ಅಪ್ಪನಾದ ಖುಷಿಯಲ್ಲಿ ತಮ್ಮನ ಪಾರ್ಟಿ, ಊಟ ಮಾಡಿ ಹೋದ ಕಾಂಗ್ರೆಸ್ ಯೂತ್ ಜಿಲ್ಲಾಧ್ಯಕ್ಷ ಅಮಾನತು

Published : Nov 05, 2026, 02:56 PM IST
Party Turns Costly for Congress Youth District President

ಸಾರಾಂಶ

ತಮ್ಮ ಅಪ್ಪನಾಗಿದ್ದಾನೆ. ಮಗ ಹುಟ್ಟಿದ್ದಕ್ಕೆ ಪಾರ್ಟಿ ಆಯೋಜಿಸಿದ್ದಾನೆ. ಈ ಪಾರ್ಟಿಗೆ ಶಿಸ್ತಾಗಿ ಬಂದು ಊಟ ಮಾಡಿಕೊಂಡು ಹೋದ ಕಾಂಗ್ರೆಸ್ ಯೂತ್ ಜಿಲ್ಲಾಧ್ಯಕ್ಷನನ್ನು ಅಮಾನತು ಮಾಡಲಾಗಿದೆ. ಊಟ ಮಾಡಿದ ಕಾಂಗ್ರೆಸ್ ಮುಖಂಡನಿಗೆ ಸಂಕಷ್ಟ ಬಂದಿದ್ದು ಯಾಕೆ?

ಇಂದೋರ್ (ನ.05) ಕಾಂಗ್ರೆಸ್ ಯೂತ್ ಜಿಲ್ಲಾಧ್ಯಕ್ಷನ ಸಹೋದರ ಅಪ್ಪನಾಗಿದ್ದಾನೆ. ಮಗ ಹುಟ್ಟಿದ ಖುಷಿಯಲ್ಲಿ ಸಹೋದರ ಪಾರ್ಟಿ ಆಯೋಜಿಸಿದ್ದಾನೆ. ಕುಟುಂಬಸ್ಥರು, ಆಪ್ತರು ಈ ಪಾರ್ಟಿಗೆ ಆಹ್ವಾನಿಸಿದ್ದಾನೆ. ಬ್ಯೂಸಿ ಶೆಡ್ಯೂಲ್ ನಡುವೆ ತನ್ನ ಎಲ್ಲಾ ಕೆಲಸ ಕಾರ್ಯ ಬದಿಗೊತ್ತಿದ ಅಣ್ಣ, ಜಿಲ್ಲಾ ಕಾಂಗ್ರೆಸ್ ಯೂತ್ ಅಧ್ಯಕ್ಷ ಪಾರ್ಟಿಗೆ ಆಗಮಿಸಿದ್ದಾನೆ. ಕುಟುಂಬಸ್ಥರೊಂದಿಗೆ, ಸಂತಸದ ಕ್ಷಣಗಳನ್ನು ಕಳೆದಿದ್ದಾನೆ. ಬಳಿಕ ಊಟ ಮುಗಿಸಿಕೊಂಡು ಮನೆಗೆ ಮರಳಿದ್ದಾನೆ. ಈ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾನೆ. ಇಷ್ಟೇ ನೋಡಿ, ಜಿಲ್ಲಾಧ್ಯಕ್ಷನ ಅಮಾನತು ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಏನಿದು ಘಟನೆ?

ಮಧ್ಯಪ್ರದೇಶದ ಮೈಹಾರ್ ಜಿಲ್ಲೆಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೌರಬ್ ಶರ್ಮಾ ಪಕ್ಷ ಸಂಘಟನೆಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ. ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳು ಈತನ ಉಸ್ತುವಾರಿ ಅಚ್ಚುಕಟ್ಟಾಗಿ ನೇರವೇರುತ್ತಿತ್ತು. ಯುವ ಸಮೂಹವನ್ನು ಕಾಂಗ್ರೆಸ್ ಪಕ್ಷದ ಜೊತೆಯಾಗಿ ನಿಲ್ಲುವಂತೆ ಮಾಡಿ ಮೈಹಾರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಪಡಿಸಿದ ಕೀರ್ತಿಯೂ ಸೌರಬ್ ಶರ್ಮಾಗೆ ಸಲ್ಲಲಿದೆ. ನವೆಂಬರ್ ಒಂದರಂದು ಸೌರಬ್ ಶರ್ಮಾ ಸಹೋದರ ನಿತಿನ್ ಶರ್ಮಾ ಅಪ್ಪನಾದ ಖುಷಿಯಲ್ಲಿ ಪಾರ್ಟಿ ಆಯೋಜಿಸಿದ್ದಾನೆ.

