
ಮುಂಬೈ (ಆ. 15): ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕುಟುಂಬಕ್ಕೆ ಮತ್ತೆ ಜೀವ ಬೆದರಿಕೆ ಬಂದಿದೆ. ಮೂಲಗಳ ಪ್ರಕಾರ, ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ಡಿಸ್ಪ್ಲೇ ಸಂಖ್ಯೆಗೆ ಎಂಟು ಬೆದರಿಕೆ ಕರೆಗಳು ಬಂದಿವೆ. ಕರೆ ಮಾಡಿದ ದುಷ್ಕರ್ಮಿ ಮೂರು ಗಂಟೆಗಳಲ್ಲಿ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಇದಾದ ಬಳಿಕ ಆಸ್ಪತ್ರೆ ಆಡಳಿತ ಮಂಡಳಿ ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನ ಹಿನ್ನೆಲೆಯಲ್ಲಿ ಅಂಬಾನಿ ಕುಟುಂಬದ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಿಂದ ದೂರು ಸ್ವೀಕರಿಸಿರುವುದನ್ನು ಮುಂಬೈ ಪೊಲೀಸರು ಖಚಿತಪಡಿಸಿದ್ದಾರೆ. ಈ ದೂರಿನಲ್ಲಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಎಂಟಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿರುವ ಉಲ್ಲೇಖವಿದೆ. ಪೊಲೀಸರು ಈ ಕರೆಗಳನ್ನು ಪರಿಶೀಲಿಸುತ್ತಿದ್ದಾರೆ. ಕರೆ ಮಾಡಿದ ವ್ಯಕ್ತಿ ಒಬ್ಬನೇ ಆಗಿದ್ದು, ಅವರು ಸತತ ಎಂಟು ಕರೆಗಳನ್ನು ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮುಂಬೈ ಪೊಲೀಸ್ ಆಯುಕ್ತರಿಗೆ ವಿಷಯ ತಿಳಿಸಲಾಗಿದೆ. ಪ್ರಕರಣದ ತನಿಖೆಗಾಗಿ ಮುಂಬೈ ಪೊಲೀಸರ ಮೂರು ತಂಡಗಳನ್ನು ರಚಿಸಿದ್ದಾರೆ. 2021ರ ಫೆಬ್ರವರಿಯಲ್ಲೂ ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ ಉಂಟಾಗಿತ್ತು. ಸ್ಪೋಟಕಗಳನ್ನು ತುಂಬಿದ್ದ ಎಸ್‌ಯುವಿ ಕಾರ್‌ಅನ್ನು ಅವರು ಅಂಟಿಲಾದ ಮನೆಯ ಬಳಿ ಇರಿಸಲಾಗಿತ್ತು.
ಆಗ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿಗೆ ಪತ್ರದ ಮೂಲಕ ಬೆದರಿಕೆ ಹಾಕಲಾಗಿತ್ತು. ಈ ವೇಳೆ ಮುಂಬೈ ಪೊಲೀಸರ ಎನ್‌ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜೆ ಹೆಸರು ಕೇಳಿ ಬಂದಿತ್ತು. ಇದೀಗ ಎನ್‌ಐಎ ಈ ಪ್ರಕರಣದ ತನಿಖೆ ನಡೆಸುತ್ತಿದೆ.
ಅದೇ ಸಮಯದಲ್ಲಿ, ಈಗ ಇತ್ತೀಚಿನ ಮಾಹಿತಿಯ ಪ್ರಕಾರ, ಮುಂಬೈ ಪೊಲೀಸರು ಆಂಟಿಲಿಯಾ ಬೆದರಿಕೆ ಪ್ರಕರಣದಲ್ಲಿ ದಹಿಸರ್‌ನ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಪ್ರಕರಣವು ತಮಾಷೆಯ ಕರೆಯಂತೆ ಕಾಣುತ್ತದೆ. ವ್ಯಕ್ತಿಯನ್ನು ಹಿಡಿಯಲು ಮುಂಬೈ ಪೊಲೀಸರ 4 ತಂಡಗಳನ್ನು ನಿಯೋಜಿಸಲಾಗಿತ್ತು. ಒಂದು ಗಂಟೆಯೊಳಗೆ ಆತನನ್ನು ಬಂಧನ ಮಾಡಲಾಗಿದೆ. ಬೆದರಿಕೆ ಕರೆ ಕುರಿತು ಮಾಹಿತಿ ಪಡೆದ ನಂತರ ಮುಂಬೈ ಪೊಲೀಸರು, ಮಹಾರಾಷ್ಟ್ರ ಎಟಿಎಸ್ ತಂಡ ಮತ್ತು ಕ್ರೈಂ ಬ್ರಾಂಚ್ ತಂಡ ಆಂಟಿಲಿಯಾ ತಲುಪಿದೆ. ಮಫ್ರತಿಯಲ್ಲಿ ತಿರುಗಾಟ ನಡೆಸಿದ್ದ ಪೊಲೀಸರು, ಶಂಕಿತರನ್ನು ಹಿಡಿದು ವಿಚಾರಣೆ ನಡೆಸಿದ್ದರು. ಅದರೊಂದಿಗೆ ಅಂಬಾನಿ ಮನೆಯ ಸಮೀಪ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.
