ಕಣಿವೆ ನಾಡಿನ ಭೇಟಿ, ಕೇಂದ್ರಕ್ಕೆ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವರದಿ!

By Suvarna NewsFirst Published Oct 9, 2021, 11:27 AM IST
Highlights

* ಜಮ್ಮು ಕಾಶ್ಮೀರಕ್ಕೆ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಭೇಟಿ

* ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಯೋಜನೆಯ ಪರಿಶೀಲನೆ

* ಸ್ಥಳೀಯರೊಂದಿಗೆ ಸಂವಾದ ನಡೆಸಿದ ಕೇಂದ್ರ ಸಚಿವ

ಶ್ರೀನಗರ(ಅ.09): ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar), ಜಮ್ಮು ಮತ್ತು ಕಾಶ್ಮೀರ(jammu Kashmir) ಹಾಗೂ ಮಣಿಪುರ-ನಾಗಾಲ್ಯಾಂಡ್‌ಗೆ(Manipur-nagaland) ತಮ್ಮ ಅಧಿಕೃತ ಭೇಟಿಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಮೋದಿ ಸರ್ಕಾರದಲ್ಲಿ ಮಂತ್ರಿಯಾದ ನಂತರ ಎರಡೂ ರಾಜ್ಯಗಳಿಗೆ ಚಂದ್ರಶೇಖರ್ ಅವರ ಮೊದಲ ಅಧಿಕೃತ ಭೇಟಿ ಇದಾಗಿದೆ. ಅಲ್ಲಿನ ಅಭಿವೃದ್ಧಿಯ ದಿಕ್ಕಿನಲ್ಲಿ ಭೂಮಿಯ ವಾಸ್ತವತೆಯನ್ನು ಮೌಲ್ಯಮಾಪನ ಮಾಡಿ ಇದನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಸ್ಥಳೀಯ ಜನರ ಸಲಹೆಗಳು ಹಾಗೂ ಯೋಜನೆಗಳ ಮೇಲೆ ಗಮನಹರಿಸುವುದು ಇದರ ಉದ್ದೇಶವಾಗಿದೆ.

ಡಿಜಿಟಲ್ ಇಂಡಿಯಾದಲ್ಲಿ ಬದಲಾದ ಭಾರತ.. ಗ್ಲೋಬಲ್‌ ಪಟ್ಟಿಯಲ್ಲಿ ಗಟ್ಟಿ ಸ್ಥಾನ

ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಯೋಜನೆಯ ಪರಿಶೀಲನೆ

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಜಮ್ಮು ಮತ್ತು ಕಾಶ್ಮೀರಕ್ಕೆ(Jammu Kashmir) 2 ದಿನಗಳ ಅಧಿಕೃತ ಭೇಟಿಗಾಗಿ ಶ್ರೀನಗರ, ಬುಡ್ಗಾಮ್ ಮತ್ತು ಬಾರಾಮುಲ್ಲಾಗೆ(Baramulla) ಭೇಟಿ ನೀಡಿದ್ದರು. ಅವರ ಆಗಮನವು ಕೇಂದ್ರ ಸರ್ಕಾರವು ಆರಂಭಿಸಿದ ಒಂದು ಕಾರ್ಯಕ್ರಮದ ಭಾಗವಾಗಿತ್ತು. ಇದು ಸ್ಥಳೀಯ ಜನರೊಂದಿಗೆ ಸಂಪರ್ಕ ಸಾಧಿಸುವ ಗುರಿಯನ್ನು ಹೊಂದಿದೆ. ಇದರೊಂದಿಗೆ ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆ ಮಾಡುತ್ತದೆ.

ಅವರ ಭೇಟಿಯ ಸಮಯದಲ್ಲಿ, ಚಂದ್ರಶೇಖರ್ ಬದ್ಗಾಮ್(Budgam) ಜಿಲ್ಲೆಯಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಅವರು ವಿದ್ಯಾರ್ಥಿಗಳು, ಬುಡಕಟ್ಟು ಜನಾಂಗದವರು, ಪಿಆರ್‌ಐಗಳನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ರೂ 790 ಕೋಟಿ ಮೌಲ್ಯದ ಅಭಿವೃದ್ಧಿ ಕಾರ್ಯಕ್ರಮಗಳ ವೇಗವನ್ನು ಪತ್ತೆಹಚ್ಚಲು ಬುದ್ಗಾಮ್ ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆಗಳನ್ನು ನಡೆಸಿದರು. ವಿದ್ಯಾರ್ಥಿಗಳು, ರೈತರು, ತೋಟಗಾರರು, ಗಿರಿಜನರು, ಪಂಚಾಯತ್ ರಾಜ್ ಸಂಸ್ಥೆಗಳು, ಕೌಶಲ್ಯ ತರಬೇತುದಾರರು, ವ್ಯಾಪಾರಿ ಸಂಘಗಳು, ಹಣ್ಣು ಬೆಳೆಗಾರರ ​​ಸಂಘಗಳು ಮತ್ತು ಯುವಕರ ಸಂಘಗಳನ್ನೂ ಭೇಟಿಯಾಗಿದ್ದಾರೆ. ಅತ್ತ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಅವರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳನ್ನು ಅವರ ಉಪಸ್ಥಿತಿಯಲ್ಲಿ ತಿಳಿದುಕೊಳ್ಳಲು ಸಂವಾದ ನಡೆಸಿದರು.

