2,000 ರೂ ನೋಟು ಹಿಂತೆಗೆದ ಬೆನ್ನಲ್ಲೇ ಸರ್ಕಾರಿ ಕಚೇರಿಯಲ್ಲಿ 2.31 ಕೋಟಿ ನಗದು ಹಣ ಪತ್ತೆ!

Published : May 20, 2023, 12:45 PM IST
2,000 ರೂ ನೋಟು ಹಿಂತೆಗೆದ ಬೆನ್ನಲ್ಲೇ ಸರ್ಕಾರಿ ಕಚೇರಿಯಲ್ಲಿ 2.31 ಕೋಟಿ ನಗದು ಹಣ ಪತ್ತೆ!

ಸಾರಾಂಶ

ಆರ್‌ಸಿಬಿ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡಿದೆ. ಈ ನಿರ್ಧಾರದಿಂದ ಇದೀಗ ಹಲವು ಅಕ್ರಮಗಳು ಬಯಲಿಗೆ ಬಂದಿದೆ. ರಾಜಸ್ಥಾನದ ಸರ್ಕಾರಿ ಕಚೇರಿಯಲ್ಲಿ 2,000 ರೂಪಾಯಿ ನೋಟುಗಳ 2.31 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ. 

ಜೈಪುರ(ಮೇ.20):  ನಕಲಿ ನೋಟು, ಅಕ್ರಣ ಹಣ ಗಳಿಕೆ, ಹವಾಲ ಹಣ, ಬ್ಲಾಕ್ ಮನಿ ಸೇರಿದಂತೆ ಹಲವು ಅಕ್ರಮಗಳನ್ನು ತಡೆಗಟ್ಟಲು ಪ್ರಧಾನಿ ಮೋದಿ ಡಿಮಾನಿಟೈಸೇಶನ್ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದರು. ಈ ವೇಳೆ ಬಿಡುಗಡೆ ಮಾಡಿದ್ದ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಇದೀಗ ಆರ್‌ಸಿಬಿಐ ಹಿಂತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಹಲವು ಅಕ್ರಮಗಳು ಬಯಲಿಗೆ ಬಂದಿದೆ. ರಾಜಸ್ಥಾನದ ಯೋಜನಾ ಭವನದಲ್ಲಿ ಕೆಳಮಹಡಿಯಲ್ಲಿ ಅಲಮಾರಿಯಲ್ಲಿ ಭಾರಿ ಪ್ರಮಾಣದ ನೋಟುಗಳು ಪತ್ತೆಯಾಗಿದೆ. ಪೊಲೀಸರು ದಾಳಿ ನಡೆಸಿದ ಸೂಟ್‌ಕೇಸ್‌ನಲ್ಲಿಟ್ಟಿದ್ದ 2,000 ರೂಪಾಯಿ ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನ ಸರ್ಕಾರದ ಯೋಜನಾ ಭವನದಲ್ಲಿನ ಅಕ್ರಮ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ನಿನ್ನೆ ದಾಳಿ ನಡೆಸಿದ ಪೊಲೀಸರಿಗೆ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ. ಇದೇ ವೇಳೆ ಮತ್ತೊಂದು ಅಲಮಾರಿಯಲ್ಲಿ ಇಟ್ಟಿದ್ದ 1 ಕೆಜಿ ಚಿನ್ನವನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ 7 ಸರ್ಕಾರಿ ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

 

2,000 ಮುಖಬೆಲೆಯ ನೋಟು ಹಿಂತೆಗೆದುಕೊಂಡ ಆರ್‌ಬಿಐ, ಸೆ.30ರವರೆಗೆ ವಿನಿಮಯಕ್ಕೆ ಅವಕಾಶ!

