Latest Videos

ಕೆಲ ದಿನಗಳಲ್ಲೇ ಹಸೆಮಣೆ ಏರಬೇಕಿದ್ದ NRI ಭಾವಿ ದಂಪತಿಗಳು ಅಗ್ನಿದುರಂತದಲ್ಲಿ ಸುಟ್ಟು ಕರಕಲಾದರು!

By Santosh NaikFirst Published Aug 29, 2023, 4:23 PM IST
Highlights

ಮುಂದಿನ ದಿನಗಳ ಖುಷಿಯನ್ನು ಕಣ್ಣಲ್ಲಿಟ್ಟುಕೊಂಡು ಹೋಟೆಲ್‌ನಲ್ಲಿ ನಿದ್ರೆಗೆ ಜಾರಿದ್ದ ಪ್ರಣಯ ಪಕ್ಷಿಗಳು ಮಲಗಿದ್ದಲ್ಲಿಯೇ ಸುಟ್ಟು ಕರಕಲಾಗಿದ್ದರು. ಭಾನುವಾರ ಮುಂಬೈನ ಗೆಲಾಕ್ಸಿ ಹೋಟೆಲ್‌ ಅಗ್ನಿ ದುರಂತ ಭಾವಿ ದಂಪತಿಗಳನ್ನು ಮಾತ್ರವಲ್ಲ, ಅವರ ಕನಸುಗಳನ್ನೂ ಸುಟ್ಟು ಕರಕಲು ಮಾಡಿತ್ತು.

ಮುಂಬೈ(ಆ.29): ಅವರಿಬ್ಬರೂ ಭವಿಷ್ಯದ ಕನಸುಗಳನ್ನು ಜೊತೆಯಾಗಿ ಕಂಡವರು. ಬಹಳ ವರ್ಷಗಳ ಕಾಲ ಪ್ರೇಮಿಸಿದ್ದ ಇಬ್ಬರೂ ಮದುವೆಯಾಗಬೇಕು ಎಂದು ನಿರ್ಧಾರ ಮಾಡಿದ್ದರು. ಇತ್ತೀಚೆಗಷ್ಟೇ ಸಂಬಂಧಿಯ ಮದುವೆಗಾಗಿ ವಿದೇಶದಿಂದ ಬಂದಿದ್ದ ಅವರಿಬ್ಬರೂ ಈ ಸಂಭ್ರಮವನ್ನು ಮುಗಿಸಿ ಮತ್ತೆ ವಾಪಾಸ್‌ ಹೋಗುವ ಹಾದಿಯಲ್ಲಿದ್ದರು. ಯಾಕೆಂದರೆ, ಇನ್ನೊಂದೇ ತಿಂಗಳಲ್ಲಿ ಅವರ ಮದುವೆ ನಿಶ್ಚಯವಾಗಿತ್ತು. ಆದರೆ, ಭಾನುವಾರ ಅವರು ಹೋಗಬೇಕಿದ್ದ ವಿಮಾನ ವಿಳಂಬವಾಗಿದ್ದರಿಂದ ಏರ್‌ಲೈನ್ಸ್‌ ಅವರಿಗೆ ಮುಂಬೈನ ಗೆಲಾಕ್ಸಿ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿತ್ತು. ಆದರೆ, ವಿಧಿ ಅವರಿಬ್ಬರ ಜೀವನದಲ್ಲಿ ಬೇರೆಯದೇ ನಿಶ್ಚಯ ಮಾಡಿಟ್ಟಿತ್ತು. ಮುಂದಿನ ದಿನಗಳನ್ನು ಖುಷಿಯನ್ನು ಕಟ್ಟಲ್ಲಿಟ್ಟುಕೊಂಡು ಮಲಗಿದ್ದ ಅವರು, ಅಲ್ಲಿಯೇ ಸುಟ್ಟು ಬೂದಿಯಾಗಿದ್ದಾರೆ. ಭಾನುವಾರ ಮುಂಬೈನ ಗೆಲಾಕ್ಸಿ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಎನ್‌ಆರ್‌ಐ ಆಗಿ ಕೀನ್ಯಾದಲ್ಲಿ ಬಹಳ ವರ್ಷಗಳಿಂದ ನೆಲೆಸಿದ್ದ ಕಿಶನ್‌ ಹಲೈ  ಹಾಗೂ ಅವರ 25 ವರ್ಷದ ಭಾವಿ ವಧು ರೂಪಾಲ್‌ ವೆಕಾರಿಯಾ ಇಬ್ಬರೂ ಸಾವು ಕಂಡಿದ್ದಾರೆ. ಇನ್ನೊಂದೇ ತಿಂಗಳಲ್ಲಿ ಇವರಿಬ್ಬರೂ ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ವಿವಾಹವಾಗಬೇಕಿತ್ತು. ಅದಕ್ಕಾಗಿ ಅವರು ಭಾನುವಾರ ಮುಂಬೈನಿಂದ ನೈರೋಬಿಗೆ ಪ್ರಯಾಣ ಬೆಳೆಸಬೇಕಿತ್ತಾದರೂ, ಇಬ್ಬರ ಜೀವನದಲ್ಲಿ ವಿಧಿ ಬೇರೆಯದೇ ಆಟವಾಡಿದೆ.

