ಸ್ಕ್ರ್ಯಾಪ್‌ಗಳನ್ನು ಮಾರಿ ಎರಡು ಚಂದ್ರಯಾನ-3 ಯೋಜನೆಗೆ ಆಗುವಷ್ಟು ಹಣ ಸಂಪಾದಿಸಿದ ಮೋದಿ ಸರ್ಕಾರ!

By Santosh NaikFirst Published Dec 28, 2023, 5:46 PM IST
Highlights

ಬಳಕೆಯಲ್ಲಿ ಇಲ್ಲದ ವಾಹನಗಳು, ಅಗತ್ಯವಿಲ್ಲದ ಪೇಪರ್‌-ಫೈಲ್‌ಗಳು ಹಾಗೂ ಹಾಳಾದ ಕಚೇರಿಯ ಉಪಕರಣಗಳನ್ನು ಸ್ಕ್ರ್ಯಾಪ್‌ ಆಗಿ ಮಾರಾಟ ಮಾಡಿ ಕೇಂದ್ರ ಸರ್ಕಾರ ದೊಡ್ಡ ಮೊತ್ತದ ಹಣ ಗಳಿಸಿದೆ. ಎರಡು ಚಂದ್ರಯಾನ-3 ಯೋಜನೆಗೆ ಆಗುವಷ್ಟು ಹಣವನ್ನು ಇದರಿಂದ ಸಂಪಾದನೆ ಮಾಡಿದೆ. 
 

ನವದೆಹಲಿ (ಡಿ.28): ಭಾರತದ ಯಶಸ್ವಿ ಚಂದ್ರಯಾನ-3 ಮಿಷನ್‌ಗೆ ಸುಮಾರು 600 ಕೋಟಿ ರೂಪಾಯಿ ವೆಚ್ಚ ಮಾಡಿತ್ತು. ಅದರೆ, ನರೇಂದ್ರ ಮೋದಿ ಸರ್ಕಾರ ಇಂಥ ಎರಡು ಚಂದ್ರಯಾನ-3 ಯೋಜನೆಗಳನ್ನು ಮಾಡಲು ಸಾಧ್ಯವಾಗುವಷ್ಟು ಹಣವನ್ನು ಸ್ಕ್ರ್ಯಾಪ್‌ಗಳನ್ನು ಮಾರಾಟ ಮಾಡುವ ಮೂಲಕ ಸಂಪಾದಿಸಿದೆ. ಕೇಂದ್ರ ಸರ್ಕಾರದ ಸಚಿವಾಲಯದಲ್ಲಿದ್ದ ಅಂದಾಜು 96 ಲಕ್ಷಕ್ಕೂ ಅಧಿಕ ಅಗತ್ಯವಿಲ್ಲದ ಫೈಲ್‌ಗಳು, ಹಾಳಾಗಿರುವ ಕಚೇರಿಯ ಉಪಕರಣಗಳು ಹಾಗೂ ಬಳಕೆಯಲ್ಲಿ ಇಲ್ಲದ ವಾಹನಗಳನ್ನು ಮಾರಾಟ ಮಾಡುವ ಮೂಲಕ ಕೇಂದ್ರ ಸರ್ಕಾರ ಬರೋಬ್ಬರಿ 1163 ಕೋಟಿ ರೂಪಾಯಿ ಸಂಪಾದನೆ ಮಾಡಿದೆ. 2021ರಿಂದ ಸ್ಕ್ರ್ಯಾಪ್‌ಗೆ ಹಾಕಲಾಗಿದ್ದ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಿದ್ದರಿಂದ ಈ ಹಣ ಸಂಪಾದಿಸಲಾಗಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಒಂದು ಇಡೀ ತಿಂಗಳು ಇಂಥ ಅಗತ್ಯವಿಲ್ಲದ ವಸ್ತುಗಳನ್ನು ಮಾರಾಟ ಮಾಡುವ ಅಭಿಯಾನ ನಡೆಸಲಾಗಿತ್ತು. ಇದರಿಂದ 557 ಕೋಟಿ ರೂಪಾಯಿ ಸಂಪಾದನೆ ಮಾಡಿತ್ತು.