ಆರ್‌ಸಿಬಿ ನಿನ್ನೆ(ಮೇ.19) 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡಿತ್ತು. ಇತ್ತ ದಾಳಿ ವೇಳೆ ಪತ್ತೆಯಾಗಿರುವ 2.31 ಕೋಟಿ ರೂಪಾಯಿ ನಗದಿನಲ್ಲಿ ಬಹುತೇಕ 2,000 ರೂಪಾಯಿ ನೋಟುಗಳಾಗಿವೆ. ಘಟನೆ ಕುರಿತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ವಿವರಣೆ ನೀಡಲಾಗಿದೆ. ದಾಳಿ ಬಳಿಕ ರಾಜಸ್ಥಾನ ಡಿಜಿಪಿ ಉಮೇಶ್ ಮಿಶ್ರಾ, ಎಡಿಜಿಪಿ ದಿನೇಶ್ ಎಂಎನ್ ಜೈಪುರ ಕಮಿಷನರ್ ಆನಂದ್ ಶ್ರೀವಾತ್ಸವ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ನಗದು ಹಣ, ಚಿನ್ನದ ಜೊತೆ ಹಲವು ದಾಖಲೆಗಳು, ಅರ್ಜಿಗಳು ಪತ್ತೆಯಾಗಿದೆ. ಇದೀಗ ಯೋಜನಾ ಭವನದಲ್ಲಿ ಭ್ರಷ್ಟಾಚಾರ ಎಗ್ಗಿಲದೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇದೀಗ ಈ ಹಣ ಎಲ್ಲಿಂದ ಬಂತು ಅನ್ನೋದು ತನಿಖೆ ನಡೆಯುತ್ತಿದೆ. 2,000 ನೋಟು ಹಿಂತೆಗೆದುಕೊಂಡ ಬೆನ್ನಲ್ಲೇ ಈ ಹಣ ಪತ್ತೆಯಾಗಿದೆ.

2000 ರು. ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿರುವುದಾಗಿ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ಘೋಷಿಸಿದೆ. ಅಲ್ಲದೆ ತಕ್ಷಣದಿಂದ ಜಾರಿಗೆ ಬರುವಂತೆ 2000 ರು. ಮುಖಬೆಲೆಯ ನೋಟುಗಳನ್ನು ವಿತರಿಸದಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದೆ. ಆದರೆ ಸಾರ್ವಜನಿಕರಿಗೆ ತಾವು ಹೊಂದಿರುವ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾವಣೆ ಮಾಡಲು ಇಲ್ಲವೇ ಖಾತೆಗಳಲ್ಲಿ ಜಮೆ ಮಾಡಲು ಸೆ.30ರವರೆಗೂ ಕಾಲಾವಕಾಶ ನೀಡಿದೆ.

ನಿಷ್ಕ್ರಿಯ ಖಾತೆಗಳಲ್ಲಿನ ಹಣ ವಾರಸುದಾರರಿಗೆ ಹಿಂತಿರುಗಿಸಲು 100 ದಿನಗಳ RBI ಕಾರ್ಯಕ್ರಮ; ಜೂ.1ರಿಂದ ಪ್ರಾರಂಭ

ಆರ್‌ಬಿಐನ ನಿರ್ಧಾರದ ಅನ್ವಯ, ಸಾರ್ವಜನಿಕರು ಒಂದು ದಿನಕ್ಕೆ ಗರಿಷ್ಠ 20000 ರು. ಅಂದರೆ 10 ನೋಟುಗಳನ್ನು ಇತರೆ ಮೌಲ್ಯದ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. 2016ರಲ್ಲಿ ನೋಟು ಅಪನಗದೀಕರಣ ಮಾಡಿದ ಬಳಿಕ 500 ರು. ಮತ್ತು 1000 ರು. ಮುಖಬೆಲೆಯ ನೋಟುಗಳು ತಕ್ಷಣದಿಂದಲೇ ಮೌಲ್ಯ ಕಳೆದುಕೊಂಡಿದ್ದವು. ಆದರೆ ಇದೀಗ 2000 ರು. ನೋಟಿನ ವಿಷಯದಲ್ಲಿ ಅಂಥ ನಿಷೇಧ ಹೇರಿಲ್ಲ. ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯುತ್ತಿರುವ ಹೊರತಾಗಿಯೂ, ಈ ನೋಟುಗಳೂ ಕಾನೂನಿನ ಮಾನ್ಯತೆ ಹೊಂದಿರಲಿದೆ ಎಂದು ಆರ್‌ಬಿಐ ಹೇಳಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್