ಆತ್ಮರಕ್ಷಣೆಗಾಗಿ ವ್ಯಕ್ತಿಯ ಕಲ್ಲಿನಿಂದ ಹೊಡೆದು ಸಾಯಿಸಿದ ಮಹಿಳೆಗೆ ಬಿಡುಗಡೆ ಭಾಗ್ಯ

By Anusha KbFirst Published Apr 1, 2024, 2:55 PM IST
Highlights

ಆತ್ಮರಕ್ಷಣೆಗಾಗಿ ವ್ಯಕ್ತಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಿದ 31 ವರ್ಷದ ಮಹಿಳೆಯನ್ನು ಮೂರು ವರ್ಷಗಳ ಬಳಿಕ ಕೊನೆಗೂ ಕೋರ್ಟ್‌ ಜೈಲಿನಿಂದ ಬಿಡುಗಡೆಗೊಳಿಸಿದೆ.

ಮುಂಬೈ: ಆತ್ಮರಕ್ಷಣೆಗಾಗಿ ವ್ಯಕ್ತಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಿದ 31 ವರ್ಷದ ಮಹಿಳೆಯನ್ನು ಮೂರು ವರ್ಷಗಳ ಬಳಿಕ ಕೊನೆಗೂ ಕೋರ್ಟ್‌ ಜೈಲಿನಿಂದ ಬಿಡುಗಡೆಗೊಳಿಸಿದೆ. ಕೊಲೆಯಾದ ವ್ಯಕ್ತಿ ಪಾನಮತ್ತನಾಗಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಹೀಗಾಗಿ ಆತ್ಮರಕ್ಷಣೆಗಾಗಿ ಮಹಿಳೆ ಈ ಕೃತ್ಯವೆಸಗಿದ್ದಾಳೆ ಎಂಬುದನ್ನು ಪರಿಗಣಿಸಿ ಮುಂಬೈ ನ್ಯಾಯಾಲಯವೂ 31 ವರ್ಷದ ಕಾರ್ಮಿಕ ಮಹಿಳೆಯನ್ನು ಜೈಲಿನಿಂದ ಬಿಡುಗಡೆ ಮಾಡಿದೆ.

ಜೂನ್ 20, 2021 ರಂದು ಈ ಘಟನೆ ನಡೆದಿತ್ತು ಅಂದೇ ಮಹಿಳೆಯನ್ನು ಬಂಧಿಸಲಾಗಿತ್ತು. ಪ್ರಾಸಿಕ್ಯೂಷನ್ ಪ್ರಕಾರ, ಮಧ್ಯರಾತ್ರಿ 2.30 ರ ಸಮಯದಲ್ಲಿ ಘಟನೆ ನಡೆದು  ಮಹಿಳೆ ಆತನ ತಲೆಗೆ ಕಲ್ಲಿನಿಂದ ಹೊಡೆದಿದ್ದಳು. ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಪಡೆಯುವ ಮುನ್ನವೇ ಆತ ಮೃತಪಟ್ಟಿದ್ದ. ಇದಾದ ನಂತರ. ಘಟನೆಯನ್ನು ನೋಡಿದವರೊಬ್ಬರ ಸಾಕ್ಷಿಯ ಆಧಾರದಲ್ಲಿ ದಹಿಸರ್ ಪೊಲೀಸರು ಮಹಿಳೆಯನ್ನು ಬಂಧಿಸಿದ್ದರು.

