
ದೋಹಾ (ಡಿ.28): ದಹ್ರಾ ಗ್ಲೋಬಲ್ ಪ್ರಕರಣದಲ್ಲಿ ಎಂಟು ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಗೆ ನೀಡಿದ್ದ ಮರಣದಂಡನೆ ಶಿಕ್ಷೆಯನ್ನು ಗುರುವಾರ ಕತಾರ್ ಮೇಲ್ಮನವಿ ನ್ಯಾಯಾಲಯವು ರದ್ದುಗೊಳಿಸಿತು. ಮರಣದಂಡನೆ ಶಿಕ್ಷೆಯನ್ನು ಜೈಲು ಶಿಕ್ಷೆಯಾಗಿ ಪರಿವರ್ತಿಸಲಾಗಿದೆ. ಈ ಕುರಿತಾದ ವಿವರವಾದ ತೀರ್ಪಿಗೆ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ವ್ಯವಹಾರಗಳ ಇಲಾಖೆಯ ಕಾಯುತ್ತಿದೆ. ಈ ನಡುವೆ ಎರಡೂ ಕಚೇರಿಗಳು ಮಾಜಿ ನೌಕಾಪಡೆಯ ನಾವಿಕರ ಕಾನೂನು ತಂಡ ಮತ್ತು ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದೆ. "ಈ ಪ್ರಕರಣದ ವಿಚಾರಣೆಯ ಗೌಪ್ಯ ಮತ್ತು ಸೂಕ್ಷ್ಮ ಸ್ವರೂಪದ ಕಾರಣ, ಈ ಹಂತದಲ್ಲಿ ಯಾವುದೇ ಹೆಚ್ಚಿನ ಕಾಮೆಂಟ್ ಮಾಡುವುದು ಸೂಕ್ತವಲ್ಲ" ಎಂದು ಎಂಇಎ ತಿಳಿಸಿದೆ. ಡಿಸೆಂಬರ್ 4 ರಂದು ಕತಾರ್‌ನ ಪ್ರೀಮಿಯರ್ ಭೇಟಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಚರ್ಚೆ ಮಾಡಿದ್ದರು ಎಂದು ವರದಿಯಾಗಿದೆ. ಈ ನಡುವೆ ಗಲ್ಲು ಶಿಕ್ಷೆ ತಪ್ಪಿಸಿಕೊಂಡಿರುವ ಎಂಟು ಮಂದಿ ಯಾರೆನ್ನುವ ಕುತೂಹಲ ಎಲ್ಲರಲ್ಲೂ ಇದೆ. ಇವರ ಪೈಕಿ 7 ಮಂದಿ ಮಾಜಿ ಅಧಿಕಾರಿಗಳಾಗಿದ್ದರೆ, ಒಬ್ಬರು ಸೈಲರ್ ಆಗಿದ್ದಾರೆ.
ಅಧಿಕಾರಿಗಳ ಪೈಕಿ ಒಬ್ಬರು ಒಬ್ಬರು ನೌಕಾ ಅಕಾಡೆಮಿಯಿಂದ ಪದವಿ ಪಡೆದಾಗ ಮತ್ತು ನಂತರ ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿರುವ ಪ್ರತಿಷ್ಠಿತ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ (DSSC) ಬೋಧಕರಾಗಿ ಸೇವೆ ಸಲ್ಲಿಸಿದಾಗ ತಮ್ಮ ಶ್ರೇಷ್ಠ ಸೇವೆಗಾಗಿ ರಾಷ್ಟ್ರಪತಿಗಳ ಚಿನ್ನದ ಪದಕವನ್ನು ಪಡೆದವರಾಗಿದ್ದಾರೆ. ಇನ್ನೊಬ್ಬ ವ್ಯಕ್ತಿ, ವಿಮಾನವಾಹಕ ನೌಕೆ INS ವಿರಾಟ್‌ನಲ್ಲಿ ಫೈಟರ್ ಕಂಟ್ರೋಲರ್ ಮತ್ತು ನ್ಯಾವಿಗೇಟಿಂಗ್ ಅಧಿಕಾರಿಯಾಗಿದ್ದವರು. ಇನ್ನೊಬ್ಬ ಅಧಿಕಾರಿಗೆ ನಾಲ್ಕು ವರ್ಷಗಳ ಹಿಂದೆ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಗಿತ್ತು. ಭಾರತೀಯ ಸಶಸ್ತ್ರ ಪಡೆಗಳಿಂದ ಮೊದಲ ಬಾರಿಗೆ ಅನಿವಾಸಿ ಭಾರತೀಯರು/ಭಾರತೀಯ ಮೂಲದ ವ್ಯಕ್ತಿಗಳಿಗೆ ಅತ್ಯುನ್ನತ ಗೌರವವನ್ನು ನೀಡಲಾಗಿತ್ತು.
