ದ್ವೇಷ ಕಾರಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮುಯಿಜು ಪಕ್ಕದಲ್ಲೇ ಕೂತು ಮೋದಿ ಔತಣ ಕೂಟ

By Kannadaprabha News  |  First Published Jun 11, 2024, 1:11 PM IST

ಭಾರತದ ವಿರುದ್ಧ ಸತತ ದ್ವೇಷಕಾರಿದ ಹೊರತಾಗಿಯೂ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರಿಗೆ ಪ್ರಧಾನಿ ಮೋದಿ ಆದರದ ಆತಿಥ್ಯ ನೀಡಿ ಗಮನ ಸೆಳೆದಿದ್ದಾರೆ.


ನವದೆಹಲಿ: ಭಾರತದ ವಿರುದ್ಧ ಸತತ ದ್ವೇಷಕಾರಿದ ಹೊರತಾಗಿಯೂ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರಿಗೆ ಪ್ರಧಾನಿ ಮೋದಿ ಆದರದ ಆತಿಥ್ಯ ನೀಡಿ ಗಮನ ಸೆಳೆದಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷರಾದ ದಿನದಿಂದಲೂ ಮುಯಿಜು ಭಾರತದ ವಿರುದ್ಧ ದ್ವೇಷ ಕಾರುತ್ತಲೇ ಬಂದಿದ್ದರು. ಆದರೂ ಅವರನ್ನು ಮೋದಿ ತಮ್ಮ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಜೊತೆಗೆ ಪ್ರಮಾಣ ವಚನ ಕಾರ್ಯಕ್ರಮ ಮುಗಿದ ಬಳಿಕ ಗಣ್ಯರಿಗೆ ಆಯೋಜಿಸಿದ್ದ ಔತಣ ಕೂಟದ ವೇಳೆ ಮುಯಿಜು ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.

ವಾರದ ಬಳಿಕ ಮೋದಿಗೆ ಪಾಕ್ ಶುಭ
ಇಸ್ಲಾಮಾಬಾದ್‌: ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸೋಮವಾರ ಅಭಿನಂದನೆ ತಿಳಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಷರೀಫ್, 'ಸತತ ಮೂರನೇ ಬಾರಿಯೂ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು' ಎಂದು ಪೋಸ್ಟ್ ಮಾಡಿದ್ದಾರೆ. ನವದೆಹಲಿಯಲ್ಲಿ ಭಾನುವಾರ ನಡೆದ ಪ್ರಮಾಣವಚನ ಸಮಾರಂಭಕ್ಕೆ ಭಾರತದ ನೆರೆಹೊರೆಯ ರಾಷ್ಟ್ರಗಳ ಪ್ರಧಾನಿಗಳನ್ನು ಹಾಗೂ ಮುಖ್ಯಸ್ಥರನ್ನು ಆಹ್ವಾನಿಸಿದ್ದು, ಪಾಕಿಸ್ತಾನ ಪ್ರಧಾನಿಯನ್ನು ಆಹ್ವಾನಿಸಿರಲಿಲ್ಲ. ಜೂ.4ರಂದು ಫಲಿತಾಂಶ ಹೊರಬಿದ್ದು ಮೋದಿ ಪ್ರಧಾನಿಯಾಗುವುದು ಖಚಿತವಾಗುತ್ತಲೇ ವಿಶ್ವದ ಬಹುತೇಕ ನಾಯಕರು, ಮೋದಿಗೆ ಅಭಿನಂದನೆ ಸಲ್ಲಿಸಿದ್ದರಾದರೂ, ಪಾಕಿಸ್ತಾನ ಮಾತ್ರ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶುಭ ಹಾರೈಸಿದೆ. ಇದಕ್ಕೆ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

Latest Videos

undefined

ದ್ವೀಪ ದೇಶಕ್ಕೆ ಹೆಚ್ಚುತ್ತಿರುವ ಚೀನಾ ಸಾಲ: ಮಾಲ್ಡೀವ್ಸ್‌ಗೆ ಐಎಂಎಫ್‌ ಎಚ್ಚರಿಕೆ

ಸಂಘರ್ಷವಿದ್ದರೂ ಮಾಲ್ಡೀವ್ಸ್‌ಗೆ ಭಾರತದಿಂದ 420 ಕೋಟಿ ನೆರವು

click me!