ದೇಶಾದ್ಯಂತ 8 ಹೊಸ ನಗರ ನಿರ್ಮಾಣಕ್ಕೆ ಸರ್ಕಾರ ಪ್ಲಾನ್‌

By Kannadaprabha NewsFirst Published May 20, 2023, 8:17 AM IST
Highlights

ದೇಶದಲ್ಲಿ ಪ್ರಸ್ತುತ ಇರುವ ನಗರಗಳಲ್ಲಿ ಉಂಟಾಗಿರುವ ಜನಸಂಖ್ಯೆಯ ಹೊರೆಯನ್ನು ತಗ್ಗಿಸಲು ದೇಶಾದ್ಯಂತ ಹೊಸದಾಗಿ 8 ನಗರಗಳನ್ನು ನಿರ್ಮಾಣ ಮಾಡುವ ಯೋಜನೆ ಸರ್ಕಾರದ ಪರಿಗಣನೆಯಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದೋರ್‌: ದೇಶದಲ್ಲಿ ಪ್ರಸ್ತುತ ಇರುವ ನಗರಗಳಲ್ಲಿ ಉಂಟಾಗಿರುವ ಜನಸಂಖ್ಯೆಯ ಹೊರೆಯನ್ನು ತಗ್ಗಿಸಲು ದೇಶಾದ್ಯಂತ ಹೊಸದಾಗಿ 8 ನಗರಗಳನ್ನು ನಿರ್ಮಾಣ ಮಾಡುವ ಯೋಜನೆ ಸರ್ಕಾರದ ಪರಿಗಣನೆಯಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಶದಲ್ಲಿ ಹೊಸ ನಗರಗಳನ್ನು ನಿರ್ಮಾಣ ಮಾಡಬೇಕಿದೆ ಎಂದು 15ನೇ ಹಣಕಾಸು ಆಯೋಗ ತನ್ನ ವರದಿಯೊಂದರಲ್ಲಿ ಶಿಫಾರಸು ಮಾಡಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಎಂ.ಬಿ.ಸಿಂಗ್‌ ಹೇಳಿದ್ದಾರೆ. 

ಇಂದೋರ್‌ನಲ್ಲಿ(Indore) ಆಯೋಜಿಸಲಾಗಿದ್ದ ಅರ್ಬನ್‌ 20 (U20) ಎಂಬ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಹಣಕಾಸು ಸಚಿವಾಲಯದ (Finance Ministry) ಶಿಫಾರಸಿನ ಬಳಿಕ ಹೊಸ ನಗರಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರಗಳು 26 ಪ್ರಸ್ತಾವನೆಗಳನ್ನು ಕಳುಹಿಸಿವೆ. ಇವುಗಳನ್ನು ಪರೀಶೀಲನೆ ನಡೆಸಿದ ಬಳಿಕ 8 ಹೊಸ ನಗರಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅವರು ಹೇಳಿದರು.

ಕರ್ನಾಟಕದ 6 ನಗರಗಳಿಗೆ ಟೌನ್‌ಶಿಪ್‌ ಭಾಗ್ಯ: 10,000 ಉದ್ಯೋಗ ಸೃಷ್ಟಿಯ ಗುರಿ

ಈಗಾಗಲೇ ಅಸ್ತಿತ್ವದಲ್ಲಿರುವ ನಗರಗಳು ನಾಗರಿಕರಿಗೆ ಬೇಕಾದ ಸವಲತ್ತುಗಳನ್ನು ಒದಗಿಸಲು ಸಾಧ್ಯವಾಗದ ಕಾರಣ ಹಾಗೂ ನಗರಗಳು ಅಡ್ಡಾದಿಡ್ಡಿಯಾಗಿ ವಿಸ್ತಾರಣೆಯಾಗುತ್ತಿರುವ ಕಾರಣ ಹೊಸ ನಗರಗಳನ್ನು ನಿರ್ಮಾಣ ಮಾಡಲು ಚಿಂತಿಸಲಾಗಿದೆ. ಹೊಸ ನಗರಗಳು ನಿರ್ಮಾಣವಾದರೆ ಅದರ ಸುತ್ತಲಿನ 200 ಕಿ.ಮೀ. ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳು ಅಭಿವೃದ್ಧಿ ಹೊಂದಲಿವೆ ಎಂದು ಅವರು ಹೇಳಿದರು.

ಹೊಸ ನಗರಗಳ ನಿರ್ಮಾಣ ಯಾವಾಗ ನಡೆಯಲಿದೆ ಎಂಬುದರ ಕುರಿತಾಗಿ ಸೂಕ್ತ ಸಮಯದಲ್ಲಿ ಸರ್ಕಾರ ಘೋಷಣೆ ಮಾಡಲಿದೆ ಎಂದು ಅವರು ಹೇಳಿದರು.

ಭಾರತದ ಈ ವಿಶಿಷ್ಟ ನಗರ… ಇಲ್ಲಿ ಯಾವುದೇ ಧರ್ಮ, ಹಣ ಮತ್ತು ಸರ್ಕಾರವೇ ಇಲ್ಲ!

click me!