
ನವದೆಹಲಿ(ಜೂ.10) ವಿರಾಟ್ ಕೊಹ್ಲಿ, ನೀತಾ ಅಂಬಾನಿ ಸೇರಿದಂತೆ ಹಲವು ಸೆಲೆಬ್ರೆಟಿಗಳು, ಶ್ರೀಮಂತರು ಕುಡಿಯುವ ನೀರಿನ ಬೆಲೆ ಬಲು ದುಬಾರಿ. ಆಹಾರ, ನೀರು ಎಲ್ಲರ ಬಗ್ಗೆಯೂ ಹೆಚ್ಚಿನ ಗಮನಹರಿಸುತ್ತಾರೆ. ಆದರೆ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್ ಅಕ್ಕ ಪಕ್ಕ ಕುಳಿತಿದ್ದಾರೆ. ಇಷ್ಟೇ ಅಲ್ಲ ಕೇವಲ 31 ರೂಪಾಯಿಯ ORS ಕುಡಿದಿದ್ದಾರೆ.
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಕಾಣಿಸಿಕೊಂಡಿದ್ದರೆ, ಸೆಲೆಬ್ರೆಟಿಗಳ ಶ್ರೀಮಂತರ ಪಟ್ಟಿಯಲ್ಲಿ ಶಾರುಖ್ ಖಾನ್ ಗುರುತಿಸಿಕೊಂಡಿದ್ದಾರೆ. ಇವರಿಬ್ಬರು 31 ರೂಪಾಯಿ ಒಆರ್‌ಎಸ್ ಕುಡಿದಿರುವುದು ಇದೀಗ ಹಲವರ ಕಣ್ಣಿಗೆ ಬಿದ್ದಿದೆ. ಈ ಕುರಿತು ಫೋಟೋ, ವಿಡಿಯೋಗಳು ವೈರಲ್ ಆಗಿದೆ. ಇದೀಗ ಜನಸಾಮಾನ್ಯರು ಅಂಬಾನಿ-ಶಾರುಖ್ ಖಾನ್ ಸಾಮಾನ್ಯರಂತೆ ಒಆರ್‌ಎಸ್ ಕುಡೀತಾರಾ ಎಂದು ಪ್ರಶ್ನಿಸಿದ್ದಾರೆ.
ಅಂಬಾನಿ ಮಗಳಂದ್ರೆ ಏನು ಸುಮ್ನೇನಾ; ಇಶಾ ಅಂಬಾನಿ ಬಳಿಯಿದೆ 165 ಕೋಟಿ ನೆಕ್ಲೇಸ್, 450 ಕೋಟಿ ಮನೆ!
ದುಬಾರಿ ಮೌಲ್ಯದ ಹಲವು ಪಾನೀಯಗಳು ಲಭ್ಯವಿದೆ. ಆದರೆ ಈ ಕೋಟ್ಯಾಧಿಪತಿಗಳು 31 ರೂಪಾಯಿ ಒಆರ್‌ಎಸ್ ಕುಡಿದಿದ್ದಾರೆ. ದೆಹಲಿಯ ವಿಪರೀತ ಉರಿ ಬಿಸಿಲಿನ ಬೇಗೆಗೆ ದೇಹದ ನೀರಿನ ಅಂಶ ಹಾಗೂ ಅಸ್ವಸ್ಥಗೊಳ್ಳುವುದನ್ನು ತಪ್ಪಿಸಲು ಒಆರ್‌ಎಸ್ ನೀಡಲಾಗಿತ್ತು. ದೇಶದ ಬೇರೆ ಬೇರೆ ಭಾಗಗಳಿಂದ ಬಂದಿರುವ ಆಹ್ವಾನಿತ ಗಣ್ಯರಿಗೆ ಒಆರ್‌ಎಸ್ ನೀಡಲಾಗಿತ್ತು. ದಿಢೀರ್ ಉಷ್ಣವಾತಾವರಣಕ್ಕೆ ಹೊಂದಿಕೆಯಾಗಲು ಪ್ರಯಾಸವಾಗಬಹುದು ಅನ್ನೋ ಕಾರಣಕ್ಕೆ ಎಲ್ಲರಿಗೂ ಒಆರ್‌ಎಸ್ ನೀಡಲಾಗಿತ್ತು.
ಮುಕೇಶ್ ಅಂಬಾನಿ ಹಾಗೂ ಶಾರುಖ್ ಖಾನ್ ಹಲವು ಬಾರಿ ತಾವು ಸಾಮಾನ್ಯರಂತೆ ನಡೆದುಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಮುಕೇಶ್ ಅಂಬಾನಿ ಇತ್ತೀಚೆಗೆ ಮತದಾನದ ವೇಳೆ ತಮ್ಮ ಗುರುತಿನ ಚೀಟಿಯನ್ನು ಸಾಮಾನ್ಯರಂತೆ ಪ್ಲಾಸ್ಟಿಕ್ ಕವರ್‌ನಲ್ಲಿ ತಂದು ಮತ ಹಾಕಿದ್ದರು.
ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ಬಾಲಿವುಡ್ ಬಹುತೇಕ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇತ್ತ ಉದ್ಯಮಿಗಳು ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿತ್ತು. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೋದಿ ಜೊತೆಗೆ 72 ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಪಕಿ ಕರ್ನಾಟಕದಿಂದ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಹಾಗೂ ವಿ ಸೋಮಣ್ಣ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಅಂಬಾನಿ ರಿಲಯನ್ಸ್ ಗ್ರೂಪ್‌ನಲ್ಲಿ ಅತೀ ಹೆಚ್ಚು ಸ್ಯಾಲರಿ ಪಡೆಯೋದು ಇಶಾ, ಆಕಾಶ್, ಅನಂತ್ ಅಂಬಾನಿಯಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