ಒಂದು ವಾರ ತಡವಾಗಿ ಕೊನೆಗೂ ಕೇರಳಕ್ಕೆ ಕಾಲಿಟ್ಟ ಮುಂಗಾರು: ಕೃಷಿ ಚಟುವಟಿಕೆಗಳಿಗೆ ಚಾಲನೆ

By Kannadaprabha NewsFirst Published Jun 9, 2023, 6:58 AM IST
Highlights

ಸಾಮಾನ್ಯವಾಗಿ ಜೂನ್‌ 1ಕ್ಕೆ ದೇಶಕ್ಕೆ ಕಾಲಿಡುವ ನೈಋುತ್ಯ ಮುಂಗಾರು ಈ ಬಾರಿ ಒಂದು ವಾರ ತಡವಾಗಿ ಕೊನೆಗೂ ಕೇರಳವನ್ನು ಪ್ರವೇಶಿಸಿದೆ. ಜೂನ್‌ 8ರಂದು ನಿನ್ನೆ ಕೇರಳಕ್ಕೆ ನೈಋುತ್ಯ (Southwest Monsoon) ಮುಂಗಾರಿನ ಆಗಮನವಾಗಿದೆ.

ನವದೆಹಲಿ: ಸಾಮಾನ್ಯವಾಗಿ ಜೂನ್‌ 1ಕ್ಕೆ ದೇಶಕ್ಕೆ ಕಾಲಿಡುವ ನೈಋುತ್ಯ ಮುಂಗಾರು ಈ ಬಾರಿ ಒಂದು ವಾರ ತಡವಾಗಿ ಕೊನೆಗೂ ಕೇರಳವನ್ನು ಪ್ರವೇಶಿಸಿದೆ. ಜೂನ್‌ 8ರಂದು ಕೇರಳಕ್ಕೆ ನೈಋುತ್ಯ (Southwest Monsoon) ಮುಂಗಾರಿನ ಆಗಮನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅದರೊಂದಿಗೆ ದೇಶದ ಕೃಷಿ ಚಟುವಟಿಕೆಗಳ ಜೀವನಾಡಿಯಾಗಿರುವ ಮಳೆ ಮಾರುತಗಳು ರೈತರ ಮುಖದಲ್ಲಿ ಹರ್ಷ ತಂದಿವೆ.

‘ಬಿಪರ್‌ಜಾಯ್‌’ ಚಂಡಮಾರುತದಿಂದಾಗಿ ಈ ಬಾರಿ ಮುಂಗಾರು ಮಾರುತಗಳ ತೀವ್ರತೆ ಕಡಿಮೆಯಿರಲಿದ್ದು, ಕೇರಳಕ್ಕೆ ‘ಸೌಮ್ಯವಾಗಿ’ ಆಗಮಿಸಲಿದೆ ಎಂದು ಈ ಹಿಂದೆ ಹವಾಮಾನ ಇಲಾಖೆ ಹೇಳಿತ್ತು. ಗುರುವಾರ ಮುಂಗಾರು ಆಗಮನದ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಹವಾಮಾನ ಇಲಾಖೆ, ‘ಕೇರಳಕ್ಕೆ ಇಂದು ಮುಂಗಾರು ಮಾರುತಗಳ ಆಗಮನವಾಗಿದೆ. ದಕ್ಷಿಣ ಅರಬ್ಬಿ ಸಮುದ್ರ ಹಾಗೂ ಕೇಂದ್ರ ಅರಬ್ಬಿ ಸಮುದ್ರದ ಕೆಲ ಭಾಗಗಳು, ಇಡೀ ಲಕ್ಷದ್ವೀಪ, ಕೇರಳದ ಬಹುಪಾಲು ಪ್ರದೇಶಗಳು, ದಕ್ಷಿಣ ತಮಿಳುನಾಡಿನ ಹೆಚ್ಚಿನ ಪ್ರದೇಶಗಳು, ಕೊಮೋರಿನ್‌ ಪ್ರದೇಶದ ಉಳಿದ ಭಾಗಗಳು, ಗಲ್ಫ್ ಆಫ್‌ ಮನ್ನಾರ್‌ ಹಾಗೂ ನೈಋುತ್ಯದ ಇನ್ನಷ್ಟು ಪ್ರದೇಶಗಳ ಮೇಲೆ ಮುಂಗಾರು ಮಾರುತಗಳು ಹರಡಿವೆ’ ಎಂದು ತಿಳಿಸಿದೆ.

