ಫೋನ್‌ ಕಸಿದುಕೊಂಡು ಕಾಲ್‌ ರಿಸೀವ್‌ ಮಾಡಿದ ಕೋತಿ.. 'ಹಲೋ' ಅಂತಾ ಹೇಳೋದೊಂದ್‌ ಬಾಕಿ!

By Santosh Naik  |  First Published Dec 4, 2024, 1:29 PM IST

ಕೇರಳದ ತಿರೂರ್‌ನಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯ ಫೋನ್‌ಅನ್ನು ಮಂಗ ಎಗರಿಸಿದ್ದು ಮಾತ್ರವಲ್ಲ, ಸಲೀಸಾಗಿ ಆತನಿಗೆ ಬಂದ ಕಾಲ್‌ಅನ್ನು ರಿಸೀವ್‌ ಮಾಡಿದೆ.


ಮಲಪ್ಪುರಂ (ಡಿ.4): ಕೋತಿಗಳು ಮನುಷ್ಯನಿಗೆ ತೊಂದರೆ ಕೊಡುವ ದೃಶ್ಯಗಳು ಸಾಮಾನ್ಯವಾಗಿ ಸೋಶಿಯಲ್‌ ಮೀಡಿಯಾದಲ್ಲಿ ಕಾಣ ಸಿಗುತ್ತದೆ. ದೇವಸ್ಥಾನಗಳಲ್ಲಿ, ದೇವಸ್ಥಾನಕ್ಕೆ ಹೋಗುವ ದಾರಿಗಳಲ್ಲಿ ಸಾಮಾನ್ಯವಾಗಿ ಗುಂಪು ಗುಂಪಾಗಿರುವ ಕೋತಿಗಳು ಪರ್ಸ್‌ ಎಗರಿಸೋದು, ಅವರ ಆಹಾರ ಕಿತ್ತುಕೊಳ್ಳುವುದನ್ನು ಸಾಮಾನ್ಯವಾಗಿ ಮಾಡುತ್ತವೆ. ಇನ್ನೂ ಕೆಲವು ಕಡೆ ಮರ ಏರಿ ತೆಂಗಿನಕಾಯಿಗಳನ್ನು ಕೆಡವೋದು, ಬೆಳಗಳನ್ನು ಹಾಳು ಮಾಡೋವಂಥ ಕಿತಾಪತಿಗಳನ್ನೂ ಮಾಡುತ್ತವೆ. ಕೋತಿಗಳ ದೈನಂದಿನ ಕಿತಾಪತಿಗಳು ಇಲ್ಲಿಗೆ ಮುಗಿಯೋದಿಲ್ಲ. ಕೇರಳದ ತಿರೂರ್‌ನಲ್ಲಿ ಕೋತಿಯೊಂದು ಹೈಟೆಕ್‌ ಲೆವಲ್‌ನಲ್ಲಿ ತೊಂದರೆ ಕೊಟ್ಟಿದೆ. ಇದನ್ನು ನೀವೂ ಕೂಡ ನಂಬೋಕೆ ಸಾಧ್ಯವಿಲ್ಲ. ವ್ಯಕ್ತಿಯ ಮೊಬೈಲ್‌ಅನ್ನು ಮಂಗ ಕಸಿದುಕೊಂಡಿದ್ದು ಮಾತ್ರವಲ್ಲದೆ, ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ ಮೇಲೆ ಬೆರಳಾಡಿಸಿ, ಆತನಿಗೆ ಬರುತ್ತಿದ್ದ ಕಾಲ್‌ಅನ್ನೂ ರಿಸೀವ್‌ ಮಾಡಿದೆ.

