ವಿಮಾನ ಪ್ರಯಾಣ ದರದಲ್ಲಿ ಭಾರೀ ಇಳಿಕೆ..!

By Kannadaprabha NewsFirst Published Jun 9, 2023, 2:00 AM IST
Highlights

ದೆಹಲಿಯಿಂದ ಶ್ರೀನಗರ, ಲೇಹ್‌, ಪುಣೆ ಮತ್ತು ಮುಂಬೈಗೆ ಹೋಗುವ ವಿಮಾನ ದರಗಳು ಕಡಿಮೆಯಾಗಿವೆ. ಟಿಕೆಟ್‌ ದರ ಶೇ.14ರಿಂದ 61ರಷ್ಟು ಕಡಿಮೆಯಾಗಿರುವುದನ್ನು ತಿಳಿಸಲು ಸಂತೋಷವಾಗುತ್ತದೆ ಎಂದ ಸಿಂಧಿಯಾ 

ನವದೆಹಲಿ(ಜೂ.09):  ದೇಶದಲ್ಲಿ ಏರಿಕೆಯಾಗಿದ್ದ ವಿಮಾನ ಪ್ರಯಾಣದ ದರಗಳು ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬಳಿಕ ಶೇ.14ರಿಂದ 61ರಷ್ಟುಕಡಿಮೆಯಾಗಿವೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗುರುವಾರ ಹೇಳಿದ್ದಾರೆ.

ಬೆಲೆಯನ್ನು ಏಕಾಏಕಿ ಏರಿಕೆ ಮಾಡದಂತೆ ಹಾಗೂ ನಿಯಂತ್ರಣದಲ್ಲಿಡುವಂತೆ ಜೂ.6ರಂದು ವಿಮಾನಯಾನ ನಿರ್ವಹಣಾ ಸಮಿತಿಯ ಜೊತೆ ಸಭೆ ನಡೆಸಿದ ಕೇಂದ್ರ ಸರ್ಕಾರ ಹಾಗೂ ಡಿಜಿಸಿಎ ಸೂಚನೆ ನೀಡಿದ್ದವು. ಇದಾದ ಬಳಿಕ ದೆಹಲಿಯಿಂದ ಶ್ರೀನಗರ, ಲೇಹ್‌, ಪುಣೆ ಮತ್ತು ಮುಂಬೈಗೆ ಹೋಗುವ ವಿಮಾನ ದರಗಳು ಕಡಿಮೆಯಾಗಿವೆ. ಟಿಕೆಟ್‌ ದರ ಶೇ.14ರಿಂದ 61ರಷ್ಟು ಕಡಿಮೆಯಾಗಿರುವುದನ್ನು ತಿಳಿಸಲು ಸಂತೋಷವಾಗುತ್ತದೆ ಎಂದು ಸಿಂಧಿಯಾ ಹೇಳಿದ್ದಾರೆ.

ದೆಹಲಿ ಏರ್‌ಪೋರ್ಟ್‌ನಲ್ಲಿ ಸಿಕ್ಕಾಪಟ್ಟೆ ಕ್ಯೂ: ದಿಢೀರ್‌ ಭೇಟಿ ಕೊಟ್ಟ ಕೆಂದ್ರ ಸಚಿವ..!

ವಿಮಾನ ಟಿಕೆಟ್‌ ದರವನ್ನು ನಿರ್ಧರಿಸುವ ಅಧಿಕಾರ ವಿಮಾನಯಾನ ಸಂಸ್ಥೆಗಳಿಗಿದ್ದು, ಇವು ಮಾರುಕಟ್ಟೆಯನ್ನು ಆಧರಿಸಿ ನಿರ್ಧರಿಸಲ್ಪಡುತ್ತವೆ. ಹಾಗಾಗಿ ಸಚಿವಾಲಯ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆಯೇ ಹೊರತು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅಲ್ಲ ಎಂದು ಅವರು ಹೇಳಿದ್ದಾರೆ.

click me!