ಪ್ರಮುಖವಾಗಿ ಕುಟುಂಬಸ್ಥರಿಗೆ ಈ ಪಾರ್ಟಿ ಆಯೋಜಿಸಲಾಗಿತ್ತು. ನಿತಿನ್ ಶರ್ಮಾ ತನ್ನ ಮನೆಯಲ್ಲಿ ಖುಷಿ ಸಂಭ್ರಮ ಹಂಚಿಕೊಳ್ಳಲು ಬಯಸಿದ್ದ. ಹೀಗಾಗಿ ಕುಟುಂಬಸ್ಥರು, ಆಪ್ತರನ್ನು ಆಹ್ವಾನಿಸಿದ್ದ. ಸಹೋದರ ಸೌರಬ್ ಶರ್ಮಾ ಕೂಡ ಈ ಪಾರ್ಟಿಗೆ ಆಗಮಿಸಿದ್ದಾರೆ. ಬೆಳಗ್ಗೆ ಪೂಜಾ ಕಾರ್ಯಕ್ರಮಗಳು, ಸಂಜೆ ಪಾರ್ಟಿ ಸೇರಿದಂತೆ ಇಡೀ ದಿನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೌರಬ್ ಶರ್ಮಾ, ಬಳಿಕ ಸಂಭ್ರಮದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ.

ನಂ.1ಕ್ಕೆ ಜಿಲ್ಲಾಧ್ಯಕ್ಷ ಗೈರು, ಕೆರಳಿದ ಕಾಂಗ್ರೆಸ್

ನವೆಂಬರ್ 1ರಂದು ಪಾರ್ಟಿ ಕಾರಣಕ್ಕೆ ಜಿಲ್ಲಾಧ್ಯಕ್ಷ ಸೌರಬ್ ಶರ್ಮಾ ತೆಗೆದುಕೊಂಡು ನಿರ್ಧಾರವೇ ಈ ಸಂಕಷ್ಟಕ್ಕೆ ಕಾರಣ. ನವೆಂಬರ್ 1 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ವೋಟ್ ಚೋರಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಿದ್ದ ಈ ರ್ಯಾಲಿಯಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಆದರೆ ನವೆಂಬರ್ 1 ರಂದು ತಮ್ಮನ ಪಾರ್ಟಿ ಹಾಗೂ ಕುಟುಂಬಸ್ಥರ ಸಮ್ಮಿಲನ ಕಾರಣ ಸೌರಬ್ ಶರ್ಮಾ ನವೆಂಬರ್ 1ರ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿಲ್ಲ. ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಭಟನೆಗೆ ಬರದೆ ಪಾರ್ಟಿಯಲ್ಲಿ ಜಿಲ್ಲಾಧ್ಯಕ್ಷ

ಪ್ರತಿಭಟನೆಗೆ ಬರದೆ ಪಾರ್ಟಿಯಲ್ಲಿ ಬರದ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೌರಬ್ ಶರ್ಮಾ ವಿರುದ್ದ ಮಧ್ಯಪ್ರದೇಶ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಂಡಿದೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಜವಾಬ್ದಾರಿ ಮರೆತಿದ್ದಾರೆ. ಜಿಲ್ಲಾಧ್ಯಕ್ಷನಾಗಿ ಮುಂದೆ ನಿಂತು ಕಾರ್ಯಕರ್ತರ ಹುರಿದುಂಬಿಸಿ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಜಿಲ್ಲಾಧ್ಯಕ್ಷನೇ ಗೈರಾಗಿದ್ದಾರೆ. ಸಂಘಟನಾ ಅಶಿಸ್ತು, ಪಕ್ಷದ ಆದೇಶ ಪಾಲಿಸುವಲ್ಲಿ ವಿಫಲತೆ ಹಾಗೂ ನಿರ್ಲಕ್ಷ್ಯತನ ಕಾರಣಗಳಿಂದ ಸೌರಬ್ ಶರ್ಮಾರನ್ನು ಅಮಾನತು ಮಾಡಲಾಗಿದೆ.