ಕತಾರ್‌ನ ನ್ಯಾಯಾಲಯವು ಮರಣದಂಡನೆ ವಿಧಿಸಿದ್ದ ಏಳು ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳು ನೌಕಾಪಡೆ ಮತ್ತು ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದ ಅತ್ಯುತ್ತಮ ಅಧಿಕಾರಿಗಳು ಎಂದು ಅವರಲ್ಲಿ ಐವರೊಂದಿಗೆ ಸೇವೆ ಸಲ್ಲಿಸಿದ ಮಾಜಿ ನೌಕಾಪಡೆಯ ವಕ್ತಾರ ಕ್ಯಾಪ್ಟನ್ ಡಿಕೆ ಶರ್ಮಾ ಈ ಹಿಂದೆ ಹೇಳಿದ್ದರು. ಮರಣದಂಡನೆಗೆ ಗುರಿಯಾದ ಎಂಟನೇ ವ್ಯಕ್ತಿ ನೌಕಾಪಡೆಯಲ್ಲಿ ನಾವಿಕರಾಗಿದ್ದಾರೆ. 'ಆ ಏಳೂ ಮಂದಿ ಅಧಿಕಾರಿಗಳು ಅತ್ಯಂತ ವೃತ್ತಿಪರರು. ಭಾರತೀಯ ನೇವಿಯ ಶ್ರೇಷ್ಠ ನಾಯಕರು. ಒಬ್ಬರು ನನಗಿಂತ ಸೀನಿಯರ್ ಆಗಿದ್ದರು. ಇನ್ನೊಬ್ಬರು ನನ್ನ ಸಹಪಾಠಿ. ಉಳಿದವರು ನನ್ನ ಜೂನಿತರ್ ಆಗಿದ್ದರು' ಎಂದು 2019ರಲ್ಲಿ ನಿವೃತ್ತರಾಗಿರುವ ಡಿಕೆ ಶರ್ಮ ಹೇಳಿದ್ದಾರೆ. ಈ ಎಂಟೂ ಮಂದಿ ಅಲ್ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್‌ನ ಉದ್ಯೋಗಿಗಳಾಗಿದ್ದು, ಕತಾರ್‌ನ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ತರಬೇತಿ ಮತ್ತು ಇತರ ಸೇವೆಗಳನ್ನು ಒದಗಿಸುವ ಖಾಸಗಿ ಸಂಸ್ಥೆ ಇದಾಗಿದೆ. ಅವರನ್ನು ಆಗಸ್ಟ್ 2022 ರಿಂದ ಅನಿರ್ದಿಷ್ಟ ಆರೋಪಗಳ ಮೇಲೆ ಬಂಧಿಸಲಾಗಿತ್ತು.
ಮರಣದಂಡನೆಗೆ ಗುರಿಯಾದವರಲ್ಲಿ ನಿವೃತ್ತ ನಾಯಕ ನವತೇಜ್ ಗಿಲ್, ಡಿಕೆ ಶರ್ಮಾ ಅವರ ಕೋರ್ಸ್-ಮೇಟ್. ಇವರು ನಿವೃತ್ತ ಸೇನಾಧಿಕಾರಿಯೊಬ್ಬರ ಪುತ್ರರಾಗಿದ್ದು, ಚಂಡೀಗಢ ಮೂಲದವರು. “ಅತ್ಯುತ್ತಮ ಕೆಡೆಟ್‌ಗಾಗಿ ರಾಷ್ಟ್ರಪತಿಗಳ ಚಿನ್ನದ ಪದಕವನ್ನು ಅವರಿಗೆ ನೀಡಲಾಗಿತ್ತು. ಅವರು ಡಿಎಸ್‌ಎಸ್‌ಸಿಯಲ್ಲಿ ಬೋಧಕರೂ ಆಗಿದ್ದರು' ಎಂದು ಶರ್ಮಾ ಹೇಳಿದ್ದಾರೆ.