ತಿರೂರ್‌ನ ಸಂಗಮಂ ರೆಸಿಡೆನ್ಸಿಯ ಮೇಲಿನ ಮಹಡಿಯಲ್ಲಿ ವ್ಯಕ್ತಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್‌ ಕೆಲಸ ಮಾಡುತ್ತಿದ್ದ ಯುವಕನ ಫೋನ್‌ಅನ್ನು ಮಂಗ ಕಸಿದುಕೊಂಡಿತ್ತು. ಕೆಲಸ ಮಾಡುವ ಸಮಯದಲ್ಲಿ ಫೋನ್‌ಅಲ್ಲಿ ಅಲ್ಲಿದ್ದ ಕಟ್ಟೆಯ ಮೇಲೆ ಇರಿಸಿದ್ದ. ಈ ಹಂತದಲ್ಲಿ ಅಲ್ಲಿಗೆ ಬಂದ ಕೋತಿ ಫೋನ್‌ಅನ್ನು ಎಗರಿಸಿ, ಸೀದಾ ತೆಂಗಿನ ಮರ ಏರಿತ್ತು.

Tap to resize

Latest Videos

ಈ ಹಂತದಲ್ಲಿ ಯುವಕ ಹಾಗೂ ಆತನ ಜೊತೆ ಕೆಲಸ ಮಾಡುತ್ತಿದ್ದ ಇತರರು ಫೋನ್‌ ವಾಪಾಸ್‌ ಪಡೆಯಲು ಸಾಕಷ್ಟು ಶ್ರಮವಹಿಸಿದ್ದಾರೆ. ಆದರೆ, ಕಿಡಿಗೇಡಿ ಮಂಗ ಅಲ್ಲಿಗೆ ನಿಲ್ಲದೆ, ಮರದಿಂದ ಮರಕ್ಕೆ ಏರುತ್ತಲೇ ಇತ್ತು. ಇದು ಫೋನ್‌ ವಾಪಾಸ್‌ ಪಡೆಯುವ ಪ್ರಯತ್ನವನ್ನು ಇನ್ನಷ್ಟು ಕಷ್ಟ ಮಾಡಿತ್ತು.

ಯುವಕ, ಅವನ ಸಹೋದ್ಯೋಗಿಗಳು ಮತ್ತು ಸ್ಥಳೀಯ ನಿವಾಸಿಗಳು ಭಯಭೀತರಾಗಿ ಫೋನ್ ಹಿಂಪಡೆಯಲು ಪ್ರಯತ್ನಿಸಿದರು, ಆದರೆ ಕಿಡಿಗೇಡಿ ಮಂಗವು ಅಲ್ಲಿಗೆ ನಿಲ್ಲದೆ, ಮೇಲಿನ ಕೊಂಬೆಗಳಿಗೆ ಏರುತ್ತಲೇ ಇತ್ತು, ಇದು ಫೋನ್ ಹಿಂಪಡೆಯುವ ಪ್ರಯತ್ನವನ್ನು ಇನ್ನಷ್ಟು ಕಷ್ಟಕರವಾಗಿಸಿತು. ಇಡೀ ಘಟನೆಯಲ್ಲಿ ಮಂಗನಿಂದ ವಾಪಾಸ್‌ ಫೋನ್‌ ಪಡೆಯಲು ಅಂದಾಜು ಒಂದು ಗಂಟೆ ಹಿಡಿದಿದೆ.