ಹಿರಿಯ ನಿರ್ಧಾರ ಸ್ವೀಕರಿಸಿದ ಯೂತ್ ಕಾಂಗ್ರೆಸ್ ಅಧ್ಯಕ್ಷ

ಸೌರಬ್ ಶರ್ಮಾ ಅಮಾನತು ನಿರ್ಧಾರವನ್ನು ಸ್ವೀಕರಿಸಿದ್ದಾರೆ. ಕುಟುಂಬದ ವಿಶೇಷ ಕ್ಷಣದಿಂದ ನನಗೆ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಪಕ್ಷದ ಸಂಘಟನಾ ಅಶಿಸ್ತು ಹಾಗೂ ಆದೇಶ ಪಾಲನೆಯಲ್ಲಿ ತೋರಿದ ನಿರ್ಲಕ್ಷ್ಯತನಕ್ಕೆ ಹಿರಿಯರು ತೆಗೆದುಕೊಂಡ ಅಮಾನತು ನಿರ್ಧಾರವನ್ನು ಸ್ವೀಕರಿಸುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಕ್ರೀಯನಾಗಿ ಕಾಂಗ್ರೆಸ್ ಪರ ಕೆಲಸ ಮಾಡುವುದಾಗಿ ಹೇಳಿದ್ದಾರೆ.

60 ಜಿಲ್ಲಾಧ್ಯಕ್ಷರ ಅಮಾನತು

ನವೆಂಬರ್ 1ರ ದೆಹಲಿಯ ವೋಟ್ ಚೋರಿ ಪ್ರತಿಭಟನಾ ರ್ಯಾಲಿಯಲ್ಲಿ ಹಲವು ಕಾರಣ ನೀಡಿ ಗೈರಾದ ಯೂತ್ ಕಾಂಗ್ರೆಸ್‌ನ 60 ಮುಖಂಡರನ್ನು ಮಧ್ಯಪ್ರದೇಶ ಕಾಂಗ್ರೆಸ್ ಅಮಾನತು ಮಾಡಿದೆ. ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರೆ, ಮಧ್ಯಪ್ರದೇಶ ಯೂತ್ ಕಾಂಗ್ರೆಸ್‌ನ ಜಿಲ್ಲಾವಾರು, ತಾಲೂಕುವಾರು ಮುಖಂಡರು ಗೈರಾಗಿದ್ದರು. ಹೀಗಾಗಿ ಈ ರೀತಿ ನಿರ್ಲಕ್ಷ್ಯ ಹಾಗೂ ಅಶಿಸ್ತು ತೋರಿದ 60 ಮುಖಂಡರನ್ನು ಮಧ್ಯಪ್ರದೇಶ ಕಾಂಗ್ರೆಸ್ ಅಮಾನತು ಮಾಡಿದೆ. ಮುಂದಿನ ಆದೇಶದವರೆಗೆ ಅಮಾನತು ಮಾಡಲಾಗಿದೆ ಎಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಾಜ್‌ ಮಹಲ್ ರಾತ್ರಿ ಪೂರಾ ಕತ್ತಲಲ್ಲಿರುತ್ತೆ! 1997ರಲ್ಲಿ ನಡೆದ ಆ ಘಟನೆಯಿಂದ ಲೈಟಿಂಗ್ ನಿಷೇಧ!
ಎಲೆಕ್ಷನ್ ಗೆಲ್ಲೋಕೆ 10 ಲಕ್ಷ ‌ಸಾಲ ಮಾಡಿ ಊರಿಗೆಲ್ಲಾ ಹಂಚಿದ, ಸೋತ ನಂತ್ರ ಜನರ ರಕ್ತ ಹೀರಿದ