ನವದೆಹಲಿ(ಮೇ.10): ಕೊರೋನಾ ಸಾಂಕ್ರಾಮಿಕ ರೋಗದಿಂದ ವಿಶ್ವವೇ ತತ್ತರಿಸಿದೆ. ಕೊರೋನಾ ಜೊತೆಗೆ ಇತರ ಮಾರಕ ರೋಗಗಳು ಇಡಿ ಆರೋಗ್ಯ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ. ಇದೀಗ ಯುಕೆ, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ SARS-CoV-2 ರೂಪಾಂತರಿ ವೈರಸ್ ತೀವ್ರವಾಗಿ ಹರಡುತ್ತಿದೆ. ಈ ಸಂಕಷ್ಟ, ಆತಂಕದ ನಡುವೆ ಸಿಹಿ ಸುದ್ದಿಯೊಂದು ಬಂದಿದೆ. ಬಯೋNಟೆಕ್ ಹಾಗೂ ಮಾಡೆರ್ನಾ ಅಭಿವೃದ್ಧಿ ಪಡಿಸಿದ mRNA ವಾಕ್ಸಿನ್ ಇದೀಗ ಕೊರೋನಾ ಮಾತ್ರವಲ್ಲ ಕ್ಯಾನ್ಸರ್ ಗೆಲ್ಲಲಿದೆ ಅನ್ನೋ ವರದಿ ಬಹಿರಂಗವಾಗಿದೆ.
'ಕೋವ್ಯಾಕ್ಸಿನ್ ಬ್ರೆಜಿಲ್ ವೈರಸ್ ಮೇಲೆ ಪರಿಣಾಮಕಾರಿ!
undefined
ಕೊರೋನಾ ಸೋಂಕಿಗೆ ಪರಿಣಾಮಕಾರಿ ವ್ಯಾಕ್ಸಿನ್ ಎಂದು ಗುರುತಿಸಿಕೊಂಡಿರುವ mRNA ಲಸಿಕೆ ಇದೀಗ ಜನರಲ್ಲಿ ಹೊಸ ಆಶಾಕಿರಣ ಮೂಡಿಸಿದೆ. RNA ಅಥವಾ mRNA ಲಸಿಕೆ ಇದೀಗ ಕೋಟ್ಯಾಂತರ ಜನರಲ್ಲಿ ನೆಮ್ಮದಿಯ ನಿಟ್ಟುಸಿರಿಗೆ ಕಾರಣವಾಗಿದೆ.
ಕೊರೋನಾ ವೈರಸ್ ಹಾಗೂ ರೂಪಾಂತರಿ ವೈರಸ್ ವಿರುದ್ಧ ಹೋರಾಡಲು ನೂತನ mRNA ಲಸಿಕೆ ಶಕ್ತವಾಗಿದೆ ಅನ್ನೋದು ಪ್ರಯೋಗದಿಂದ ಸಾಬೀತಾಗಿದೆ. mRNA ಲಸಿಕೆ ಚುಚ್ಚಿದಾಗ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿದೆ. ಜೊತೆಗೆ ದೇಹದಲ್ಲಿನ ವೈರಸ್ ನಿಷ್ಕ್ರೀಯಗೊಳಿಸಬಲ್ಲ ಸಾಮರ್ಥ್ಯ ಹೊಂದಿದೆ.
ಕ್ಯಾನ್ಸರ್ ವಿರುದ್ಧ ಮಡದಿಯ ಹೋರಾಟ: US ಟಿವಿ ಶೋ ತ್ಯಜಿಸಿದ ಅನುಪಮ್ ಖೇರ್.
ಲಸಿಕೆಗಳನ್ನು ತಯಾರಿಸಲು ಒಂದು ವರ್ಷಕ್ಕಿಂತ ಕಡಿಮೆ ಸಮಯ ತೆಗೆದುಕೊಂಡಿದೆ. ಈ ಲಸಿಕೆ ಅತ್ಯಂತ ಸುರಕ್ಷಿತವಾಗಿದೆ ಎಂಬುದು ವಿವಿದ ಹಂತದ ಪ್ರಯೋಗದಿಂದ ದೃಢಪಟ್ಟಿದೆ.