ಹೊಸ ವರ್ಷಾಚರಣೆ ಹೆಸರಲ್ಲಿ ಕುಡಿದು ತೂರಾಟ: ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಆಕ್ರೋಶ

Published : Jan 01, 2023, 03:30 PM IST
ಹೊಸ ವರ್ಷಾಚರಣೆ ಹೆಸರಲ್ಲಿ ಕುಡಿದು ತೂರಾಟ: ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಆಕ್ರೋಶ

ಸಾರಾಂಶ

2022 ಕಳೆದು ಎಲ್ಲರೂ 2023ನೇ ವರ್ಷವನ್ನು ನಿನ್ನೆ ಸಂಭ್ರಮದಿಂದ ಬರ ಮಾಡಿಕೊಂಡರು, ಯುವ ಸಮೂಹವಂತು ರಸ್ತೆಯಲ್ಲೇ ಕುಣಿದು ಕುಡಿದು ಕುಪ್ಪಳಿಸುವ ಮೂಲಕ 2022ಕ್ಕೆ ಬೈ ಬೈ ಹೇಳಿ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದಾರೆ. ಆದರೆ ಹೀಗೆ ಹೊಸವರ್ಷವನ್ನು ಆಚರಿಸಿರುವುದಕ್ಕೆ, ಡಿಸೆಂಬರ್ 31ರಂದು ರಾತ್ರಿ ಕುಡಿದು ತೂರಾಡಿದ ಯುವ ಸಮೂಹದ ವಿರುದ್ಧ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನವದೆಹಲಿ: 2022 ಕಳೆದು ಎಲ್ಲರೂ 2023ನೇ ವರ್ಷವನ್ನು ನಿನ್ನೆ ಸಂಭ್ರಮದಿಂದ ಬರ ಮಾಡಿಕೊಂಡರು, ಯುವ ಸಮೂಹವಂತು ರಸ್ತೆಯಲ್ಲೇ ಕುಣಿದು ಕುಡಿದು ಕುಪ್ಪಳಿಸುವ ಮೂಲಕ 2022ಕ್ಕೆ ಬೈ ಬೈ ಹೇಳಿ ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದಾರೆ. ಆದರೆ ಹೀಗೆ ಹೊಸವರ್ಷವನ್ನು ಆಚರಿಸಿರುವುದಕ್ಕೆ, ಡಿಸೆಂಬರ್ 31ರಂದು ರಾತ್ರಿ ಕುಡಿದು ತೂರಾಡಿದ ಯುವ ಸಮೂಹದ ವಿರುದ್ಧ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹೊಸ ವರ್ಷದ ಮುನ್ನಾದಿನದಂದು ಭೋಪಾಲ್‌ನಲ್ಲಿ (Bhopal) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಗ್ಯಾ ಸಿಂಗ್ (Pragya singh) ಅವರು, ನಮ್ಮ ಹೊಸ ವರ್ಷವು ಚೈತ್ರ ಮಾಸದಲ್ಲಿ ನವರಾತ್ರಿಯ ಮೊದಲ ದಿನದಂದು  ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಹೊಸ ಬೆಳೆಗಳು ಬೆಳೆದು ಬಂದಿರುತ್ತದೆ. ಹೊಸ ವಾತಾವರಣವೂ ನಿರ್ಮಾಣವಾಗಿರುತ್ತದೆ. ವಸಂತದ ಕಂಪು ಹಾಗೂ ತಾಜಾ ಗಾಳಿಯಿಂದ ಕೂಡಿರುತ್ತದೆ.  ಇದರ ಜೊತೆಗೆ ನಾವು ದುರ್ಗಾ ಮಾತೆಯ ಆಶೀರ್ವಾದವನ್ನು ಪಡೆಯುತ್ತವೆ. ಇದು ನಮಗೆ ಹೊಸ ವರ್ಷ ಎಂದು ಪ್ರಾಗ್ಯಾ ಸಿಂಗ್ ಹೇಳಿದ್ದಾರೆ. 