ಫೋನ್‌ಅನ್ನು ವಾಪಾಸ್‌ ಪಡೆದುಕೊಳ್ಳುವ ಮುನ್ನ ಸಾಕಷ್ಟು ಸರ್ಕಸ್‌ಗಳು ನಡೆದಿವೆ. ಎಷ್ಟೇ ಪ್ರಯತ್ನಪಟ್ಟರೂ ತಕ್ಷಣಕ್ಕೆ ಫೋನ್‌ ಪಡೆಯಲು ಸಾಧ್ಯವಾಗಿಲ್ಲ. ಅವರ ಪ್ರಯತ್ನಗಳ ನಡುವ, ಫೋನ್‌ ಒಮ್ಮೆ ರಿಂಗ್‌ ಕೂಡ ಆಯಿತು. ಈ ನಡುವೆ ಅಚ್ಚರಿ ಎನ್ನುವಂತೆ ಕೋತಿ ಬಟನ್‌ ಒತ್ತಿ ಫೋನ್‌ಅನ್ನು ಕಿವಿಗೆ ಹಿಡಿದಿಟ್ಟುಕೊಂಡಿತು. ಕೋತಿಯ ಚಾಣಾಕ್ಷತನ ಕಂಡು ಅಲ್ಲಿದ್ದವರೆಲ್ಲ ಒಮ್ಮೆ ದಂಗಾದರು. ಈ ವೇಳೆ ಮಂಗನಿಗೆ ಕಲ್ಲು ಎಸೆದು ಫೋನ್‌ ಪಡೆಯುವ ಹಲವಾರು ಪ್ರಯತ್ನಗಳನ್ನು ಮಾಡಲಾಯಿತು. ಆದರೆ, ಇದ್ಯಾವುದು ಫೋನ್‌ಅನ್ನು ಕೆಳಗೆ ಬೀಳಿಸುವಲ್ಲಿ ಯಶಸ್ವಿಯಾಗಲಿಲ್ಲ.

ನಟ ಧರ್ಮೇಂದ್ರನ 'ಸಂಸ್ಕಾರಿ' ಸೊಸೆ ಕಾಂಡೋಮ್ ಜಾಹೀರಾತಿನ ಮೂಲಕ ಸುದ್ದಿ ಮಾಡಿದ್ರು!

ಫೋನ್‌ ಪಡೆಯುವ ಭರವಸೆಗಳು ಕ್ಷೀಣಿಸುತ್ತಿರುವಾಗ, ಟೋಪಿ ಮಾರುವವ ಮತ್ತು ಮಂಗಗಳು ಕಥೆಯನ್ನು ಹೋಲುತ್ತಿತ್ತು. ಕೊನೆಗೆ ಮಂಗ ಫೋನ್‌ ವಾಪಾಸ್‌ ಕೊಡುವ ಸಾಧ್ಯತೇ ಇಲ್ಲ ಎನ್ನುವ ಪರಿಸ್ಥಿತಿ ಕೂಡ ನಿರ್ಮಾಣವಾಯಿತು. ಕಟ್ಟಕಡೆಯ ಪ್ರಯತ್ನ ಎನ್ನುವಂತೆ ಕಟ್ಟಡದ ನಿವಾಸಿಗಳು ಫೋನ್‌ ಪಡೆಯಲು ಮತ್ತೊಂದು ದೊಡ್ಡ ಪ್ರಯತ್ನ ಮಾಡಲು ಒಟ್ಟುಗೂಡಿದರು. ಈ ಹಂತದಲ್ಲಿ  ಮಂಗ ಮತ್ತೊಂದು ಮರಕ್ಕೆ ಹಾರುವ ಪ್ರಯತ್ನ ಮಾಡುವಾಗ ಫೋನ್‌ ನೆಲಕ್ಕೆ ಬಿದ್ದಿದೆ. ಗಂಟೆಗಟ್ಟಲೆ ಪ್ರಯತ್ನಿಸಿದ ನಂತರ, ಯುವಕ ಮತ್ತು ಅವನ ಸ್ನೇಹಿತರು ಕೊನೆಗೂ ಫೋನ್ ಅನ್ನು ಮರಳಿ ಪಡೆಯಲು ಸಾಧ್ಯವಾಯಿತು.

ಜೆಡಬ್ಲ್ಯು ಕೆಲ್ಲಿ ಅವರ ಸಹಿ ಇರುವ 1 ರೂಪಾಯಿ ನೋಟು ನಿಮ್ಮಲಿದ್ಯಾ? ಇದ್ದಲ್ಲಿ ಲಕ್ಷಾಧಿಪತಿ ಆಗಬಹುದು..

click me!