ಮ್ಯಾಕ್‌ಡೊನಾಲ್ಡ್ ಮಹಿಳಾ ಉದ್ಯೋಗಿಯ ಕೆಣಕಿ ಕಂಗಾಲಾದ ಗ್ರಾಹಕ: ಸರಿಯಾಗಿ ಬಾರಿಸಿದ ಅಕ್ಕಬಾಂಡ್

ಇದಾದ ನಂತರ ಮೂರು ವರ್ಷಗಳ ಕಾಲ ಮಹಿಳೆ ಜೈಲಿನಲ್ಲೇ ಕಳೆದಿದ್ದರು. ಆಕೆಯ ವಕೀಲರಾದ ಎಸ್‌.ಎಸ್ ಸಾವಲ್ಕರ್‌ ಆಕೆಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಮಹಿಳೆ ತುಂಬಾ ಬಡವಳಾಗಿದ್ದು, ಆಕೆಗೆ ಯಾರು ಸಂಬಂಧಿಗಳಿಲ್ಲ, ಜಗಳದ ಹಿಂದಿನ ಕಾರಣವನ್ನು ಪರಿಗಣಿಸಿದರೆ, ಆಕೆಗೆ ತನ್ನನ್ನು ಸ್ವಯಂ ರಕ್ಷಿಸುವ ಹಕ್ಕಿದೆ ಎಂದು ಸಾವಾಲ್ಕರ್ ಮನವಿ ಮಾಡಿದರು. 

ಸಮಯವಲ್ಲದ ಸಮಯದಲ್ಲಿ ಏಕಾಂಗಿ ಮಹಿಳೆಯನ್ನು ವ್ಯಕ್ತಿ ಅನುಚಿತವಾಗಿ ಸ್ಪರ್ಶಿಸಿದ್ದ ಮತ್ತು ಆದ್ದರಿಂದ, ಆರೋಪಿಯು ತನ್ನನ್ನು ರಕ್ಷಿಸಿಕೊಳ್ಳಲು ನಡೆಸಿದ  ನೈಸರ್ಗಿಕ ಪ್ರತಿಕ್ರಿಯೆ ಇದಾಗಿದೆ. ಘಟನೆಯ ಸಾಕ್ಷಿಯೂ ಹೇಳುವ ಪ್ರಕಾರ ಒಂದೇ ಒಂದು ಪೆಟ್ಟು ಬಿದ್ದಿದೆ, ಆದರೆ ಪೋಸ್ಟ್‌ಮಾರ್ಟಮ್ ವರದಿಯು ಸುಮಾರು ಆರು ಗಾಯಗಳಾಗಿವೆ ಎಂದು ತೋರಿಸುತ್ತದೆ ಎಂದು ಅವರು ವಾದ ಮಂಡಿಸಿದ್ದರು.

ಸ್ವಯಂ ಆತ್ಮರಕ್ಷಣೆಗೆ ಮುಂದಾದ ಮಣಿಪುರ ಮಹಿಳೆಯರು: ಊರಿನೊಳಗೆ ಸೇನೆಗೂ ನೋ ಎಂಟ್ರಿ

ಆದರೂ, ಸುಮಾರು ಆರು ಗಾಯಗಳಾಗಿರುವುದರಿಂದ ಇದು ಆತ್ಮರಕ್ಷಣೆಯ ಹಕ್ಕಿನ ಪ್ರಕರಣವಾಗುವುದಿಲ್ಲ ಎಂದು ವಾದಿಸಿತು. ಅರ್ಜಿದಾರರ ಉದ್ದೇಶ ಕೇವಲ ಆತ್ಮರಕ್ಷಣೆ ಮಾತ್ರವಾಗಿದ್ದರೆ ಎರಡು ಹೊಡೆತಗಳು ಸಾಕಿತ್ತು. ಆದರೆ ಆರು ಹೊಡೆತಗಳಿಂದ ಇದು ಉದ್ದೇಶಪೂರ್ವಕ ಹತ್ಯೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಸರ್ಕಾರಿ ಪರ ವಕೀಲರು ವಾದಿಸಿದ್ದರು. ಆದರೂ ಕೊನೆಗೆ ನ್ಯಾಯಾಲಯವೂ ಆತ್ಮರಕ್ಷಣೆಯ ವಾದವನ್ನು ಗಣನೆಗೆ ತೆಗೆದುಕೊಂಡು ಮಹಿಳೆಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

click me!