
ಮುಂಬೈ (ಸೆ.14) ದೇಶಾದ್ಯಂತ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಅದರಲ್ಲೂ ಮುಂಬೈನಲ್ಲಿ ಗಣೇಶ ಹಬ್ಬ ಅತ್ಯಂತ ವಿಶೇಷ. ಪ್ರತಿ ಗಲ್ಲಿಯಲ್ಲೂ ಗಣೇಶೋತ್ಸವವಿದೆ. ಇಷ್ಟೇ ಅಲ್ಲ ಅತೀ ದೊಡ್ಡ, ಅತೀ ದುಬಾರಿ ಗಣೇಶ ಚತುರ್ಥಿ ಕೂಡ ಮುಂಬೈನಲ್ಲೇ ಇದೆ. ಈ ಪೈಕಿ ಉದ್ಯಮಿ ಮುಕೇಶ್ ಅಂಬಾನಿ ಮನೆಯಲ್ಲೂ ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಅಂಬಾನಿ ಮನೆಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮೂರ್ತಿ ಪ್ರತಿಷ್ಠಾಪನೆಯಿಂದ ಹಿಡಿದು, ವಿಸರ್ಜನೆವರೆಗೆ ಅಚ್ಚುಕಟ್ಟಾಗಿ, ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದೀಗ ಅಂಬಾನಿ ಮನೆಯ ಗಣೇಶೋತ್ಸವದ ಕೆಲ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮುಕೇಶ್ ಅಂಬಾನಿಯ ಆ್ಯಂಟಿಲಿಯಾ ಮನೆ ಸಂಪೂರ್ಣ ಅಲಂಕಾರಗೊಂಡಿದೆ. ಇಡೀ ಮನೆಯನ್ನು ಹೂವು , ತಳಿರು ತೋರಣೆ, ಲೈಟಿಂಗ್ಸ್ ಮೂಲಕ ಅಂಲಕರಿಸಲಾಗಿದೆ. ಇನ್ನು ಕುಟುಂಬಸ್ತರು, ಆಪ್ತರು ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದಾರೆ. ಅಂಬಾನಿ ಮನೆಯ ಅಲಂಕಾರಗಳ ವಿಡಿಯೋಗಳು ಭಾರಿ ಗಮನಸೆಳೆಯುತ್ತಿದೆ. ಪ್ರತಿ ವಿಚಾರದಲ್ಲೂ ಅದ್ಧೂರಿತನ ಕಾಣುತ್ತಿದೆ. ದೇಗುಲ ಪರಿಕಲ್ಪನೆಯಲ್ಲಿ ಅಂಬಾನಿ ಮನೆ ಶೃಂಗರಿಸಲಾಗಿದೆ. ದೇಗುಲದಲ್ಲಿರುಂತ ಕಂಬಗಳು, ದ್ವಾರಗಳು, ಅಲಂಕಾರಗಳನ್ನು ಬಳಸಲಾಗಿದೆ.
ಮುಕೇಶ್ ಅಂಬಾನಿ ಮನೆ, ಕಚೇರಿ, ಸಾಗುವ ಮಾರ್ಗ ಸೇರಿದಂತೆ ಎಲ್ಲೆಡೆ ಗರಿಷ್ಠ ಭದ್ರತೆ ನೀಡಲಾಗಿದೆ. ಇದೀಗ ಗಣೇಶೋತ್ಸವ ಸಂಭ್ರಮಾಚರಣೆಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಹೀಗಾಗಿ ಆಪ್ತರು, ಕುಟುಂಬಸ್ಥರ ಜೊತೆ ಭದ್ರತಾ ಪಡೆಗಳು ಎಲ್ಲೆಡೆ ಕಾಣುತ್ತಾರೆ.
ಅಂಬಾನಿ ಮನೆಗೆ ಅದ್ಧೂರಿಯಾಗಿ ಗಣೇಶನ ಮೂರ್ತಿಯನ್ನು ತರಲಾಗಿತ್ತು. ತರುವ ವಾಹವನ್ನೂ ಸಂಪೂರ್ಣವಾಗಿ ಹೂವುಗಳಿಂದ ಅಲಂಕರಿಸಲಾಗಿತ್ತು. ಜೊತೆಗೆ ಭಜನೆ, ಜೈಕಾರಗಳ ಮೂಲಕ ಅಂಬಾನಿ ಮನೆಗೆ ಗಣೇಶನ ಮೂರ್ತಿ ತರಲಾಗಿದೆ. ಅದ್ಧೂರಿಯಾಗಿ ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಯುತ್ತಿದೆ. ಅಂಬಾನಿ ಮನೆಯ ಅದ್ಧೂರಿ ಗಣೇಶೋತ್ಸವದ ಕೆಲ ವಿಡಿಯೋಗಳು ಎಲ್ಲರ ಗಮನೆಸೆಳೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