ಭಾವಿ ದಂಪತಿಗಳೊಂದಿಗೆ ರೂಪಾಲ್‌ ಅವರ ತಾಯಿ ಹಾಗೂ ತಂಗಿ ಕೂಡ ಮುಂಬೈನ ಸಾಂತಾಕ್ರೂಜ್‌ ಪ್ರದೇಶದಲ್ಲಿದ್ದ ಹೋಟೆಲ್‌ನಲ್ಲಿ ತಂಗಿದ್ದರು. ಇವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಪ್ರಯಾಣ ಮಾಡಬೇಕಿದ್ದ ವಿಮಾನ ವಿಳಂಬವಾಗಿದ್ದರಿಂದ ಏರ್‌ಲೈನ್ಸ್‌ನಿಂದಲೇ ಇವರಿಗೆ ಉಳಿದುಕೊಳ್ಳಲು ಹೋಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಹಲವು ವರ್ಷಗಳಿಂದ ಕೀನ್ಯಾದಲ್ಲಿ ವಾಸವಾಗಿದ್ದ ಕುಟುಂಬ: ಗುಜರಾತ್‌ನ ಕಚ್ ಜಿಲ್ಲೆಯ ಮಾಂಡವಿ ತಾಲೂಕಿನ ರಾಂಪರ್ ಗ್ರಾಮದ ಸರಪಂಚ್ ಸುರೇಶ್ ಕಾರ ಪ್ರಕಾರ, ಕಿಶನ್ ಹಲೈ ಮತ್ತು ಅವರ ಭಾವಿ ಪತ್ನಿ ರೂಪಲ್ ವೆಕಾರಿಯಾ ಹಲವಾರು ವರ್ಷಗಳಿಂದ ನೈರೋಬಿಯಲ್ಲಿ ನೆಲೆಸಿದ್ದರು. ಕಿಶನ್ ಹಲೈ ಮತ್ತು ವೆಕಾರಿಯ ಕುಟುಂಬಗಳು ರಾಂಪರ್ ಗ್ರಾಮದ ಮೂಲದವರಾಗಿದ್ದಾರೆ. ಗ್ಯಾಲಕ್ಸಿ ಹೋಟೆಲ್‌ನ ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿದ್ದು, ಕಿಶನ್ ಹಲೈ (28), ರೂಪಲ್ ವೆಕಾರಿಯಾ (25) ಮತ್ತು ಇನ್ನೊಬ್ಬ ವ್ಯಕ್ತಿ ಕಾಂತಿಲಾಲ್ ವರ (50) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ರೂಪಲ್ ಅವರ ತಾಯಿ ಮಂಜುಳಾಬೆನ್ (49), ಸಹೋದರಿ ಅಲ್ಪಾ (19) ಮತ್ತು ಅಸ್ಲಾಂ ಶೇಖ್ (48) ಗಾಯಗೊಂಡಿದ್ದಾರೆ.

ಕಾರಾ ಪ್ರಕಾರ, ಕಿಶನ್ ಮತ್ತು ರೂಪಲ್ ಅವರ ಕುಟುಂಬಗಳು ಹಲವು ವರ್ಷಗಳ ಹಿಂದೆ ವಿದೇಶದಲ್ಲಿ ನೆಲೆಸಿದ್ದರೂ ಸಹ, ಭಾರತದಲ್ಲಿನ ತಮ್ಮ ಊರಿನೊಂದಿಗೆ ಸಂಪರ್ಕ ಹೊಂದಿದ್ದವು. ಅವರ ಪೂರ್ವಿಕರ ಮನೆಗಳು ರಾಂಪರ್ ಗ್ರಾಮದಲ್ಲಿ ಇಂದಿಗೂ ಇವೆ. "ಕಿಶನ್ ಮತ್ತು ರೂಪಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಮತ್ತು ನೈರೋಬಿ ತಲುಪಿದ ನಂತರ ಶೀಘ್ರದಲ್ಲೇ ಮದುವೆಯಾಗಲು ಯೋಜಿಸುತ್ತಿದ್ದರು, ಅಲ್ಲಿ ಅವರು ತಮ್ಮ ಪೋಷಕರು ಮತ್ತು ಒಡಹುಟ್ಟಿದವರೊಂದಿಗೆ ಹಲವು ವರ್ಷಗಳಿಂದ ವಾಸಿಸುತ್ತಿದ್ದರು. ಕಿಶನ್, ರೂಪಲ್ ಮತ್ತು ಅವರ ಕುಟುಂಬಗಳು ಕಿಶನ್ ಅವರ ತಮ್ಮನ ವಿವಾಹದಲ್ಲಿ ಪಾಲ್ಗೊಳ್ಳಲು ಸುಮಾರು ಒಂದು ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದರು' ಎಂದು ತಿಳಿಸಿದ್ದಾರೆ.

