26/11 ಮಾದರಿಯಲ್ಲಿ ಮತ್ತೊಮ್ಮೆ ದಾಳಿ, ಪಾಕ್‌ ನಂಬರ್‌ನಿಂದ ಬೆದರಿಕೆ!

By Santosh Naik  |  First Published Aug 20, 2022, 9:54 AM IST

ಮುಂಬೈನಲ್ಲಿ ಶೀಘದಲ್ಲಿಯೇ ಭಯೋತ್ಪಾದಕ ದಾಳಿ ಆಗಲಿದೆ. ಇದರು 2008ರಲ್ಲಿ ನಡೆದ 26/11 ದಾಳಿಯನ್ನು ಖಂಡಿತವಾಗಿ ನಿಮಗೆ ನೆನಪಿಸಲಿದೆ' ಎಂದು ಬರೆದಿರುವ ಸಂದೇಶವೊಂದು ಮುಂಬೈ ಪೊಲೀಸ್‌ಗೆ ಪಾಕಿಸ್ತಾನದ ನಂಬರ್‌ನಿಂದ ಬಂದಿದ್ದು, ಇಡೀ ಭದ್ರತಾ ದಳವನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.
 


ಮುಂಬೈ (ಆ. 20): ದೊಡ್ಡ ಬೆಳವಣಿಗೆಯೊಂದರಲ್ಲಿ ಮುಂಬೈ ಪೊಲೀಸ್‌ನ ಟ್ರಾಫಿಕ್‌ ಕಂಟ್ರೋಲ್‌ ರೂಮ್‌, ಶನಿವಾರದಂದು ಮುಂಬೈ ಮೇಲೆ 26/11 ಮಾದರಿಯಲ್ಲಿ ಇನ್ನೊಂದು ದಾಳಿಯಾಗುವ ಬೆದರಿಕೆ ಸಂದೇಶವನ್ನು ಸ್ವೀಕರಿಸಿದೆ. ಮುಂಬೈ ಪೊಲೀಸ್‌ ಟ್ರಾಫಿಕ್‌ ಕಂಟ್ರೋಲ್‌ ಇಲಾಖೆಯ ಪ್ರಕಾರ, ಪಾಕಿಸ್ತಾನಿ ಮೂಲದ ನಂಬರ್‌ನಿಂದ ವಾಟ್ಸಾಪ್‌ಗೆ ಈ ಸಂದೇಶ ಬಂದಿದೆ ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿಎಕೆ-47 ಗನ್‌ಗಳು ಹಾಗೂ ಸ್ಫೋಟಕಗಳನ್ನು ತುಂಬಿದ್ದ ಎರಡು ದೋಣಿಗಳು ಪತ್ತೆಯಾದ ಎರಡು ದಿನಗಳ ಬಳಿಕ, ಪಾಕಿಸ್ತಾನದ ನಂಬರ್‌ನಿಂದ ಈ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗಿದ್ದರೂ ಎಟಿಎಸ್ ಮತ್ತು ಕೇಂದ್ರೀಯ ಏಜೆನ್ಸಿಗಳು ಇಲ್ಲಿಯವರೆಗೆ, ಎರಡು ದೋಣಿಗೆ ಸಂಬಂಧಿಸಿದಂತೆ ಭಯೋತ್ಪಾದನೆಯ ಕೋನದ ಸಾಧ್ಯತೆಯನ್ನು ತಳ್ಳಿಹಾಕಿವೆ. ಮುಂಬೈ ಮೇಲೆ ದಾಳಿ ನಡೆಯಲಿದೆ ಮತ್ತು ಇದು ನಿಮಗೆ 26/11 ದಾಳಿಯನ್ನು ನೆನಪಿಸುತ್ತದೆ. ಪೊಲೀಸರು ನನ್ನ ಸಂಖ್ಯೆಯನ್ನು ಪತ್ತೆಹಚ್ಚಲು ಪ್ರಯತ್ನಿಸಿದರೆ, ಸ್ಥಳವು ಭಾರತದಿಂದ ಹೊರಗಿನ ಪ್ರದೇಶದ್ದಾಗಿರುತ್ತದೆ. 6 ಜನರು ಈ ಸ್ಫೋಟವನ್ನು ಕಾರ್ಯಗತಗೊಳಿಸುತ್ತಾರೆ ಮತ್ತು ಮುಂಬೈ ನಗರವು ಸ್ಫೋಟಗೊಳ್ಳುತ್ತದೆ. ಒಸಾಮಾ ಬಿನ್ ಲಾಡೆನ್, ಅಜ್ಮಲ್ ಕಸಬ್ ಅಥವಾ ಅಯ್ಮಾನ್ ಅಲ್-ಜವಾಹಿರಿಯನ್ನು ಕೊಂದರೆ ಇನ್ನೂ ಅನೇಕರು ನಮ್ಮಲ್ಲಿದ್ದಾರೆ ಎಂದು ಬೆದರಿಕೆ ಸಂದೇಶದಲ್ಲಿ ಬರೆಯಲಾಗಿದೆ ಎಂದು ಮುಂಬೈ ಪೊಲೀಸ್‌ ಮೂಲಗಳು ಹೇಳಿವೆ.

ಮುಂಬೈ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇತರ ಗುಪ್ತಚರ ಮತ್ತು ಕೇಂದ್ರೀಯ ಏಜೆನ್ಸಿಗಳನ್ನು ಒಳಪಡಿಸಲಾಗಿದೆ.

