
ಡೆಲ್ಲಿ ಮಂಜು
ನವದೆಹಲಿ ( ಏ.1) : 'ಭಟ್ಟನ ಡಾನ್.'.! ಈ ಎರಡು ಪದಗಳು ಉತ್ತರ ಪ್ರದೇಶದ ಕರಾಳ ಇತಿಹಾಸದ ಪಾತ್ರೆಯಲ್ಲಿ ನೆಲ ತಲುಪಿದ್ದವು. ಅವನೊಬ್ಬನ ಸಾವಿನಿಂದಾಗಿ ಮತ್ತೆ ತೇಲಿ ಬಂದಿವೆ. ಒಂದರ್ಥದಲ್ಲಿ ಇವೆರಡು ಪದಗಳು ಬಿಡಿಸಿಕೊಳ್ಳದಷ್ಟು ಅಂಟಾಗಿದ್ದವು. ಈ ಜಿಗುಟಿನ ಜೊತೆಗೆ ಇವುಗಳ ಹಿಂದೆ 'ಶೋಕಿ'ಯ ಬಂಧವೂ ಇತ್ತು.
ಜೈಲಿಂದ ಮೆಡಿಕಲ್ ಕಾಲೇಜಿನ ತುರ್ತು ಚಿಕಿತ್ಸಾ ಘಟಕಕ್ಕೆ ಬಂದು ಉಸಿರು ಚೆಲ್ಲಿದ ಮಾಫಿಯಾ ಡಾನ್ ಮುಖ್ತಾರ್ ಅನ್ಸಾರಿಯ ಜೈಲು ಬದುಕಿನ ಒಂದು ಪೇಜ್ ಇದು.
ಶೋಕಿ-1
ಅಪರಾಧ ಮಾಡಿ ಜೈಲಿಗೆ ಹೋಗೋದು ಕೇಳಿದ್ದೇವೆ. ಆದ್ರೆ 'ಬಾಸ್' ಹೋದ ಅಂತ ಅವನ ಹಿಂದೆ ಅವನ ಬಾಣಸಿಗನೂ ಹೋದ ಬಗ್ಗೆ ಕೇಳಿದ್ದೀರಾ?
ಡಾನ್ ಅಪರಾಧ ಮಾಡಿದ ಅಂತಾ ಜೈಲಿಗೆ ಹೋದ್ರೆ, ಯಾವುದೇ ಪಿಕ್ ಪಾಕೇಟು ಕೇಸು. ಇಲ್ಲದೆ 'ಡಾನ್ ನ ಭಟ್ಟ' ಕೂಡ ಸರಳುಗಳ ಹಿಂದೆ ಹೋಗುತ್ತಿದ್ದನಂತೆ. ಹೀಗೆ ಹೋದ ಬಗ್ಗೆ ಒಂದು ಮಾಹಿತಿ ಇದೆ ಓದಿ.
ಮುಖ್ತಾರ್ ಅನ್ಸಾರಿ ಜೈಲ್ ಲೈಫ್ ಎಪಿಸೋಡ್‌ನಲ್ಲಿ ಅಡುಗೆ ಭಟ್ಡನದ್ದೇ ಒಂದು ಪೇಜ್ ಇದೆಯಂತೆ. ಅನ್ಸಾರಿ ಜೈಲಿಗೆ ಹೋದ ಕೂಡಲೇ ಅವನ ಅಡುಗೆಭಟ್ಟ ನನ್ನು ಜೈಲಿಗೆ ಕಳುಹಿಸಲು ಪೊಲೀಸರುಹುಡುಕುತ್ತಿದ್ದರಂತೆ. ಯಾವುದಾದ್ರೂ ಒಂದು ಕ್ರೈಮ್ ನಲ್ಲಿ ಆ ಬಾಣಸಿಗ ಜೈಲು ಸೇರುವ ತನಕ ಖಾಕಿ ಮಹಾಶಯರಿಗೆ ಸಂಬಳ ಇರುತ್ತಿರಲಿಲ್ವಂತೆ. ಹೀಗೆ ಕಂಬಿಗಳ ಹಿಂದೆ ಹೋಗುವ ಬಾಣಸಿಗ, ಡಾನ್ ಮುಖ್ತಾರ್ ಗೆ ಬಹಳ ಇಷ್ಡವಾದ ಮೀನು, ಮಾಂಸದ ಸಾರು ಮಾಡೋದ್ಟೆ ಅವನ ಕೆಲಸ. ಶುಚಿ ಮತ್ತು ರುಚಿ ಎರಡರ ನಡುವೆ ತುಂಡಾದ ಮೀನಿನ ದೇಹ, ಅನ್ಸಾರಿ ಬಾಯಿಗೆ ಹೋಗುವಂತೆ ನೋಡಿಕೊಳ್ಳೋದು ಭಟ್ಟನ ನಿತ್ಯ ಕರ್ತವ್ಯವಂತೆ.