ಗೃಹ ಸಚಿವಾಲಯದ ಮಹತ್ವದ ನಿರ್ಧಾರ, ಉದ್ಯಮಿ ಗೌತಮ್ ಅದಾನಿಗೆ Z ವರ್ಗದ ಭದ್ರತೆ!
ಮುಖೇಶ್ ಅಂಬಾನಿಗೆ Z + ಭದ್ರತೆ ಮತ್ತು ನೀತಾ ಅಂಬಾನಿಗೆ Y + ಭದ್ರತೆ: 2013ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ನಿಂದ ಬೆದರಿಕೆ ಬಂದ ನಂತರ ಅಂದಿನ ಮನಮೋಹನ್ ಸಿಂಗ್ ಸರ್ಕಾರ ಮುಖೇಶ್ ಅಂಬಾನಿ ಅವರಿಗೆ Z + ಭದ್ರತೆಯನ್ನು ಒದಗಿಸಿತ್ತು. ಅವರ ಪತ್ನಿ ನೀತಾ ಅಂಬಾನಿ ಅವರಿಗೆ 2016 ರಲ್ಲಿ ಕೇಂದ್ರ ಸರ್ಕಾರವು Y + ಭದ್ರತೆಯನ್ನು ಒದಗಿಸಿದೆ. ಅವರ ಮಕ್ಕಳಿಗೂ ಮಹಾರಾಷ್ಟ್ರ ಸರ್ಕಾರವು ದರ್ಜೆಯ ಭದ್ರತೆಯನ್ನು ನೀಡಿದೆ.
Google CEO ಸುಂದರ್ ಪಿಚೈ, ಮುಕೇಶ್ ಅಂಬಾನಿ ಜತೆ ಕ್ರಿಕೆಟ್ ಪಂದ್ಯ ವೀಕ್ಷಿಸಿದ ರವಿಶಾಸ್ತ್ರಿ
ಉದ್ಯಮಿಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಮುಖೇಶ್ ಅಂಬಾನಿ: ಇನ್ನು ಮುಖೇಶ್ ಅಂಬಾನಿ ಸೋಮವಾರ ಸಂಸ್ಥೆಯ ಉದ್ಯೋಗಿಗಳ ಜೊತೆ ಸ್ವಾತಂತ್ರ್ಯೋತ್ಸವ ಆಚರಿಸಿದರು. ಇದರ ವಿಡಿಯೋವನ್ನು ಸುದ್ದಿಸಂಸ್ಥೆ ಪೋಸ್ಟ್ ಮಾಡಿದೆ. ವೀಡಿಯೋದಲ್ಲಿ ಮುಖೇಶ್ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ ಮತ್ತು ಮೊಮ್ಮಗ ಪೃಥ್ವಿ ಅಂಬಾನಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವುದು ಕಂಡುಬಂದಿದೆ. ಮುಖೇಶ್ ಅಂಬಾನಿ ಮೊಮ್ಮಗನನ್ನು ಮಡಿಲಲ್ಲಿ ಹೊತ್ತುಕೊಂಡಿದ್ದರೆ, ನೀತಾ ಅಂಬಾನಿ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಬೀಸುತ್ತಿದ್ದಾರೆ. ಅಂಬಾನಿ ಕುಟುಂಬವು ಕಂಪನಿಯ ಉದ್ಯೋಗಿಗಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