ಲೋಕಸಭೆ ಚುನಾವಣೆ ನಡೆದ ಮರುದಿನವೇ ಸಾವನ್ನಪ್ಪಿದ ಬಿಜೆಪಿ ಅಭ್ಯರ್ಥಿ

By Anusha KbFirst Published Apr 21, 2024, 9:16 AM IST
Highlights

ಉತ್ತರ ಪ್ರದೇಶದಲ್ಲಿ ತಾನು ಅಭ್ಯರ್ಥಿಯಾಗಿ ಕಣಕ್ಕಿಳಿದ ಕ್ಷೇತ್ರದಲ್ಲಿ ಚುನಾವಣೆ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ಮೊರದಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರ್ವೇಶ್ ಸಿಂಗ್ ಸಾವನ್ನಪ್ಪಿದ್ದವರು.

ಮೊರದಾಬಾದ್‌: ಉತ್ತರ ಪ್ರದೇಶದಲ್ಲಿ ತಾನು ಅಭ್ಯರ್ಥಿಯಾಗಿ ಕಣಕ್ಕಿಳಿದ ಕ್ಷೇತ್ರದಲ್ಲಿ ಚುನಾವಣೆ ನಡೆದ ಮರುದಿನವೇ ಬಿಜೆಪಿ ಅಭ್ಯರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದ ಮೊರದಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರ್ವೇಶ್ ಸಿಂಗ್ ಸಾವನ್ನಪ್ಪಿದ್ದವರು. ಮೊರದಾಬಾದ್‌ ಪಶ್ಚಿಮ ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಗೆಲುವು ಸಾಧಿಸಿತ್ತು.

72 ವರ್ಷ ಪ್ರಾಯದ ಸರ್ವೇಶ್ ಸಿಂಗ್ ಅವರು ದೀರ್ಘಾಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದು, ದೆಹಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಮೊರದಾಬಾದ್‌ನಿಂದ ಕಣಕ್ಕಿಳಿದಿದ್ದ ಸರ್ವೇಶ್ ಸಿಂಗ್ ಅವರು ಐದು ಬಾರಿ ಶಾಸಕರಾಗಿ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 

Lok Sabha Election 2024: ಪೀಲಿಭೀತ್‌ನಲ್ಲಿ ವರುಣ್‌ ಇಲ್ಲದ ಬಿಜೆಪಿಗೆ ಮೋದಿ ಅಲೆಯೇ ಶ್ರೀರಕ್ಷೆ..!

ಸರ್ವೇಶ್ ಯಾದವ್ ಅವರ ನಿಧನವನ್ನು ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಭೂಪೇಂದ್ರ ಚೌಧರಿ ಖಚಿತಪಡಿಸಿದ್ದಾರೆ. ಅವರಿಗೆ ಗಂಟಲಿನಲ್ಲಿ ಸ್ವಲ್ಪ ಸಮಸ್ಯೆ ಇತ್ತು ಹೀಗಾಗಿ ಅಪರೇಷನ್ ಆಗಿತ್ತು. ನಿನ್ನೆ ತಪಾಸಣೆಗಾಗಿ ಅವರು ಏಮ್ಸ್ (AIIMS)ಗೆ ಹೋಗಿದ್ದರು. ಆದರೆ ಈಗ ಅವರು ಸಾವನ್ನಪ್ಪಿದ್ದಾರೆ ಎಂದು ಭೂಪೇಂದ್ರ ಚೌಧರಿ ಸುದ್ದಿಸಂಸ್ಥೆ ಪಿಟಿಐಗೆ ಹೇಳಿದ್ದಾರೆ. 

ಸರ್ವೇಶ್ ಸಿಂಗ್ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ವೇಶ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.  ಮೊರದಾಬಾದ್ ಬಿಜೆಪಿ ಅಭ್ಯರ್ಥಿ ಕನ್ವರ್ ಸರ್ವೇಶ್ ಸಿಂಗ್ ಅವರ ಹಠಾತ್‌ ನಿಧನದಿಂದ ನನಗೆ ಬಹಳ ಬೇಸರವಾಗಿದೆ. ಅವರು ತಮ್ಮ  ಕೊನೆ ಉಸಿರಿರುವವರೆಗೆ ಸಾರ್ವಜನಿಕರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.  ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.  ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಓಂ ಶಾಂತಿ ಎಂದು ಮೋದಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಗೋಧಿ ಗದ್ದೆಯಲ್ಲಿ ಬಸಂತಿ ಹೇಮಾಮಾಲಿನಿ ಪೋಸ್‌, 'ಐದು ವರ್ಷಕ್ಕೆ ಕಟಾವಿಗೆ ಬರೋ ಬೆಳೆ ಯಾವ್ದು?' ಎಂದ ನೆಟ್ಟಿಗರು!