ಸರ್ಕಾರಿ ಕಚೇರಿಗಳಲ್ಲಿ 355 ಲಕ್ಷ ಚದರ ಅಡಿ ಜಾಗ ಖಾಲಿ: ಅಕ್ಟೋಬರ್ 2021 ರಿಂದ ಕೇಂದ್ರ ಸರ್ಕಾರಿ ಕಚೇರಿಗಳಿಂದ 96 ಲಕ್ಷ ಭೌತಿಕ ಕಡತಗಳನ್ನು ತೆಗೆದುಹಾಕಲಾಗಿದೆ. ಜಂಕ್ ಅನ್ನು ತೆಗೆದುಹಾಕಿದ್ದರಿಂದ ಸರ್ಕಾರಿ ಕಚೇರಿಗಳಲ್ಲಿ ಸುಮಾರು 355 ಲಕ್ಷ ಚದರ ಅಡಿ ಜಾಗವನ್ನು ಖಾಲಿ ಮಾಡಲಾಗಿದೆ. ಇದರಿಂದಾಗಿ ಕಚೇರಿಗಳಲ್ಲಿನ ಕಾರಿಡಾರ್‌ಗಳನ್ನು ಸ್ವಚ್ಛಗೊಳಿಸಲಾಗಿದೆ. ಖಾಲಿ ಜಾಗವನ್ನು ಮನರಂಜನಾ ಕೇಂದ್ರಗಳು ಮತ್ತು ಇತರ ಉದ್ದೇಶಗಳಿಗೆ ಬಳಸಲಾಗುತ್ತಿದೆ.

ರಷ್ಯಾದ ವಿಫಲ ಚಂದ್ರಯಾನದ ವೆಚ್ಚ 16,000 ಕೋಟಿ ರೂಪಾಯಿ ಎಂದು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದರು. ಭಾರತದ ಚಂದ್ರಯಾನ-3 ಮಿಷನ್‌ನ ವೆಚ್ಚ ಸುಮಾರು 600 ಕೋಟಿ ರೂ. ಚಂದ್ರ ಮತ್ತು ಬಾಹ್ಯಾಕಾಶ ಯಾತ್ರೆಗಳನ್ನು ಆಧರಿಸಿದ ಹಾಲಿವುಡ್ ಚಿತ್ರಗಳಿಗೂ 600 ಕೋಟಿಗೂ ಅಧಿಕ ವೆಚ್ಚವಾಗಿತ್ತು. ಇದೇ ಅಂದಾಜಿನಲ್ಲಿ ಹೇಳುವುದಾದರೆ, ಎರಡು ಚಂದ್ರಯಾನ-3ಗೆ ಯೋಜನೆಗೆ ಆಗುವಷ್ಟು ಹಣವನ್ನು ಭಾರತ ಸ್ಕ್ರ್ಯಾಪ್‌ಗಳನ್ನು ಮಾರಾಟ ಮಾಡಿ ಸಂಪಾದನೆ ಮಾಡಿದೆ.

