
ಆಗ್ರಾ ಯಮುನಾ ನದಿ ದಡದಲ್ಲಿರುವ ತಾಜ್ ಮಹಲ್(Taj Mahal) ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ. ತಾಜ್ ಮಹಲ್ ಕೇವಲ ಸಮಾಧಿ ಆಗಿರದೆ ಬಿಳಿ ಅಮೃತಶಿಲೆಯ ವಿನ್ಯಾಸ, ತಾಂತ್ರಿಕತೆಗೆ ವಿಶ್ವದಾದ್ಯಂತ ಹೆಸರುವಾಸಿ. ಭಾರತಕ್ಕೆ ಯಾವುದೇ ದೇಶದ ನಾಯಕರು ಭೇಟಿ ನೀಡಿದರೂ ತಾಜ್ ಮಹಲ್ ನೋಡದೆ ವಾಪಸ್ ಆಗಲಾರರು. ಇಂಥ ಐತಿಹಾಸಿಕ ಕಟ್ಟಡ ಎಂದರೆ ಕೇಳಬೇಕೆ ಜಗಮಗಿಸುವ ಲೈಟಿಂಗ್ ಇರಬೇಕಲ್ಲವೇ? ಆದರೆ ನೀವು ಅಚ್ಚರಿಪಡುತ್ತೀರಿ, ಅದೇನೆಂದರೆ ತಾಜ್ ಮಹಲ್ಗೆ ಯಾವುದೇ ಲೈಟಿಂಗ್ ವ್ಯವಸ್ಥೆ ಇಲ್ಲ! ಅಂದರೆ ರಾತ್ರಿಯಾಗುತ್ತಿದ್ದಂತೆ ಕತ್ತಲೋ ಕತ್ತಲು. ದೇಶದ ಇತರೆ ಸ್ಮಾರಕಗಳಂತೆ ಇಲ್ಲಿ ವರ್ಣರಂಜಿತ ಲೈಟಿಂಗ್ ವ್ಯವಸ್ಥೆಗಳಿಲ್ಲ. ಹಂಪಿಯಲ್ಲಿ ನೋಡುವಂತೆ ಇಲ್ಲಿನ ಬೆಳಕಿನಾಟ ನೋಡಲಾಗದು. ರಾತ್ರಿಯಾಗುತ್ತಿದ್ದಂತೆ ತಾಜ್ ಮಹಲ್ ಕತ್ತಲೆಯಲ್ಲಿ ಕಳೆದುಹೋಗುತ್ತದೆ. ಯಾಕೆ ಹೀಗೆ? ತಾಜ್ ಮಹಲ್ಗೆ ಲೈಟಿಂಗ್ ವ್ಯವಸ್ಥೆ ಏಕೆ ಮಾಡಿಲ್ಲ ಎಂಬ ಪ್ರಶ್ನೆಯೇ? ಹೌದು ಇದು ನಿರ್ಲಕ್ಷ್ಯದಿಂದಲ್ಲ ಬದಲಿಗೆ ತಾಜ್ ಮಹಲ್ನ ವಿಶಿಷ್ಟ ಪರಂಪರೆ ರಕ್ಷಿಸಲು ವಿನ್ಯಾಸಗೊಳಿಸಲಾದ ಅದರ ವೈಜ್ಞಾನಿಕ ತಾಂತ್ರಿಕತೆ, ಕಾನೂನು ಕಾರಣಗಳೇನು ಅನ್ನೋದು ತಿಳಿಯೋಣ.
ವಿಶ್ವದ ಏಳು ಅದ್ಭುತಗಳಲ್ಲೊಂದಾದ ತಾಜ್ ಮಹಲ್ ನೋಡಲು ದಿನನಿತ್ಯ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ದೇಶದ ಪ್ರವಾಸಿಗರಲ್ಲದೆ ವಿದೇಶದಿಂದ ಪ್ರವಾಸಿಗರು, ಗಣ್ಯ ವ್ಯಕ್ತಿಗಳು ತಾಜ್ ನೋಡಲು ಬರುತ್ತಾರೆ. ಆದರೆ ರಾತ್ರಿಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಕಂಡು ಅಚ್ಚರಿ ಪಡುತ್ತಾರೆ. ಯಮುನಾ ನದಿ ದಡದಲ್ಲಿ ನಿಂತಿರುವ ಈ ಭವ್ಯ, ವಿಶ್ವಪಾರಂಪರಿಕ ಕಟ್ಟಡವು ನೈಸರ್ಗಿಕವಾಗಿ ತುಂಬಾ ಸುಂದರವಾಗಿದೆ. ತಜ್ಞರು ಮತ್ತು ಭಾರತೀಯ ಪುರಾತತ್ವ ನಿಯಮಗಳನ್ವಯ ಸ್ಮಾರಕ ಮತ್ತು ಅದರ ರಚನೆ, ಸೌಂದರ್ಯಕ್ಕೆ ಯಾವುದೇ ಹಾನಿಯಾಗದಂತೆ ಕೃತಕ ಬೆಳಕಿನಿಂದ ದೂರವಿರಿಸಲಾಗಿದೆ.