ನಮ್ಮ ಮೊರಾದಾಬಾದ್ ಅಭ್ಯರ್ಥಿ ಮತ್ತು ಮಾಜಿ ಸಂಸದ ಕುನ್ವರ್ ಸರ್ವೇಶ್ ಕುಮಾರ್ ಸಿಂಗ್ ಜಿ ಅವರ ನಿಧನದ ಸುದ್ದಿ ತಿಳಿದು ನಾನು ಆಘಾತಕ್ಕೊಳಗಾಗಿದ್ದೇನೆ. ಇದು ಬಿಜೆಪಿ ಪರಿವಾರಕ್ಕೆ ತುಂಬಲಾರದ ನಷ್ಟವಾಗಿದೆ. ಈ ದುಃಖದ ಸಮಯದಲ್ಲಿ, ನನ್ನ ಪ್ರಾರ್ಥನೆಗಳು ಅವರ ಕುಟುಂಬ ಸದಸ್ಯರಿಗೆ ಹೋಗುತ್ತವೆ. ಪ್ರಭು ಶ್ರೀರಾಮ್ ಅವರ ಕುಟುಂಬಕ್ಕೆ ಈ ನಷ್ಟವನ್ನು ಭರಿಸುವ ಶಕ್ತಿ ಮತ್ತು ಸಹನೆಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಹಾಗೂ ಅಗಲಿದ ಆತ್ಮಕ್ಕೆ ಶಾಶ್ವತ ಶಾಂತಿ ನೀಡಲಿ ಎಂದು ಯೋಗಿ ಆದಿತ್ಯನಾಥ್ ಟ್ವಿಟ್ಟರ್‌(ಎಕ್ಸ್) ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊರದಾಬಾದ್‌ನಲ್ಲಿ 2014ರಲ್ಲಿ ಸರ್ವೇಶ್ ಸಿಂಗ್ ಗೆಲುವು ಸಾಧಿಸಿದ್ದರು.  ಆದರೆ 2019ರಲ್ಲಿ ಸಮಾಜವಾದಿ ಪಕ್ಷದ ಎಸ್‌ಟಿ ಹಸನ್ ವಿರುದ್ಧ ಸೋಲನುಭವಿಸಿದ್ದರು. ಈ ಲೋಕಸಭಾ ಕ್ಷೇತ್ರವೂ 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಬರ್ಹಾಪುರ, ಕಾಂತ್, ಠಾಕೂರ್‌ದ್ವಾರ, ಮೊರದಾಬಾದ್ ಗ್ರಾಮೀಣ, ಮೊರದಾಬಾದ್ ನಗರ ಈ 5 ವಿಧಾನಸಭಾ ಕ್ಷೇತ್ರಗಳಾಗಿವೆ. ಈ ಬಾರಿ ಈ ಕ್ಷೇತ್ರದಲ್ಲಿ ಇಂಡಿಯಾ ಮೈತ್ರಿ ಕೂಟವೂ  ಸಮಾಜವಾದಿ ಪಕ್ಷದಿಂದ ರುಚಿ ವೀರ್ ಅವರನ್ನು ಕಣಕ್ಕಿಳಿಸಿದೆ. ಮೃತ ಸರ್ವೇಶ್ ಕುಮಾರ್ ಅವರು ಪತ್ನಿ ಸಾಧನಾ ಸಿಂಗ್, ಮಗ ಹಾಗೂ ಮಗಳನ್ನು ಅಗಲಿದ್ದಾರೆ. ಮೊರದಾಬಾದ್ ಕ್ಷೇತ್ರದಲ್ಲಿ ಮೊದಲ ಹಂತದಲ್ಲೇ ಮತದಾನ ನಡೆದಿತ್ತು.

click me!