಡೆ, ನನ್ನ ಪ್ರೀತಿಯ ದೇಶ ಕಳೆದುಕೊಳ್ಳಲ್ಲ: Rahul Gandhi

31 ವರ್ಷ ಬಳಿಕ ಪೆರಾರಿವಾಲನ್‌ ಬಿಡುಗಡೆಗೆ ಆದೇಶಿಸಿದ್ದ ಸುಪ್ರೀಂ ಕೋರ್ಟ್!
2022ರ ಮೇ ತಿಂಗಳಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ, ಪ್ರಕರಣದ ಪ್ರಮುಖ ರೂವಾರಿ ಪೆರಾರಿವಾಲನ್‌ನ ಅವಧಿಪೂರ್ವ ಬಿಡುಗಡೆಗೆ ಸುಪ್ರೀಂಕೋರ್ಚ್‌ ಆದೇಶಿಸಿದೆ. ಈಗಾಗಲೇ ಪೆರಾರಿವಾಲನ್‌ 31 ವರ್ಷ ಜೈಲು ವಾಸ ಅನುಭವಿಸಿದ್ದನ್ನು ಪರಿಗಣಿಸಿ ಕೋರ್ಚ್‌ ಈ ಆದೇಶ ನೀಡಿದೆ. ಜೊತೆಗೆ ಹೀಗೆ ಬಿಡುಗಡೆಗೆ ಆದೇಶಿಸಲು ಅದು ಸಂವಿಧಾನದ 142ನೇ ವಿಧಿಯಡಿ ತನಗೆ ನೀಡಿರುವ ವಿಶೇಷ ಅಧಿಕಾರವನ್ನು ಬಳಕೆ ಮಾಡಿದೆ.

‘ಈ ಹಿಂದೆ ತಮಿಳುನಾಡು ಸರ್ಕಾರವು ಪೆರಾರಿವಾಲನ್‌ ಸೇರಿದಂತೆ 7 ದೋಷಿಗಳ ಅವಧಿಪೂರ್ವ ಬಿಡುಗಡೆಗೆ ತೆಗೆದುಕೊಂಡ ನಿರ್ಣಯ ಸರಿಯಾಗಿತ್ತು ಹಾಗೂ ಆ ನಿರ್ಣಯ ಅಂಗೀಕರಿಸುವುದು ಸಂವಿಧಾನದ 161ನೇ ಪರಿಚ್ಛೇದದ ಅನ್ವಯ ರಾಜ್ಯಪಾಲರಿಗೆ ಕಡ್ಡಾಯವಾಗಿತ್ತು. ಆದರೆ ಕ್ಷಮಾದಾನದ ಬಗ್ಗೆ ನಿರ್ಣಯಿಸುವುದು ತಮ್ಮ ವ್ಯಾಪ್ತಿಗೆ ಒಳಪಡದು, ರಾಷ್ಟ್ರಪತಿಗಳಿಗೆ ಸಂಬಂಧಿಸಿದ್ದು ಎಂದು ರಾಜ್ಯಪಾಲರು ಹೇಳಿದ್ದು ಸರಿಯಲ್ಲ’ ಎಂದು ನ್ಯಾಯಾಲಯ ಹೇಳಿದೆ.

click me!