
ನವದೆಹಲಿ (ಅ.09) ದೇಶದಲ್ಲಿ ಈ ಬಾರಿ ಮಳೆ ಕೊರತೆ ತೀವ್ರವಾಗಿದೆ. ಇದರ ನಡುವೆ ಸೆಪ್ಟೆಂಬರ್ ಅಂತ್ಯ ಹಾಗೂ ಅಕ್ಟೋಬರ್ ತಿಂಗಳಲ್ಲಿನ ಮಳೆಯಿಂದ ಕೊಂಚ ಸಮಾಧಾನವಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂದು (ಅಕ್ಟೋಬರ್ 09) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಆದರೆ ಕರ್ನಾಟಕ, ಗೋವಾ, ತೆಲಂಗಾಣ, ಒಡಿಶಾ, ಮಹಾರಾಷ್ಟ್ರಗಳಲ್ಲಿ ಮುಂಗಾರು ಬಹುತೇಕ ಅಂತ್ಯಗೊಳ್ಳುತ್ತಿದೆ. ಹಾಗಂತ ಮಳೆ ಏಕಾಏಕಿ ನಿಲ್ಲುವುದಿಲ್ಲ, ಕೆಲ ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ನೈಋತ್ಯ ಮುಂಗಾರು ಹಿಂತೆಗೆ ಆರಂಭಗೊಂಡಿದೆ. ಆದರೂ ಕೆಲ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಮುಂಗಾರು ಹಿಂತೆಗೆದ ಆರಂಭಗೊಂಡರೂ ಉತ್ತರಖಂಡದಲ್ಲಿ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಸಿದೆ. ಉತ್ತರಖಂಡದಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಲಿದೆ. ಹರಿಯಾಣ, ಚಂಡಘಡ, ದೆಹಲಿ ಹಾಗೂ ಪಂಜಾಬ್‌ನಲ್ಲಿ ಅಕ್ಟೋಬರ್ 9 ರಿಂದ 14ರ ವರೆಗೆ ಸಾಧಾರಣ ಮಳೆಯಾಗಲಿದೆ ಎಂದು ಸೂಚಿಸಿದೆ.
ಉತ್ತರ ಪಾಕಿಸ್ತಾನದಲ್ಲಿ ತೀವ್ರ ಗಾಳಿ ಹಾಗೂ ಹಾವಾಮಾನ ವೈಪರಿತ್ಯ ಎದುರಾಗಿದೆ. ಇದರಿಂದ ಭಾರತದ ವಾಯುವ್ಯ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಗೆ ಕಾರಣವಾಗಬಹುದು. ಪ್ರಮುಖವಾಗಿ ಅಕ್ಟೋಬರ್ 9 ರಂದು ದಕ್ಷಿಣ ಭಾರತದ ಕೆಲ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕರ್ನಾಟಕದಲ್ಲಿ ಅಕ್ಟೋಬರ್ 9 ರಂದು ಮಳೆಯಾದರೆ, ತಮಿಳುನಾಡು, ಪುದುಚೇರಿ, ಕೇರಳ ಭಾಗದಲ್ಲಿ ಅಕ್ಟೋಬರ್ 10ರ ವರೆಗೆ ಮಳೆಯಾಗಲಿದೆ ಎಂದಿದೆ. ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶದಲ್ಲಿ ಅಕ್ಟೋಬರ್ 9 ಹಾಗೂ 10ರಂದು ಮಳೆಯಾಗಲಿದೆ ಎಂದಿದೆ.
ಮಳೆ ಕೊರತೆ ತೀವ್ರಗೊಳ್ಳುತ್ತಿದೆ. ಬಿಹಾರದಲ್ಲಿ ಅಕ್ಟೋಬರ್ 11ರ ವರೆಗೆ ಸಾಧಾರಣ ಮಳೆಯಾಗಲಿದೆ. ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್‌ನಲ್ಲಿ ಅಕ್ಟೋಬರ್ 9 ರಿಂದ 10ರವರೆಗೆ ಮಳೆಯಾಗಲಿದೆ. ಒಡಿಶಾದಲ್ಲಿ ಅಕ್ಟೋಬರ್ 14ರ ವರೆಗೆ ಮಳೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