Yogi Adityanath: ಯೋಗಿಯ ನಯಾ ಉತ್ತರ ಪ್ರದೇಶ..! ರಕ್ತಸಿಕ್ತ ರಾಜ್ಯದಲ್ಲಿ ನಿರ್ಭೀತ ವಾತಾವರಣ..!
ಶೋಕಿ-2
ಅಡುಗೆ ಭಟ್ಟ ಮಾಡೋ ಮೀನಿನ ಸಾರಿಗೆ ಮೀನು ಬೇಕಲ್ಲ ಅದಕ್ಕೆ ಅನ್ಸಾರಿ ಒಂದು ಐಡಿಯಾ ಹುಡುಕಿದ್ದನಂತೆ. ಫ್ರೆಶ್ ಮೀನು.. ಫ್ರೆಶ್ ಸಾರು..! ಅನ್ನೋ ಕಾನ್ಸೆಪ್ಟ್ ಇಟ್ಟುಕೊಂಡು ಇದಕ್ಕಾಗಿ ಜೈಲಿನಲ್ಲೇ ಒಂದು ಹೊಂಡಾ ತೆಗಿಸಿ, ಅಲ್ಲಿ ಮೀನು ಬಿಟ್ಟಿದ್ದನಂತೆ. ಫ್ರೆಶ್ ಸಾರು ಬೇಕು ಅಂದ ಕೂಡ್ಲೆ ಆ ಭಟ್ಟ ಹೊಂಡಕ್ಕೆ ಕೈ ಹಾಕಿತ್ತಿದ್ದನಂತೆ. ಮುಲಾಯಂ ಸಿಂಗ್ ಯಾದವ್ ಸಿ ಎಂ ಆಗಿದ್ದಾಗ, ಮಾಯಾವತಿ ಯುಪಿ ಹೊಣೆ ಹೊತ್ತಿದ್ದಾಗ ಇವೆಲ್ಲಾ ಕುಚೇಷ್ಟೆಗಳು ಮಾಡಿದನಂತೆ ಖಳನಾಯಕ ಅನ್ಸಾರಿ. ಘಾಜೀಪುರ್ ಜೈಲಿನ ಇತಿಹಾಸದಲ್ಲಿ ಇವನ ಮೀನಿನ ಶೋಕಿ ಮತ್ತು ಮೀನಿನ ಹೊಂಡಾದ ಪೇಜ್ ಅಚ್ಚಳಿಯದೇ ಉಳಿದಿದೆಯಂತೆ.
ಶೋಕಿ -3
ಅನ್ಸಾರಿಗೆ ಒಂದಾ.. ಎರಡಾ.. ಶೋಕಿ.. ತಿನ್ನೋಕೆ ಮೀನನ ಚಟ.. ಆಟದಲ್ಲಿ ಬ್ಯಾಡ್ಮಿಂಟನ್ , ಕ್ರಿಕೆಟ್ ಚಟ.. ಬ್ಯಾಡ್ಮಿಂಟನ್ ಆಡೋದಾದ್ರೆ ಅದು ಕೂಡ ಘಾಜೀಪುರ ಡಿಸಿ ಜೊತೆಗೆ ಬೇಕಂತೆ. ಹಾಗಾಗಿ ಅನ್ಸಾರಿ ಜೈಲಿಗೆ ಹೋದ್ರರೇ ಡಿಸಿ ಕೂಡ ನಿತ್ಯ ಜೈಲಿಗೆ ಹೋಗಬೇಕಿತ್ತಂತೆ.
ಹೀಗೆ ಡಿಸಿ ಪ್ರತಿನಿತ್ಯ ಜೈಲಿಗೆ ಬರಬೇಕು, ಇವನ ಜೊತೆ ಬ್ಯಾಡ್ಮಿಂಟನ್ ಆಡಬೇಕು.. ಸೋತು ಮನೆಗೆ ಹೋಗಬೇಕು..!
ಇಲ್ಲೇ ಇರೋದು ನೋಡಿ ಒಂದು ಟ್ವಿಸ್ಟ್. ಆಟ ಆಡೋದು ಗೆಲ್ಲೋದಕ್ಕೆ ಅಂತ. ಆದ್ರೆ ಅನ್ಸಾರಿ ಜೊತೆ ಆಟವಾಡುವಾಗ ಡಿಸಿ ಹೆಚ್ಚಿನ ಬಾರಿ ಸೋಲ್ತಾ ಇದ್ರಂತೆ. ಆಟವಾಡೋಕೆ ಬರದೇ ಅಲ್ಲ. ಬದಲಾಗಿ ಅನ್ಸಾರಿಯನ್ನು ಮೆಚ್ಚಿಸೋಕೆ, ತಾನು (ಡಿಸಿ) ಸೋತು, ಅನ್ಸಾರಿಯನ್ನು ಗೆಲಿಸ್ತಾ ಇದ್ದನಂತೆ. ಹೋಗ್ಲಿ ಒಬ್ಬರೇ ಅಧಿಕಾರಿನಾ ಅಂದ್ರೆ ಇಲ್ಲ..ಇಲ್ಲ.. ಇದ್ದಬದ್ದ ಎಲ್ಲಾ ಟಾಪ್ ಆಫೀಸರ್ಸ್ ನಿತ್ಯ ಜೈಲಿಗೆ ಬಂದು ಬ್ಯಾಡ್ಮಿಂಟನ್ ಇವನ ಜೊತೆ ಆಡಿ ಹೋಗ್ತಿದ್ದರಂತೆ.
