ಎಲೆಕ್ಷನ್ ಗೆಲ್ಲೋಕೆ 10 ಲಕ್ಷ ‌ಸಾಲ ಮಾಡಿ ಊರಿಗೆಲ್ಲಾ ಹಂಚಿದ, ಸೋತ ನಂತ್ರ ಜನರ ರಕ್ತ ಹೀರಿದ

Published : Nov 05, 2026, 01:11 PM IST
YSRCP

ಸಾರಾಂಶ

ಚುನಾವಣೆಗೆ ಬರೋಬ್ಬರಿ 10 ಲಕ್ಷ ರೂಪಾಯಿ ಸಾಲ ಮಾಡಿ ಮತದಾರರಿಗೆ ಹಂಚಿಕೆ ಮಾಡಿದ್ದಾನೆ. ಹಣ ಪಡೆದ ಮತದಾರರು ನಿಮಗೆ ವೋಟು ಹಾಕುತ್ತೇವೆ ಎಂದು ಭರವಸೆ ನೀಡಿದ್ದಾರೆ. ಫಲಿತಾಂಶ ಬಂದಾಗ ಅಭ್ಯರ್ಥಿ ಗೆಲ್ಲಲಿಲ್ಲ. ಇದೀಗ ಮುಖಂಡನ ಗೂಗ್ಲಿಗೆ ಮತದಾರರು ಸುಸ್ತಾಗಿದ್ದಾರೆ, ಹಲವರು ಗ್ರಾಮ ತೊರೆಯುತ್ತಿದ್ದಾರೆ.

ಆಂಧ್ರ ಪ್ರದೇಶ (ನ.05) ಸ್ಥಳೀಯ ಸಂಸ್ಥೆ ಚುನಾವಣೆ ಯಾವ ವಿಧಾನಸಭೆ, ಲೋಕಸಭೆ ಚುನಾವಣೆಗೂ ಕಡಿಮೆ ಇರಲ್ಲ. ಪೈಪೋಟಿ, ಜಿದ್ದಾಜಿದ್ದಿ, ಹೋರಾಟ, ಪ್ರತಿಭಟನೆಗಳು ತೀವ್ರವಾಗಿರುತ್ತದೆ. ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಭ್ಯರ್ಥಿ ಬರೋಬ್ಬರಿ 10 ಲಕ್ಷ ರೂಪಾಯಿ ಸಾಲ ಪಡೆದು ಕ್ಷೇತ್ರದ ಮತದಾರರಿಗೆ ಹಂಚಿಕೆ ಮಾಡಿದ್ದಾನೆ. ಪ್ರತಿ ಮನೆ ಮನೆಗೆ ತೆರಳಿ ಹಣ ಹಂಚಿಕೆ ಮಾಡಿದ್ದಾನೆ. ಫಲಿತಾಂಶ ಬಂದಾಗ ಆಘಾತವಾಗಿದೆ. ಹಣ ಹಂಚಿದ ಅಭ್ಯರ್ಥಿಗೆ ಮತಗಳೇ ಬಿದ್ದಿಲ್ಲ. ಸೋಲಿನಿಂದ ಕಂಗೆಟ್ಟ ಅಭ್ಯರ್ಥಿಯಿಂದ ಗ್ರಾಮದ ಜನರು ಸುಸ್ತಾಗಿದ್ದಾರೆ.

ಪುರಸಭೆ ಚುನಾವಣೆಯಲ್ಲಿ ಗೋಲ್ಮಾಲ್

ಆಂಧ್ರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ನಾಯಕ ಮತದಾರರ ಬಳಿಕ ಒಪ್ಪಂದ ಮಾಡಿಕೊಂಡಿದ್ದಾನೆ. ಚಿತ್ತೂರು ಜಿಲ್ಲೆಯ ಪಲನಮೇರು ಪುರಸಭೆಯ 32ನೇ ವಾರ್ಡ್‌ನಲ್ಲಿ ನಿಂತ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ ರೆಡ್ಡಿ ಪ್ರಸಾದ್ ಇದೀಗ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಪುರಸಭೆಯ ಚುನಾವಣೆಯಲ್ಲಿ ಕೆ ರೆಡ್ಡಿ ಪ್ರಸಾದ್ ಬರೋಬ್ಬರಿ 10 ಲಕ್ಷ ರೂಪಾಯಿ ಸಾಲ ಪಡೆದು ತನ್ನ ವಾರ್ಡ್‌ನ ಮತದಾರರಿಗೆ ಹಂಚಿಕೆ ಮಾಡಿದ್ದಾರೆ. ಪ್ರತಿ ಮನೆ ಮನೆಗೆ ತೆರಳಿ ಹಣ ಹಂಚಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಹಣ ಹಂಚಿಕೆ ವೇಳೆ ನಿಮಗೆ ಮತ ಹಾಕುವುದಾಗಿ ಜನರು ಭರವಸೆ ನೀಡಿದ್ದಾರೆ. ಅಣ್ಣಾ ನಿಮ್ಮನ್ನು ಬಿಟ್ಟು ಇನ್ಯಾರಿಗೂ ಮತ ಇಲ್ಲ ಎಂದು ಖಚಿತವಾಗಿ ನಾಲ್ಕು ಬಾರಿ ಹೇಳಿದ ಮತಾದರ ಸಂಖ್ಯೆ ಒಟ್ಟೂಗೂಡಿಸಿ ಲೆಕ್ಕಾಚಾರ ಹಾಕಿದಾಗ ಭರ್ಜರಿ ಗೆಲುವಿನ ಸೂಚನೆ ಸಿಗುತ್ತಿತ್ತು.

