ಮಸೀದಿಯನ್ನು ಕೊರೋನಾ ಆಸ್ಪತ್ರೆ ಮಾಡಿದ ಆಡಳಿತ ಮಂಡಳಿ; ಉಚಿತ ಆಕ್ಸಿಜನ್ ಸೇವೆ ಲಭ್ಯ!

By Suvarna NewsFirst Published Jun 26, 2020, 3:07 PM IST
Highlights

ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಸೋಂಕಿತರಿಗೆ ಆಸ್ಪತ್ರೆ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದೀಗ ಮಸೀದಿಯನ್ನೇ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಸೋಂಕಿತರ ನೆರವು ನೀಡಲು ಆಡಳಿ ಮಂಡಳಿ ಮುಂದಾಗಿದೆ. ಈ ಕುರಿತ ವರದಿ ಇಲ್ಲಿದೆ.

ಮಹರಾಷ್ಟ್ರ(ಜೂ.26): ಕೊರೋನಾ ವೈರಸ್‌ಗೆ ಮಹರಾಷ್ಟ್ರ ತತ್ತರಿಸಿ ಹೋಗಿದೆ. ಗರಿಷ್ಠ ಸೋಂಕಿತರು, ಗರಿಷ್ಠ ಸಾವು ಸಂಭವಿಸಿದ ರಾಜ್ಯ ಅನ್ನೋ ಕುಖ್ಯಾತಿಗೆ ಮಹಾರಾಷ್ಟ್ರ ಪಾತ್ರವಾಗಿದೆ. ಇದೀಗ ಮಹಾರಾಷ್ಟ್ರದಲ್ಲಿ ಸೋಂಕಿತರ ಪಾಡು ಯಾರಿಗೂ ಬೇಡ. ಆಸ್ಪತ್ರೆ ಸಿಗುತ್ತಿಲ್ಲ, ಚಿಕಿತ್ಸೆ ಸಿಗುತ್ತಿಲ್ಲ, ಸೂಕ್ತ ವ್ಯವಸ್ಥೆ ಇಲ್ಲ..ಹೀಗೆ ಅವ್ಯವವಸ್ಥೆಗಳ ಆಗರವಾಗಿ ಮಾರ್ಪಟ್ಟಿದೆ. ಹೀಗಾಗಿ ಮಹಾರಾಷ್ಟ್ರದ ಶಾಂತಿನಗರದ ಭಿವಂಡಿ ಬಳಿ ಮಸೀದಿ ಇದೀಗ ಕೊರೋನಾ ವೈರಸ್ ಆಸ್ಪತ್ರೆಯಾಗಿ ಬದಲಾಗಿದೆ.

ಕೊರೋನಾ ವೈರಸ್‌ಗೆ ಔಷದಿ ಇಲ್ಲ, ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಗೆ ಬಿಡಿಗಾಸು ಮನ್ನಣೆ ಇಲ್ಲ!...

ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಭಿವಂಡಿಯ ಮಕ್ಕಾ ಮಸೀದಿಯನ್ನು ಕೊರೋನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಜಾಮತ್ ಇ ಇಸ್ಲಾಂ ಹಿಂದ್ ಸಹಯೋಗದಲ್ಲಿ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. 5 ಬೆಡ್‌ಗಳಿಗೆ ಆಕ್ಸಿಜನ್ ಸಿಲಿಂಡರ್ ಕೂಡ ನೀಡಲಾಗಿದೆ. ಹೆಚ್ಚುವರಿ ಆಕ್ಸಿಜನ್ ಸಿಲಿಂಡರ್ ಕೂಡ ಇರಿಸಲಾಗಿದ್ದು, ಸೋಂಕಿತರು ಆಸ್ಪತ್ರೆಗೆ ಪ್ರಯಾಣ ದುಸ್ತರವಾದರೆ ಅವರ ಮನೆಗೆ ಆಕ್ಸಿಜನ್ ಸಿಲಿಂಡರ್ ನೀಡಲು ಮಸೀದಿ ಎಲ್ಲಾ ತಯಾರಿ ಮಾಡಿಕೊಂಡಿದೆ.

ಒಂದೇ ದಿನ ರಾಜ್ಯದಲ್ಲಿ 442 ಹೊಸ ಸೋಂಕು, 519 ಜನ ಡಿಸ್ಚಾರ್ಜ್..

ಒಂದು ವಾರದಿಂದ ಮಸೀದಿಯಲ್ಲಿ ಕೊರೋನಾ ಸೋಂಕಿತರಿಗ ಚಿಕಿತ್ಸೆ ಸೇವೆ ಆರಂಭವಾಗಿದೆ. ಸ್ಥಳೀಯ ವೈದ್ಯರ ನೆರವು ನೀಡಿದ್ದಾರೆ. ಇದುವರೆಗಗೆ 80 ಸೋಂಕಿತರು ಸದುಪಯೋಗ ಪಡೆದುಕೊಂಡಿದ್ದಾರೆ. ಹೆಚ್ಚು 10 ಆಕ್ಸಿನ್ ಸಿಲಿಂಡರ್ ಇರಿಸಲಾಗಿದ್ದು, ಅಗತ್ಯ ಬಿದ್ದವರಿಗೆ ನೀಡಲಾಗುತ್ತದೆ ಎಂದು ಮಕ್ಕಾ ಮಸೀದಿ ಆಡಳಿತ ಮಂಡಳಿ ಹೇಳಿದೆ.

ಮಹಾರಾಷ್ಟ್ರದ ಭಿವಂಡಿ ಸಣ್ಣ ಗ್ರಾಮದಲ್ಲಿ ಜೂನ್ 12ನೇ ರಂದು 395 ಕೊರೋನಾ ವೈರಸ್ ಪ್ರಕರಣಗಳಿವೆ. ಇನ್ನು 21 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದರು. ಇದೀಗ ದಿಢೀರ್ 1,332 ಕೊರೋನಾ ವೈರಸ್ ದಾಖಲಾಗಿದ್ದು, ಸಾವಿನ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.

click me!