ರೌಡಿ ರಾಜಕಾರಣಿಗೆ ಜೈಲಲ್ಲೇ ನಿಂತ ಹಾರ್ಟ್, ವಿಷ ಹಾಕಿ ಕೊಲ್ಲಿಸಿದರಾ ಉತ್ತರ ಪ್ರದೇಶ ಪೊಲೀಸರು..?
ಶೋಕಿ-4
ಸಮಾಜವಾದಿ, ಬಹುಜನ ಸಮಾಜವಾದಿ ಕಾಲದಲ್ಲಿ ಇವನೊಬ್ಬ ಮಜಾವಾದಿಯಾಗಿ ಕಾಣಿಸಿಕೊಂಡಿದ್ದ. ಅದು ಹೊರಗಡೆ ಇರಲಿ.. ಜೈಲಿನ ಒಳಗಡೆ ಇರಲಿ..ಇವನ ಮಜಾ, ಶೋಕಿಗೆ ಪಾರವೇ ಇರಲಿಲ್ವಂತೆ.
ಕೇಸ್ ಒಂದರಲ್ಲಿ ಒಮ್ಮೆ ಲಖ್ನೋ ಜೈಲಿಗೆ ಹೋಗಿದ್ದನಂತೆ. ಆಗ, ನಿತ್ಯ ಸಂಸಾರದ ಜೊತೆ ಹೊರಗಡೆ ಬಂದು ಅಲ್ಲಿನ ಹಜರತ್ ಗಂಜ್ ಪ್ರದೇಶದಲ್ಲಿ ಸುತ್ತಾಡಿ ಹೋಗ್ತಾ ಇದ್ದನಂತೆ. ಕುಟುಂಬ ಸದಸ್ಯರ ಜೊತೆ ಸುತ್ತಾಡಿ, ಮನಸ್ಸು ಬಂದಾಗ ಜೈಲಿಗೆ ವಾಪಸ್ ಬರ್ತಾ ಇದ್ದನಂತೆ. ಜೈಲು ಡೇರಿಯ ಪೇಜ್‌ಗಳಲ್ಲಿರುವ ಹತ್ತಾರು ಕಥೆ, ದಂತಕಥೆಗಳು, ಜೈಲು ಸಿಬ್ಬಂದಿಯ ನೆನಪುಗಳು ಒಂದೊಂದಾಗಿ ಅನ್ಸಾರಿ ಸತ್ತ ಮೇಲೆ ಹೊರಗಡೆ ಬರುತ್ತಿವೆ. ಇವೆಲ್ಲಾ ಕಾರಣಗಳಿಂದಾಗಿಯೇ ಅನ್ನಿಸುತ್ತೆ ಯೋಗಿ ಅವರು ಯುಪಿ ಜನರಿಗೆ ಇಷ್ಟವಾಗಿ ಮತ್ತೆ ಸಿಎಂ ಆಗಿದ್ದು. ಸಿಎಂ ಕಮ್ ಹೋಂ ಮಿನಿಸ್ಟರ್ ಆಗಿರುವ ಯೋಗಿ ಅದಿತ್ಯನಾಥ್ ಅವರ ಆಡಳಿತದಲ್ಲಿ ಹೀಗೆ ಬಾಲ ಬಿಚ್ಚುವ ಅಥವಾ ಡಾನಿಸಂ ತೋರಿಸುವವರಿಗೆ ಖಬರಸ್ಥಾನ‌್‌ನಲ್ಲಿ ಜಾಗ ನಿಗದಿಯಾಗಿರುತ್ತೆ ಅನ್ನೋದೇ ನೆಮ್ಮದಿಯ ಸಂಗತಿ ಅಂತಾರೆ ಯುಪಿ ಜನ.
ತಮ್ಮನನ್ನು ಸೋಲಿಸಿದ್ದಕ್ಕೆ ನಡುರಸ್ತೆಯಲ್ಲೇ ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆ ಮಾಡಿದ್ದ ಮುಖ್ತಾರ್ ಅನ್ಸಾರಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