ಕಮಾಂಡರ್ ಪೂರ್ಣೇಂದು ತಿವಾರಿ (ನಿವೃತ್ತ) ಶರ್ಮಾ ಅವರ ಹಿರಿಯರಾಗಿದ್ದರು. “ಅವರು ನ್ಯಾವಿಗೇಷನ್ ಅಧಿಕಾರಿಯಾಗಿದ್ದರು ಮತ್ತು ಉಭಯಚರ ಯುದ್ಧನೌಕೆ INS ಮಗರ್‌ನ ಆದೇಶಕರಾಗಿದ್ದರು. ವಿದೇಶದಲ್ಲಿ ಭಾರತದ ಇಮೇಜ್ ಅನ್ನು ಹೆಚ್ಚಿಸಿದ್ದಕ್ಕಾಗಿ ತಿವಾರಿ ಅವರಿಗೆ ಜನವರಿ 2019 ರಲ್ಲಿ ರಾಷ್ಟ್ರಪತಿಗಳಿಂದ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ-2019 ನೀಡಿ ಗೌರವಿಸಲಾಗಿತ್ತು. ಕತಾರ್ ಎಮಿರಿ ನೌಕಾ ಪಡೆಗಳಿಗೆ ಸಾಮರ್ಥ್ಯ ವೃದ್ಧಿಗಾಗಿ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿತ್ತು.
ಭಾರತಕ್ಕೆ ರಾಜತಾಂತ್ರಿಕ ಗೆಲುವು, ನೌಕಾಸೇನೆ ಮಾಜಿ ಅಧಿಕಾರಿಗಳ ಗಲ್ಲುಶಿಕ್ಷೆ ರದ್ದುಗೊಳಿಸಿದ ಕತಾರ್!
ಕಮಾಂಡರ್‌ಗಳಾದ ಅಮಿತ್ ನಾಗ್‌ಪಾಲ್, ಎಸ್‌ಕೆ ಗುಪ್ತಾ ಮತ್ತು ಕ್ಯಾಪ್ಟನ್ ಬಿಕೆ ವರ್ಮಾ ಎಲ್ಲರೂ ಶರ್ಮಾ ಅವರ ಕಿರಿಯವರಾಗಿದ್ದು ಮಾತ್ರವಲ್ಲದೆ ಸೇವೆಯಿಂದ ನಿವೃತ್ತರೂ ಆಗಿದ್ದರು. ನಾಗ್ಪಾಲ್ ಸಂವಹನ ಮತ್ತು ಎಲೆಕ್ಟ್ರಾನಿಕ್ ವಾರ್ಫೇರ್ ಸ್ಪೆಷಲಿಸ್ಟ್ ಆಗಿದ್ದರು, ಗುಪ್ತಾ ಗನ್ನರಿ ತಜ್ಞ ಮತ್ತು ವರ್ಮಾ ನ್ಯಾವಿಗೇಷನ್ ಮತ್ತು ನಿರ್ದೇಶನದಲ್ಲಿ ಪರಿಣತಿ ಹೊಂದಿದ್ದರು. ಬಿಕೆ ವರ್ಮಾ ಮತ್ತು ಅವರ ಪತ್ನಿ ಮಿಲಿಟರಿ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಮರಣದಂಡನೆಗೆ ಗುರಿಯಾದ ಇತರ ಇಬ್ಬರೆಂದರೆ, ಕ್ಯಾಪ್ಟನ್ ಸೌರಭ್ ವಸಿಷ್ಟ್ (ನಿವೃತ್ತ) ಮತ್ತು ಕಮಾಂಡರ್ ಸುಗುಣಾಕರ್ ಪಕಲಾ (ನಿವೃತ್ತ), ನೌಕಾಪಡೆಯಲ್ಲಿ ತಾಂತ್ರಿಕ ಅಧಿಕಾರಿಗಳಾಗಿದ್ದರು. ಮರಣದಂಡನೆಗೆ ಗುರಿಯಾಗಿದ್ದ ಏಕೈಕ ಸೈಲರ್‌ನ ಹೆಸರು ರಾಗೇಶ್ ಆಗಿದೆ.
ಬೇಹುಗಾರಿಕೆ ಆರೋಪದಲ್ಲಿ ಬಂಧಿತರಾಗಿದ್ದ 8 ಭಾರತೀಯ Navy ಅಧಿಕಾರಿಗಳಿಗೆ ಕತಾರ್‌ನಿಂದ ಗಲ್ಲು ಶಿಕ್ಷೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