ಉದ್ಧವ್ ಟೀಕಿಸಿದ ವ್ಯಕ್ತಿಯ ತಲೆ ಬೋಳಿಸಿದ ಶಿವಸೇನೆ ಕಾರ್ಯಕರ್ತರು!

Published : Dec 24, 2019, 03:11 PM IST
ಉದ್ಧವ್ ಟೀಕಿಸಿದ ವ್ಯಕ್ತಿಯ ತಲೆ ಬೋಳಿಸಿದ ಶಿವಸೇನೆ ಕಾರ್ಯಕರ್ತರು!

ಸಾರಾಂಶ

ಉದ್ಧವ್ ಠಾಕ್ರೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್| ಹೀರಾಮಯ್ ತಿವಾರಿ ಎಂಬಾತನ ತಲೆ ಬೋಳಿಸಿದ ಶಿವಸೇನೆ ಕಾರ್ಯಕರ್ತರು| ಜಾಮಿಯಾ ವಿವಿ ಗಲಾಟೆಯನ್ನು ಜಲಿಯನ್ ವಾಲಾಬಾಗ್ ಘಟನೆಗೆ ಹೋಲಿಸಿದ್ದ ಮಹಾ ಸಿಎಂ| ಉದ್ಧವ್ ಹೇಳಿಕೆ ವಿರೋಧಿಸಿ ಪೋಸ್ಟ್ ಮಾಡಿದ್ದ  ಹೀರಾಮಯ್ ತಿವಾರಿ| ಹಲ್ಲೆ ಮಾಡಿ ಹೀರಾಮಯ್ ತಿವಾರಿ ತಲೆ ಬೋಳಿಸಿದ ಸೇನಾ ಕಾರ್ಯಕರ್ತರು| 

ಮುಂಬೈ(ಡಿ.24): ಪಕ್ಷದ ನಾಯಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ ವ್ಯಕ್ತಿ ವಿರುದ್ಧ ಶಿವಸೇನೆ ಕಾರ್ಯಕರ್ತರು ಗೂಂಡಾಗಿರಿ ನಡೆಸಿದ್ದಾರೆ. 

ಮುಂಬೈ ನ ವಡಾಲಾ ನಿವಾಸಿ ಹೀರಾಮಯ್ ತಿವಾರಿ ಎಂಬುವರು ಮಹಾರಾಷ್ಟ್ರ ನೂತನ ಸಿಎಂ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದರಿಂದ ಕೆರಳಿದ ಶಿವಸೇನೆ ಕಾರ್ಯಕರ್ತರು ತಿವಾರಿ ತಲೆ ಬೋಳಿಸಿದ್ದಲ್ಲದೇ ವಿಡಿಯೋ ಕೂಡ ಮಾಡಿದ್ದಾರೆ ಎನ್ನಲಾಗಿದೆ. 

ಈ ಬಗ್ಗೆ ಹೀರಾಮಯ್ ತಿವಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಶಿವಸೇನೆಯ ಕಾರ್ಯಕರ್ತರು ನನ್ನನ್ನು ಥಳಿಸಿ, ನನ್ನ ತಲೆ ಬೋಳಿಸಿ ಅವಮಾನ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಉದ್ಧವ್ ಮೇಲಿನ ಬೇಸರ: ಶಿವಸೇನೆ ತ್ಯಜಿಸಿ ಬಿಜೆಪಿ ಸೇರಿದ 400 ಕಾರ್ಯಕರ್ತರು!

ಜಾಮಿಯಾ ವಿವಿ ಬಳಿ ನಡೆದ ಗಲಾಟೆಯನ್ನು ಜಲಿಯನ್ ವಾಲಾಬಾಗ್‌ ಘಟನೆಗೆ ಸಿಎಂ ಉದ್ಧವ್ ಠಾಕ್ರೆ ಹೋಲಿಸಿದ್ದರು. ಇದನ್ನು ವಿರೋಧಿಸಿ ತಿವಾರಿ ಉದ್ಧವ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಪ್ರತಿ ಮನೆಯ್ಲೂ ರಾಷ್ಟ್ರಧ್ವಜ ಹಾರಿಸಿ: ಇನ್‌ಸ್ಟಾದಲ್ಲಿ ಮೋದಿ ಕರೆ
ಈ ಎಮ್ಮೆ ಖರೀದಿಸಲು ಸರ್ಕಾರದಿಂದ ಶೇ. 75 ರಷ್ಟು ಸಬ್ಸಿಡಿ.. ಇದರ ವಿಶೇಷತೆ ಏನು ಗೊತ್ತಾ?