Latest Videos

ಸ್ಕ್ರ್ಯಾಪ್ ಮಾರಾಟದಿಂದ ಯಾವ ಸಚಿವಾಲಯ ಹೆಚ್ಚು ಗಳಿಸಿದೆ: ಕೇಂದ್ರ ಸರ್ಕಾರವು 2023 ರಲ್ಲಿ ಸ್ಕ್ರ್ಯಾಪ್ ಅನ್ನು ಮಾರಾಟ ಮಾಡುವ ಮೂಲಕ 556 ಕೋಟಿ ರೂಪಾಯಿಗಳನ್ನು ಗಳಿಸಿದೆ. ರೈಲ್ವೆ ಸಚಿವಾಲಯವು ಹೆಚ್ಚು ಗಳಿಸಿದೆ. ಇದು ಸುಮಾರು 225 ಕೋಟಿ ಮೌಲ್ಯದ ಸ್ಕ್ರ್ಯಾಪ್ ಅನ್ನು ಮಾರಾಟ ಮಾಡಿದೆ. ಇನ್ನು ಸ್ಕ್ರ್ಯಾಪ್‌ನಿಂದ ಹಣ ಗಣೀಸಿದ ಇತರ ಪ್ರಮುಖ ಸಚಿವಾಲಯಗಳೆಂದರೆ, ರಕ್ಷಣಾ ಸಚಿವಾಲಯ (168 ಕೋಟಿ ರೂಪಾಯಿ), ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (ರೂ. 56 ಕೋಟಿ) ಮತ್ತು ಕಲ್ಲಿದ್ದಲು ಸಚಿವಾಲಯ (ರೂ. 34 ಕೋಟಿ). ಈ ವರ್ಷ ಒಟ್ಟು 164 ಲಕ್ಷ ಚದರ ಅಡಿ ಜಾಗವನ್ನು ಸ್ಕ್ರ್ಯಾಪ್ ತೆಗೆಯುವ ಮೂಲಕ ತೆರವು ಮಾಡಲಾಗಿದೆ. ಕಲ್ಲಿದ್ದಲು ಸಚಿವಾಲಯದಲ್ಲಿ ಗರಿಷ್ಠ 66 ಲಕ್ಷ ಚದರ ಅಡಿ ಮತ್ತು ಭಾರೀ ಕೈಗಾರಿಕೆ ಸಚಿವಾಲಯದಲ್ಲಿ 21 ಲಕ್ಷ ಚದರ ಅಡಿ ಜಾಗವನ್ನು ಖಾಲಿ ಮಾಡಲಾಗಿದೆ, ನಂತರ ರಕ್ಷಣಾ ಸಚಿವಾಲಯದಲ್ಲಿ 19 ಲಕ್ಷ ಚದರ ಅಡಿ ಜಾಗವನ್ನು ಖಾಲಿ ಮಾಡಲಾಗಿದೆ.

ಬರೀ 9 ತಿಂಗಳಲ್ಲೇ 5 ಕೋಟಿಯ ಹೂಡಿಕೆಗೆ 27 ಕೋಟಿ ರಿಟರ್ನ್ಸ್ ಪಡೆದ ಸಚಿನ್‌ ತೆಂಡುಲ್ಕರ್!

2023 ರಲ್ಲಿ ಸುಮಾರು 24 ಲಕ್ಷ ಫೈಲ್‌ಗಳನ್ನು ಸ್ಕ್ರ್ಯಾಪ್‌ಗೆ ಹಾಕಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಗರಿಷ್ಠ ಸಂಖ್ಯೆಯ ಫೈಲ್‌ಗಳನ್ನು ಅಳಿಸಲಾಗಿದೆ (3.9 ಲಕ್ಷ ಫೈಲ್‌ಗಳು). ತರುವಾಯ ಸೇನಾ ವ್ಯವಹಾರಗಳ ಇಲಾಖೆಯಲ್ಲಿನ ಕಡತಗಳನ್ನು (3.15 ಲಕ್ಷ ಕಡತಗಳು) ತೆಗೆದುಹಾಕಲಾಗಿದೆ. ಸ್ವಚ್ಛತಾ ಅಭಿಯಾನದ ಪ್ರಭಾವದಿಂದಾಗಿ ಸರ್ಕಾರದಲ್ಲಿ ಒಟ್ಟಾರೆ ಇ-ಫೈಲ್ ಅಳವಡಿಕೆ ಪ್ರಮಾಣವು ಸುಮಾರು 96% ತಲುಪಿದೆ.

ರಾಜಕೀಯ ಆಯ್ತು, ಐಟಿ ಇಂಡಸ್ಟ್ರೀಯಲ್ಲೂ ಕಿಡಿ ಹೊತ್ತಿಸಿದ 'ಆಪರೇಷನ್‌', ಇನ್ಫೋಸಿಸ್‌-ಕಾಗ್ನಿಜೆಂಟ್‌ ಫೈಟ್‌!

click me!