10 ಲಕ್ಷ ರೂಪಾಯಿ ಹಣ ವಾಪಸ್ ಕೇಳಿದ ನಾಯಕ

ಜನಸೇನಾ ಪಾರ್ಟಿ ಅಭ್ಯರ್ಥಿ ಪೊಲ ಚೈತನ್ಯ ವಿರುದ್ಧ ನಿಂತ ಕೆ ರೆಡ್ಡಿ ಪ್ರಸಾದ್ ಫಲಿತಾಂಶ ಬಂದಾಗ ಸೋಲು ಕಂಡಿದ್ದರು. ಕೆ ರೆಡ್ಡಿ ಪ್ರಸಾದ್ ಸೋಲಿನಿಂದ ಕಂಗೆಟ್ಟಿದ್ದಾರೆ. ಇದೀಗ ಸಾಲ ಮಾಡಿ ಮತದಾರರಿಗೆ ಹಂಚಿದ ಹಣ ವಾಪಸ್ ಕೇಳಿದ್ದಾರೆ. ನಾನು ಸೋತಿದ್ದೇನೆ, ನನ್ನನ್ನು ಎಲ್ಲರು ಸೇರಿ ಸೋಲಿಸಿದ್ದೀರಿ. ಇದೀಗ ನಾನು ಹಂಚಿದ ಹಣ ಮರಳಿ ನೀಡಿ ಎಂದು ಮನೆ ಮನೆಗೆ ತೆರಳುತ್ತಿದ್ದಾನೆ. ಈತನ ಕಾಟದಿಂದ ಇದೀಗ ಹಲವರು ಮನೆ ತೊರೆದು ಬೇರೆಡೆಗೆ ಪಲಾಯನ ಮಾಡಿದ್ದಾರೆ. ಕೆಲ ದಿನಗಳ ಕಾಲ ಗ್ರಾಮದಿಂದ ಹೊರಗಿರಲು ಮುಂದಾಗಿದ್ದಾರೆ.

ಅಭ್ಯರ್ಥಿ ಮನೆ ಮನೆಗೆ ತೆರಲಿ ತಾನು ಹಂಚಿದ ಹಣ ವಾಪಸ್ ಕೇಳುತ್ತಿರುವ ವಿಡಿಯೋಗಳು, ಸುದ್ದಿಗಳು ಭಾರಿ ವೈರಲ್ ಆಗುತ್ತಿದೆ. ಇದೇ ವೇಳೆ ವ್ಯಾಪಕ ಆಕ್ರೋಶವೂ ಕೇಳಿಬರುತ್ತಿದೆ. ಪ್ರಜಾಪ್ರಭುತ್ವದಲ್ಲಿ ಅಭ್ಯರ್ಥಿಗಳು ದುಡ್ಡು ಹೆಂಚತ್ತಿರುವ ಹಲವು ಘಟನೆಗಳು ನಡೆಯುತ್ತಿದೆ. ಇದು ಯಾವ ಪ್ರಜಾಪ್ರಭುತ್ವ, ಏನಿದು ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.

ಸೋತ ಅಭ್ಯರ್ಥಿಯಿಂದ ಬಹಿರಂಗ ಹೇಳಿಕೆ

ವೈಎಸ್ಆರ್ ಕಾಂಗ್ರೆಸ್ ಪಾರ್ಟಿಯ ಕೆ ರೆಡ್ಡಿ ಪ್ರಸಾದ್, ತಾನು ಹಣ ಹಂಚಿರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ. ನಾನು ಹಣ ಹಂಚಿದ್ದೇನೆ.ಈಗ ಸೋತಿರುವ ಕಾರಣ ನನಗೆ ಹಣ ವಾಪಸ್ ನೀಡಲು ಕೇಳಿದ್ದೇನೆ. ನನ್ನ ಹಣ ನನಗೆ ವಾಪಸ್ ನೀಡಿ. ಒಪ್ಪಂದ ಪ್ರಕಾರ ನನಗೆ ಮತ ಹಾಕಬೇಕಿತ್ತು. ಅವರು ಹಾಕಿಲ್ಲ, ನನಗೆ ಹಣ ವಾಪಸ್ ಕೊಡಿ ಎಂದಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದಾನೆ ಎಂದು ವರದಿಯಾಗಿದೆ.ಆಂಧ್ರಪ್ರದೇಶದ ಇತ್ತೀಚಿನ ನಗರ ಸಭೆ ಹಾಗೂ ಪುರಸಭೆ ಚುನಾವಣೆಗಳಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಭಾರಿ ಜಯಗಳಿಸಿದ್ದರೆ, ಪ್ರತಿಪಕ್ಷ ವೈಎಸ್‌ಆರ್‌ಸಿಪಿ ಹಿನ್ನಡೆ ಅನುಭವಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಾಜ್‌ ಮಹಲ್ ರಾತ್ರಿ ಪೂರಾ ಕತ್ತಲಲ್ಲಿರುತ್ತೆ! 1997ರಲ್ಲಿ ನಡೆದ ಆ ಘಟನೆಯಿಂದ ಲೈಟಿಂಗ್ ನಿಷೇಧ!
ದೆಹಲಿಯಲ್ಲಿ ಮತ್ತೆ ಭೀಕರ ದುರಂತ: ಮೂರು ಅಂತಸ್ತಿನ ಕಟ್ಟಡ ಕುಸಿತ, ಸಾವು-ನೋವುಗಳೆಷ್ಟು?