Bengaluru Rain: ಅಬ್ಬರದ ಮಳೆ, ಎಚ್ಚರ ಎಂದ ಹವಾಮಾನ ಇಲಾಖೆ

ಕಳೆದ 150 ವರ್ಷಗಳಿಂದ ಕೇರಳಕ್ಕೆ ಮುಂಗಾರು ಮಾರುತಗಳು ಸಾಮಾನ್ಯವಾಗಿ ಜೂ.1ರ ಆಸುಪಾಸಿನಲ್ಲೇ ಪ್ರವೇಶಿಸುತ್ತಿವೆ. 1918ರಲ್ಲಿ ಮೇ 11ರಂದು ಹಾಗೂ 1972ರಲ್ಲಿ ಜೂ.18ರಂದು ಪ್ರವೇಶಿಸಿದ್ದು ಈವರೆಗಿನ ಅತ್ಯಂತ ದೊಡ್ಡ ವ್ಯತ್ಯಾಸವಾಗಿದೆ. ಕಳೆದ ವರ್ಷ ಮೇ 29ರಂದು ಮುಂಗಾರು ಪ್ರವೇಶವಾಗಿತ್ತು.

ರೈತರಿಗೆ ಶಾಕಿಂಗ್ ನ್ಯೂಸ್‌: ಜೂನ್‌ನಲ್ಲಿ ಕಡಿಮೆ ಮಳೆ ಸಾಧ್ಯತೆ; ಹವಾಮಾನ ಇಲಾಖೆ 

ಬಿಪೊರ್‌ಜೊಯ್‌ ಚಂಡ​ಮಾ​ರು​ತ: ಕರ್ನಾಟಕದಲ್ಲಿ 3 ದಿನ ಮಳೆ ಮುನ್ಸೂ​ಚ​ನೆ

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬಿಪೊರ್‌ಜೊಯ್‌ ಚಂಡಮಾರುತದಿಂದಾಗಿ ಕರ್ನಾಟದ ದಕ್ಷಿಣ ಒಳನಾಡು, ಕೇರಳ ಮತ್ತು ಅಂಡಮಾನ್‌ ನಿಕೋಬಾರ್‌ ದ್ವೀಪಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಲ್ಲದೇ ಲಕ್ಷದ್ವೀಪ, ತಮಿಳುನಾಡು, ಆಂಧ್ರಪ್ರದೇಶ, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ರಾಜಸ್ಥಾನ ರಾಜ್ಯಗಳಲ್ಲೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂದಿನ ಮೂರ್ನಾಲ್ಕು ದಿನಗಳ ಕಾಲ ಕರ್ನಾಟಕದ ದಕ್ಷಿಣ ಒಳನಾಡು, ಕೇರಳ ಮತ್ತು ಅಂಡಮಾನ್‌ ನಿಕೋಬಾರ್‌ ದ್ವೀಪಗಳಲ್ಲಿ ಭಾರಿ ಮಳೆಯಾಗಲಿದೆ. ಹಾಗೆಯೇ ಕರ್ನಾಟಕದ ಉತ್ತರ ಒಳನಾಡು, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ. ಜೂ.10ರಂದು ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಗುಡುಗು ಸಹಿತ ಮಳೆ ಹಾಗೂ ಪಶ್ಚಿಮ ರಾಜಸ್ಥಾನದಲ್ಲಿ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

click me!