Chandrayaan-3: ಚಂದ್ರನ ಮೇಲೆ ಪ್ರಗ್ಯಾನ್‌ ರೋವರ್‌ಗೆ ಎದುರಾದ ದೊಡ್ಡ ಕುಳಿ, ಹೊಸ ಮಾರ್ಗ ನೀಡಿದ ಇಸ್ರೋ!

ತಮ್ಮ ಬಾಲ್ಯದ ದಿನಗಳನ್ನು ಇಲ್ಲಿಯೇ ಕಳೆದಿದ್ದ ಕಿಶನ್‌, ಕಾಲೇಜು ದಿನಗಳಲ್ಲಿ ಪಾಲಕರೊಂದಿಗೆ ನೈರೋಬಿಗೆ ಶಿಫ್ಟ್‌ ಆಗಿದ್ದರು. ಇನ್ನು ರೂಪಾಲ್‌ ವೆಕಾರಿಯಾ, ನೈರೋಬಿಯಲ್ಲಿಯೇ ಜನಿಸಿದವರಾಗಿದ್ದಾರೆ. ಭಾವಿ ದಂಪತಿಗಳು ತಮ್ಮ ಸ್ವಗ್ರಾಮದಲ್ಲಿ ಕಿಶನ್ ಅವರ ಕಿರಿಯ ಸಹೋದರನ ಮದುವೆಯಲ್ಲಿ ಭಾಗವಹಿಸಲು ಸುಮಾರು ಒಂದು ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದರು. ಕಿಶನ್ ಅವರ ಅಜ್ಜಿಯರು ಇಂದಿಗೂ ರಾಂಪರ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ ಎಂದು ಕಾರಾ ತಿಳಿಸಿದ್ದಾರೆ.

ಪಾಕ್‌ಗೆ ಯಾಕೆ ಹೋಗ್ಲಿಲ್ಲ, ದೇಶದ ಸ್ವಾತಂತ್ರ್ಯಕ್ಕೆ ನಿಮ್ಮ ಕೊಡುಗೆ ಏನು ಎಂದು ವಿದ್ಯಾರ್ಥಿಗಳಿಗೆ ಕೇಳಿದ ಶಿಕ್ಷಕಿ!

ಗುಜರಾತ್‌ನಲ್ಲಿ ಶಾಪಿಂಗ್ ಮುಗಿಸಿ ಸಂಬಂಧಿಕರನ್ನು ಭೇಟಿಯಾದ ನಂತರ, ಕಿಶನ್, ರೂಪಲ್, ಆಕೆಯ ಪೋಷಕರು ಮತ್ತು ಸಹೋದರಿ ಶನಿವಾರ ಕೀನ್ಯಾದ ನೈರೋಬಿಗೆ ತೆರಳಬೇಕಿತ್ತು ಎಂದು ಸರ್‌ಪಂಚ್‌  ತಿಳಿಸಿದ್ದಾರೆ. ಇದಕ್ಕಾಗಿ ಅವರ ಶನಿವಾರವೇ ಅಹಮದಾಬಾದ್‌ನಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಆದರೆ, ವಿಮಾನ ರಿಶೆಡ್ಯುಲ್‌ ಆಗಿದ್ದರಿಂದ ಸಾಂತಾಕ್ರೂಜ್‌ನಲ್ಲಿದ್ದ ಹೋಟೆಲ್‌ನಲ್ಲಿ ಅವರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೇ ಭಾನುವಾರ ಬೆಂಕಿ ಕಾಣಿಸಿಕೊಂಡು, ಇವರು ಸಾವು ಕಂಡಿದ್ದಾರೆ' ಎಂದು ಕಾರಾ ತಿಳಿಸಿದ್ದಾರೆ. ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ಸ್ಥಳವನ್ನು ವೆಕಾರಿಯಾ ಕುಟುಂಬ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

click me!