ತುಳಸಿ ಮಾಲೆ ಧರಿಸಿದರೆ ಕೋವಿಡ್‌ಗೆ ತುತ್ತಾಗಲ್ಲ: ಸಂಸದೆ ಪ್ರಜ್ಞಾಸಿಂಗ್‌

ಇದು ನಮ್ಮ ಸಂಸ್ಕೃತಿಯ ಹೊಸ ವರ್ಷವಲ್ಲ, ಇದು ಕೇವಲ ಕ್ಯಾಲೆಂಡರ್‌ನ ಹೊಸವರ್ಷವಾಗಿದೆ. ತಡರಾತ್ರಿಯವರೆಗೂ ಮದ್ಯಪಾನ ಮಾಡಿ ಕುಣಿದು ಕುಣಿಯುತ್ತಾ, ಮಾರನೇ ದಿನ ಮಧ್ಯಾಹ್ನದ ವೇಳೆಗೆ ಏಳುವ ಜನ ಹೊಸದನ್ನು ನೋಡುವುದಿಲ್ಲ ಎಂದು ಪ್ರಗ್ಯಾ ಸಿಂಗ್ ಹೇಳಿದರು. ನಮ್ಮ ಹೊಸ ವರ್ಷದಲ್ಲಿ ಎಲ್ಲವೂ ಹೊಸದಾಗಿರುತ್ತದೆ. ಪ್ರಕೃತಿ ಹೊಸದಾಗಿರುತ್ತದೆ. ಆ ಸಮಯದಲ್ಲಿಅದು ಹೊಸದಾಗಿ ಅರಳುತ್ತದೆ. ಆ ಸಮಯದಲ್ಲಿ ನಾವು ಹೊಸದನ್ನು ಆರಂಭಿಸಬೇಕು. ಇದೇ ಸಮಯದಲ್ಲಿ ನಾವು  ಜೀವನದಲ್ಲಿ ಹರ್ಷಚಿತ್ತತೆ, ಸಂತೋಷ ಮತ್ತು ಹೊಸತನವನ್ನು ತರುವ ಕೆಲಸಗಳನ್ನು ಮಾಡಬೇಕು ಎಂದು ಅವರು ಹೇಳಿದರು.

ಹೊಸ ವರ್ಷದ ಪಾರ್ಟಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಾಗ್ಯಾ ಸಿಂಗ್, ಡಿಸೆಂಬರ್ 31 ರಂದು ರಾತ್ರಿ ಇಡೀ ಮದ್ಯ ಸೇವಿಸಿ ನೃತ್ಯ ಮಾಡುವವರು ಮರುದಿನ ಮಧ್ಯಾಹ್ನ ತಡವಾಗಿ ಎಚ್ಚರಗೊಳ್ಳುತ್ತಾರೆ. ಕನಿಷ್ಠ ಮುಂಜಾನೆಯನ್ನು ಅವರು ನೋಡುವುದಿಲ್ಲ. ಇಂತಹವರು ಯಾವ ಹೊಸತನವನ್ನು ನೋಡುತ್ತಾರೆ. ಪಾಶ್ಚಿಮಾತ್ಯ ನಾಗರಿಕತೆಯೂ (western civilisation) ನಮ್ಮ ಸಂಸ್ಖೃತಿ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದರು. 

Pragya Thakur: 2014ರ ನಂತರ ಭಾರತಕ್ಕಷ್ಟೇ ಅಲ್ಲ, ಮಹಿಳೆಯರಿಗೂ ನಿಜವಾದ ಸ್ವಾತಂತ್ರ್ಯ!

ಹೊಸ ವರ್ಷದ ಮೊದಲ ದಿನವಾದ ಇಂದು ಮುಂಜಾನೆ ವಾರಣಾಸಿಯ (Varanasi) ಅಸ್ಸಿ ಘಾಟ್‌ನಲ್ಲಿ (Assi Ghat) 'ಗಂಗಾ ಆರತಿ'(Ganga aarti) ನಡೆಸಲಾಯಿತು. ಗಂಗಾ ಆರತಿ ವೀಕ್ಷಿಸಲು ಜನರು ಘಾಟ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇತ್ತ ಉಜ್ಜಯಿನಿಯಲ್ಲಿಯೂ ಇಂದು ಬೆಳಗಿನ ಆರತಿಯ ದರ್ಶನ ಪಡೆಯಲು ಭಕ್ತರು ಮಹಾಕಾಳೇಶ್ವರ ದೇವಸ್ಥಾನದಲ್ಲಿ (Mahakaleshwar Temple) ಜಮಾಯಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