Tap to resize

Latest Videos

ರಾಯಗಢದಲ್ಲಿ ಎಕೆ-47, ಶಸ್ತ್ರಾಸ್ತ್ರ ಇದ್ದ ದೋಣಿ ಪತ್ತೆ: ಗುರುವಾರ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಎರಡು ಅಪರಿಚಿತ "ಅನುಮಾನಾಸ್ಪದ" ದೋಣಿಗಳು ಪತ್ತೆಯಾಗಿವೆ. ಹರಿಹರೇಶ್ವರ ಕಡಲತೀರದಲ್ಲಿ ಒಂದು ಬೋಟ್ ಪತ್ತೆಯಾಗಿದ್ದು, ಅದರಲ್ಲಿ 3 ಎಕೆ-47 ರೈಫಲ್‌ಗಳು ಮತ್ತು ಮದ್ದುಗುಂಡುಗಳು ಮತ್ತು ಸ್ಫೋಟಕಗಳು ಕಸ್ಟಮ್ ನಿರ್ಮಿತ ನೆಪ್ಚೂನ್ ಮೆರಿಟೈಮ್ ಸೆಕ್ಯುರಿಟಿ ಬಾಕ್ಸ್‌ನಲ್ಲಿ ಪತ್ತೆಯಾಗಿದ್ದರೆ, ಎರಡನೇ ಬೋಟ್ ಭರಣ ಖೋಲ್ ಕಿನಾರಾ ಬಳಿ ಪತ್ತೆಯಾಗಿದೆ, ಅದರಲ್ಲಿ ಲೈಫ್ ಜಾಕೆಟ್ ಮತ್ತು ಕೆಲವು ದಾಖಲೆಗಳು ಕಂಡುಬಂದಿವೆ. ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ, ದೋಣಿಯನ್ನು ನೋಡಿದಾಗ ಅದರಲ್ಲಿ ಯಾರೂ ಇರಲಿಲ್ಲ. ಬೆಳವಣಿಗೆಯ ನಂತರ, ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕಾರ್ಯಾಚರಣೆಗೆ ಇಳಿದಿದೆ ಮತ್ತು ಹೆಚ್ಚಿನ ತನಿಖೆಗಾಗಿ ಹಡಗನ್ನು ರಾಯಗಡ ಕರಾವಳಿಯಿಂದ ದೂರಕ್ಕೆ ಎಳೆದಿದೆ.

ಒಂದೇ ಒಂದು ಟೆಲಿಗ್ರಾಮ್‌ ಮೆಸೇಜ್‌ನಿಂದ ಕೆಮಿಸ್ಟ್ರಿ ಪದವೀಧರ ಕೋಟ್ಯಧೀಶನಾಧ!

ಎಟಿಎಸ್ ಮುಖ್ಯಸ್ಥ ವಿನೀತ್ ಅಗರವಾಲ್, "ರಾಯಗಡ ಕರಾವಳಿಯಲ್ಲಿ ಇಂದು ಮೂರು ಎಕೆ -47 ರೈಫಲ್‌ಗಳನ್ನು ಹೊಂದಿರುವ ದೋಣಿಯನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ನಡೆಯುತ್ತಿದೆ. ನಾವು ದೋಣಿಯಿಂದ ಕೆಲವು ಕಾಗದಗಳನ್ನು ಹಿಂಪಡೆದಿದ್ದೇವೆ, ಹೆಚ್ಚಿನ ವಸ್ತುಗಳು ದೋಣಿಯೊಳಗೆ ಇವೆ. ದೋಣಿಯನ್ನು ಸಮುದ್ರದಿಂದ ಹೊರತೆಗೆಯಲು ಯಶಸ್ವಿಯಾಗಿದ್ದೇವೆ' ಎಂದು ಹೇಳಿದ್ದಾರೆ.

6/11 ರೀತಿಯಲ್ಲಿ ಮತ್ತೊಂದು ದಾಳಿಗೆ ಯತ್ನ, ರಾಯಗಢ ಜಿಲ್ಲೆಯನ್ನು ಬ್ಲಾಕ್‌ ಮಾಡಿದ ಪೊಲೀಸ್‌!

ಎಕೆ-47 ರೈಫಲ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಾಗಿಸುತ್ತಿದ್ದ ಯಾಚ್‌ಅನ್ನು ವಶಪಡಿಸಿಕೊಂಡ ನಂತರ ಮಹಾರಾಷ್ಟ್ರದ ರಾಯಗಢ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಹಡಗಿನ ಹೆಸರು ಲೇಡಿ ಹಾನ್ ಮತ್ತು ಹಾನಾ ಲಾರ್ಡ್ ಆರ್ಗನ್ ಎಂಬ ಆಸ್ಟ್ರೇಲಿಯಾದ ಮಹಿಳೆಯ ಒಡೆತನದಲ್ಲಿದೆ. ಆಕೆಯ ಪತಿ ಜೇಮ್ಸ್ ಹೋಬರ್ಟ್ ಜೂನ್‌ನಲ್ಲಿ ಮಸ್ಕತ್‌ನಿಂದ ಯುರೋಪಿಗೆ ಹೋಗುತ್ತಿದ್ದ ಹಡಗಿನ ಕ್ಯಾಪ್ಟನ್ ಆಗಿದ್ದರು. ಆದರೆ, ಎಂಟು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಮಧ್ಯದಲ್ಲಿಯೇ ಮುರಿದು ಹೋಯಿತು. ಯಾಚ್‌ ದುಬೈನಿಂದ ದೂರ ಸಾಗುತ್ತಿದ್ದಂತೆ, ಜೂನ್ 26 ರಂದು ಯಾಚ್‌ಗೆ ಹಾನಿಯಾಗಿರುವ ಕರೆಯನ್ನು ನೀಡಲಾಗಿತ್ತು ಮತ್ತು ಒಂದು ದಿನದ ನಂತರ ಕೊರಿಯಾದ ಹಡಗು ಇವರನ್ನು ರಕ್ಷಿಸಿದ್ದರು.

click me!