ಹೃದಯದ ಅಂತರ ಮತ್ತು ದೆಹಲಿಯ ದೂರ

ಚಂದ್ರಶೇಖರ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ಬಗ್ಗೆ ಜನರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೇ "ಹೃದಯದ ಅಂತರ ಮತ್ತು ದೆಹಲಿಯ ದೂರವನ್ನು ಕಡಿಮೆ ಮಾಡಲು ಪ್ರಧಾನಮಂತ್ರಿಯವರ ಕರೆ ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ನೇರವಾಗಿ ಸಂಪರ್ಕ ಸ್ಥಾಪಿಸಿದೆ" ಎಂದು ಎಂದಿದ್ದಾರೆ. ಇದು ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಅಭೂತಪೂರ್ವ ಪ್ರಮಾಣದ ಸರ್ಕಾರಿ ಕಾರ್ಯಕ್ರಮವನ್ನು ರೂಪಿಸಿದೆ. ಅಕ್ಟೋಬರ್ 2019 ರ ಮೊದಲು ಕೇವಲ ಒಬ್ಬ ಮಂತ್ರಿ ಮಾತ್ರ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಕೆಲಸ ಮಾಡುತ್ತಿದ್ದರು, ಆದರೆ ಈಗ 77 ಮಂತ್ರಿಗಳು ಜಮ್ಮು ಮತ್ತು ಕಾಶ್ಮೀರದ ಜನರ ಸೇವೆಗಾಗಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ ಎಂಉವುದು ಉಲ್ಲೇಖನೀಯ.

ಮೋದಿ ನಾಯಕತ್ವದ ಗುಣಮಟ್ಟ ಎತ್ತರಿಸಿದ ಧೀಮಂತ : ಆರ್‌ಸಿ

ಮಣಿಪುರ-ನಾಗಾಲ್ಯಾಂಡ್‌ಗೂ ಅನೇಕ ಉಡುಗೊರೆ

ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಸೆಪ್ಟೆಂಬರ್ 16-18ರವರೆಗೆ ಮಣಿಪುರ-ನಾಗಾಲ್ಯಾಂಡ್‌ಗೆ ಅಧಿಕೃತ ಭೇಟಿ ನೀಡಿದ್ದಾರೆ. ಇಲ್ಲಿ ಅವರು ಅನೇಕ ಯೋಜನೆಗಳನ್ನು ಪರಿಶೀಲಿಸಿದ್ದಾರೆ. ಕೊಹಿಮಾದಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾವನ್ನು (ಎಸ್‌ಟಿಪಿಐ) ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಉದ್ಘಾಟಿಸಿದರು. ಇದು ಎಸ್‌ಟಿಪಿಐನ 61 ನೇ ಮತ್ತು ನಾಗಾಲ್ಯಾಂಡ್‌ನ ಮೊದಲ ಕೇಂದ್ರವಾಗಿದೆ. ಭೇಟಿಯ ಸಮಯದಲ್ಲಿ, ಸಚಿವರು ಬುಡಕಟ್ಟು ಮಹಿಳೆಯರಿಗಾಗಿ ಕೌಶಲ್ಯ ಸ್ವಾಧೀನ ಮತ್ತು ಜ್ಞಾನ ಜಾಗೃತಿ (SANKALP) ಅಡಿಯಲ್ಲಿ ಜೀವನಮಟ್ಟದ ಉತ್ತೇಜನಕ್ಕಾಗಿ ಕೌಶಲ್ಯ ಉನ್ನತೀಕರಣ ಕೇಂದ್ರಕ್ಕೆ ಭೇಟಿ ನೀಡಿದ್ದರು. ಚಂದ್ರಶೇಖರ್ ಅವರು ದಿಮಾಪುರದ ಕರಕುಶಲ ಉದ್ಯಮ ಕ್ಲಸ್ಟರ್‌ಗೆ ಭೇಟಿ ನೀಡಿದ್ದರು.

click me!