ತಾಜ್ಮಹಲ್ಗೆ ಲೈಟಿಂಗ್ ವ್ಯವಸ್ಥೆ ಮಾಡದಿರಲು ಪ್ರಮುಖ ಕಾರಣವೆಂದರೆ ಯಮುನಾ ನದಿ ದಡದಲ್ಲಿ ಕಂಡುಬರುವ ಕೀಟಗಳ ಹಾವಳಿ. ಲೈಟಿಂಗ್ ಹಾಕಿದರೆ ಕೀಟಗಳು ಮುತ್ತಿಕೊಂಡು ತಾಜ್ ಮಹಲ್ನ ಅಮೃತ ಶಿಲೆ ಹಾಳು ಮಾಡುತ್ತವೆ. ಬಿಳಿ ಅಮೃತಶಿಲೆಯು ಬೆಳಕನ್ನು ತೀವ್ರವಾಗಿ ಆಕರ್ಷಿಸುವ ಗುಣ ಹೊಂದಿದೆ. ರಾತ್ರಿಯಲ್ಲಿ ಲೈಟಿಂಗ್ ವ್ಯವಸ್ಥೆ ಮಾಡಿದ್ರೆ ನದಿ ದಡದಲ್ಲಿನ ಕೀಟಗಳಿಗೆ ಆಕರ್ಷಿತಗೊಂಡ ಮುತ್ತಿಕೊಳ್ಳುವ ಅಮೃತಶಿಲೆಯ ಮೇಲೆ ಮಲಮೂತ್ರ ವಿಸರ್ಜನೆ, ಕಪ್ಪು ಹಸಿರು ಬಣ್ಣದ ಕಲೆಗಳು ಉಂಟಾಗಿ ಹಾಳಾಗುವ ಸಾಧ್ಯತೆಯೇ ಹೆಚ್ಚು ಇದರಿಂದ ತಾಜ್ ಮಹಲ್ ಬಿಳಿಯ ಹೊಳಪು ಕಳೆದುಕೊಂಡು ಮಸುಕಾಗಬಹುದು. ಹೀಗಾಗಿ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.
ತಾಜ್ ಮಹಲ್ ಒಂದು ಕಾಲದಲ್ಲಿ ರಾತ್ರಿಯೂ ಕೂಡ ಜಗಮಗಿಸುವ ಲೈಟಿನಿಂದ ಬೆಳಗುತ್ತಿತ್ತು. ದೀಪಾಲಂಕಾರ ಮಾಡಲಾಗಿತ್ತು ಬಹುತೇಕರಿಗೆ ತಿಳಿದಿಲ್ಲದ ಸಂಗತಿ. ಆದರೆ 1997ರಲ್ಲಿ ಅದೊಂದು ದಿನ ಪ್ರಸಿದ್ಧ ಸಂಗೀತಗಾರ ಯಾನ್ನಿ ಅವರ ಪ್ರಮುಖ ಸಂಗೀತ ಕಚೇರಿ ನಡೆದಿತ್ತು. ಆ ಸಮಯದಲ್ಲಿ ತಾಜ್ ಮಹಲ್ ಕೃತಕ ದೀಪಗಳಿಂದ ಆಲಂಕರಿಸಲಾಗಿತ್ತು. ಆ ರಾತ್ರಿಯ ಪರಿಣಾಮವಾಗಿ ಮರುದಿನ ಬೆಳಗ್ಗೆ ಬಂದು ನೋಡಿದಾಗ ಶಾಕ್. ಏಕೆಂದರೆ ತಾಜ್ ಮಹಲ್ ಗೋಡೆಗಳ ಮೇಲೆ ಅಸಂಖ್ಯ ಕೀಟಗಳು ಮುತ್ತಿಕೊಂಡಿದ್ದವು. ತಾಜ್ ಮೇಲೆಯೇ ಗೂಡು ಕಟ್ಟಿಕೊಂಡಿದ್ದವು. ಇದರಿಂದ ತಾಜ್ ಮಹಲ್ನ ಅಮೃತಶಿಲೆಯೇ ಕಲೆಗಳಿಂದ ತುಂಬಿ ಹೋಗಿ ಹಾಳಾಗಿತ್ತು. ಈ ಘಟನೆ ಬಳಿಕ ಭಾರತೀಯ ಪುರಾತತ್ವ ಸಮೀಕ್ಷೆ(ASI) ಎಚ್ಚರಗೊಂಡಿತು. ಬಳಿಕ ತಜ್ಞರ ಸಲಹೆಯ ಮೇರೆಗೆ ರಾತ್ರಿ ಲೈಟಿಂಗ್ ವ್ಯವಸ್ಥೆಯನ್ನೇ ಶಾಶ್ವತವಾಗಿ ನಿಷೇಧಿಸಲಾಯ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