CAA ವಿರೋಧಿಸಿ ಚಿನ್ನದ ಪದಕ ತಿರಸ್ಕರಿಸಿದ ವಿದ್ಯಾರ್ಥಿನಿ ಘಟಿಕೋತ್ಸವದಿಂದ ಹೊರಕ್ಕೆ!

Suvarna News   | ANI
Published : Dec 24, 2019, 12:31 PM IST
CAA ವಿರೋಧಿಸಿ ಚಿನ್ನದ ಪದಕ ತಿರಸ್ಕರಿಸಿದ ವಿದ್ಯಾರ್ಥಿನಿ ಘಟಿಕೋತ್ಸವದಿಂದ ಹೊರಕ್ಕೆ!

ಸಾರಾಂಶ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ| CAA ವಿರೋಧಿಸಿ ಚಿನ್ನದ ಪದಕ ತಿರಸ್ಕರಿಸಿದ ವಿದ್ಯಾರ್ಥಿನಿ| ಪುದುಚೇರಿ ವಿವಿ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮ್| ರಾಷ್ಟ್ರಪತಿಗಳಿಂದ ಚಿನ್ನದ ಪದಕ ಸ್ವೀಕರಿಸಲು ನಿರಾಕರಿಸಿದ ರಬೀಹಾ| ರಬೀಹಾ ಅವರನ್ನು ಘಟಿಕೋತ್ಸವದಿಂದ ಹೊರಗೆ ಹಾಕಿದ ಪೊಲೀಸರು| ಚಿನ್ನದ ಪದಕಕ್ಕಿಂತ ದೇಶ ದೊಡ್ಡದು ಎಂದ ರಬೀಹಾ ಅಬ್ದುರೆಹಿಮ್|

ಪುದುಚೆರಿ(ಡಿ.24): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ಮುಸ್ಲಿಂ ವಿದ್ಯಾರ್ಥಿನಿಯನ್ನು ಘಟಿಕೋತ್ಸವದಿಂದ ಹೊರಕಳುಹಿಸಿದ ಘಟನೆ ಪುದುಚೇರಿ ವಿವಿಯಲ್ಲಿ ನಡೆದಿದೆ.

ಚಿನ್ನದ ಪದಕ ಗೆದ್ದ ಮುಸ್ಲಿಂ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮ್, ಪೌರತ್ವ ತಿದ್ದುಪಡಿ ಜಕಾಯ್ದೆ ವಿರೋಧಿಸಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದರು. ಕೂಡಲೇ ಪೊಲೀಸರು ರಬೀಹಾ ಅವರನ್ನು ಘಟಿಕೋತ್ಸವ ನಡೆಯುತ್ತಿದ್ದ ಸ್ಥಳದಿಂಂದ ಹೊರಕಳುಹಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ನೇತಾಜಿ ಸಂಬಂಧಿ!

ಘಟಿಕೋತ್ಸವದಿಂದ ರಾಷ್ಟ್ರಪತಿ ರಾಮನಥ್ ಕೋವಿಂದ್ ನಿರ್ಗಮಿಸುವವರೆಗೂ ರಬೀಹಾ ಅವರನ್ನು ಪೊಲೀಸರು ಒಳಗೆ ಬಿಟ್ಟಿಲ್ಲ ಎನ್ನಲಾಗಿದೆ. 

ಬಿಜೆಪಿಗೆ ಮತ್ತೊಂದು ಮುಖಭಂಗ; NRCಗೆ ಪಕ್ಷದ ಸಿಎಂರಿಂದಲೇ ಅಪಸ್ವರ!

ರಬೀಹಾ ಅವರಿಗೆ ವೇದಿಕೆ ಮೇಲೆ ಪ್ರೊಫೆಸರ್ ರಾಜೀವ್ ಜೈನ್ ಪ್ರಶಸ್ತಿ ಹಾಗೂ ಪದಕ ನೀಡಲು ಮುಂದಾದಾಗ ವಿ.ವಿ ಉಪ ಕುಲಪತಿ ಮತ್ತು ರಿಜಿಸ್ಟ್ರಾರ್ ಮುಂದೆ ಪ್ರತಿಭಟನೆ ಭಾಗವಾಗಿ ರಬೀಹಾ ತಿರಸ್ಕರಿಸಿದ್ದಾರೆ.

ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ರಬೀಹಾ, ಚಿನ್ನದ ಪದಕಕ್ಕಿಂತ ದೇಶ ದೊಡ್ಡದು ಎಂದು ಹೇಳಿದ್ದಾರೆ. ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇನ್ನೂ ಹಲವು ವಿದ್ಯಾರ್ಥಿಗಳೂ ಕೂಡ ತಮ್ಮ ಚಿನ್ನದ ಪದಕವನ್ನು ತಿರಸ್ಕರಿಸಿದ್ದಾರೆ.

'ಪೌರತ್ವ ಕಾಯ್ದೆ ಕಟ್ಟುಕತೆಗೆ ಕಿವಿಗೊಡಬೇಡಿ; ಮುಸ್ಲಿಮರಿಗೆ ತೊಂದರೆಯಾಗಲ್ಲ'

ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಭಟನೆ ರೂಪದಲ್ಲಿ ತಮ್ಮ ಪ್ರಶಸ್ತಿ ಹಿಂದಿರುಗಿಸುತ್ತಿರುವುದಾಗಿ ರಬೀಹಾ ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!