ದೇಶದಲ್ಲಿ ದಾಖಲೆಯ 54000+ ಕೇಸ್‌, 16 ಲಕ್ಷ ದಾಟಿದ ಸೋಂಕಿರ ಸಂಖ್ಯೆ!

By Suvarna NewsFirst Published Jul 31, 2020, 10:14 AM IST
Highlights

ದಾಖಲೆಯ 54000+ ಕೇಸ್‌| 16 ಲಕ್ಷ ದಾಟಿದ ಸೋಂಕಿರ ಸಂಖ್ಯೆ| 794 ಬಲಿ: ಸಾವಿನಲ್ಲಿ ಇಟಲಿ ಹಿಂದಿಕ್ಕಿ ಭಾರತ ನಂ.5

ನವದೆಹಲಿ(ಜು.31): ದೇಶದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಮತ್ತೊಮ್ಮೆ ದಾಖಲೆ ನಿರ್ಮಿಸಿವೆ. ಇನ್ನೊಂದೆಡೆ ಸಾವಿನ ಸಂಖ್ಯೆಯಲ್ಲಿ ಇಟಲಿಯನ್ನು ಭಾರತ ಹಿಂದಿಕ್ಕಿದೆ. ಗುರುವಾರ ದೇಶದಲ್ಲಿ 54,221 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 16,35,302ಕ್ಕೆ ಏರಿಕೆ ಆಗಿದೆ. ಒಂದೇ ದಿನ 794 ಮಂದಿ ಸಾವಿಗಿಡಾಗಿದ್ದು, ಸಾವಿನ ಸಂಖ್ಯೆ 35,744ಕ್ಕೆ ಏರಿಕೆ ಆಗಿದೆ. ಈ ಮೂಲಕ 35,132 ಮಂದಿ ಸಾವನ್ನಪ್ಪಿರುವ ಇಟಲಿಯನ್ನು ಹಿಂದಿಕ್ಕಿ ಭಾರತ ಜಾಗತಿಕವಾಗಿ 5ನೇ ಸ್ಥಾನ ಪಡೆದಿದೆ.

ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ 1.54 ಲಕ್ಷ ಮಂದಿ, 2ನೇ ಸ್ಥಾನದಲ್ಲಿರುವ ಬ್ರೆಜಿಲ್‌ನಲ್ಲಿ 90,212, ಬ್ರಿಟನ್‌ನಲ್ಲಿ 45,961 ಹಾಗೂ ಮೆಕ್ಸಿಕೋದಲ್ಲಿ 45,361 ಮಂದಿ ಕೊರೋನಾಕ್ಕೆ ಬಲಿ ಆಗಿದ್ದಾರೆ.

ವೆಂಟಿಲೇಟರ್‌, ಆಕ್ಸಿಜನ್‌ ಬೆಡ್‌ಗಳಿಲ್ಲದೆ ಖಾಲಿ ಬೆಡ್‌ ನೀಡಿದರೇನು ಪ್ರಯೋಜನ..? ಖಾದರ್ ಕಿಡಿ

ಇದೇ ವೇಳೆ ಕೊರೋನಾದಿಂದ ದಾಖಲೆಯ 37,057 ಮಂದಿ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 10,54,232ಕ್ಕೆ ಹೆಚ್ಚಳಗೊಂಡಿದೆ.

ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ದಾಖಲೆಯ 11,147 ಕೇಸ್‌, 266 ಸಾವು ಸಂಭವಿಸಿದ್ದು, ಸೋಂಕಿತರ ಸಂಖ್ಯೆ 4 ಲಕ್ಷ ಗಡಿ ದಾಟಿದೆ. ಅದೇ ರೀತಿ ತಮಿಳುನಾಡಿನಲ್ಲಿ 5,864 ಕೇಸ್‌, 97 ಸಾವು, ದೆಹಲಿಯಲ್ಲಿ 1093 ಕೇಸ್‌ 29 ಸಾವು, ಆಂಧ್ರ ಪ್ರದೇಶದಲ್ಲಿ ದಾಖಲೆಯ 10,167 ಕೇಸ್‌ 68 ಸಾವು ಸಂಭವಿಸಿದೆ.

ಆ್ಯಂಬುಲೆನ್ಸ್‌ ಹತ್ತೋದಿಲ್ಲ ಎಂದು ಸೋಂಕಿತರ ಕಿರಿಕ್‌

ಸಾವು: ಟಾಪ್‌ 5 ದೇಶಗಳು

1. ಅಮೆರಿಕ 1.54 ಲಕ್ಷ

2. ಬ್ರೆಜಿಲ್‌ 90212

3. ಬ್ರಿಟನ್‌ 45961

4. ಮೆಕ್ಸಿಕೋ 45361

5. ಭಾರತ 35744

click me!